ಲೋಕದರ್ಶನ ವರದಿ
ವಿಜಯಪುರ 09: ಗೃಹ ಸಚಿವ ಎಂ.ಬಿ.ಪಾಟೀಲ್ರವರು ಸಚಿವರಾಗಿ 2ನೇ ಬಾರಿಗೆ ವಿಜಯಪುರಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕೊತರ್ಿ-ಕೋಲ್ಹಾರದ ಕೃಷ್ಣಾ ನದಿಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದ, ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಪೂಜ್ಯ ಸಿದ್ದೇಶ್ವರ ಶ್ರೀಗಳನ್ನು ಕಂಡು, ತಮ್ಮ ವಾಹನ ನಿಲ್ಲಿಸಿ ಶ್ರೀಗಳನ್ನು ಭೇಟಿಯಾದ ಸಂದರ್ಭದಲ್ಲಿ ಶ್ರೀಗಳು ನೀರಿನ ಕೆಲಸವನ್ನೇ ನೀವು ಮುಂದುವರಿಸಿ ಎಂದು ಹೇಳಿದ ಘಟನೆ ಇಂದು ಜರುಗಿತು.
ಬೀಳಗಿ ಹಿರೇಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿಜಯಪುರಕ್ಕೆ ಮರಳುತ್ತಿದ್ದ ಸಿದ್ದೇಶ್ವರ ಶ್ರೀಗಳು ಕೃಷ್ಣಾ ಸೇತುವೆ ಮೇಲೆ ವಾಹನ ನಿಲ್ಲಿಸಿ, ನದಿಯ ದೃಶ್ಯವನ್ನು ಸವಿಯುತ್ತ ಸೇತುವೆಯ ಮೇಲೆ ನಡೆದುಕೊಂಡು ಬರುತ್ತಿದ್ದರು. ಮಧ್ಯಾಹ್ನ 2ಗಂಟೆಗೆ ಆಕಸ್ಮಿಕವಾಗಿ ಅದೇ ಸಮಯಕ್ಕೆ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ರವರು ಶ್ರೀಗಳನ್ನು ನೋಡಿದಾಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ, ಶ್ರೀಗಳ ಬಳಿ ಹೋಗಿ ಆಶೀವರ್ಾದ ಪಡೆದು ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಸಚಿವರ ಆರೋಗ್ಯ ವಿಚಾರಿಸಿದ ಶ್ರೀಗಳು, ನೀರಾವರಿ ಕೆಲಸಗಳು ಹೇಗೆ ನಡೆಯುತ್ತಿವೆ? ಎಂದು ಕೇಳಿದರು. "ಅಪ್ಪಾ ಅವರೇ, ಈಗ ನಾನು ಗೃಹ ಸಚಿವ, ನೀರಾವರಿ ಸಚಿವನಲ್ಲ ಎಂದು ಸಚಿವ ಪಾಟೀಲ್ ಉತ್ತರಿಸಿದರು. ತಕ್ಷಣವೇ ಶ್ರೀಗಳು "ನೀವು ಮಾಡಿರುವ ನೀರಾವರಿ ಕೆಲಸ ಶಾಶ್ವತವಾದುದು, ಈಗಾಗಲೇ ನೀರಾವರಿಗಾಗಿ ಮಾಡಿದ ಕಾರ್ಯ ದೊಡ್ಡದಿದೆ. ಆದ್ದರಿಂದ ಎಲ್ಲಿದ್ದರೂ ಸದಾ ನೀರಾವರಿಗಾಗಿ ನಿಮ್ಮ ಕಾರ್ಯ ಮುಂದುವರೆಸಿ. ನೀರು ಪುಣ್ಯದ ಕಾರ್ಯ, ನೀರಿನೊಂದಿಗೆ ನಿಮ್ಮ ಹೆಸರು ಸದಾ ಇರುತ್ತದೆ" ಎಂದರು. ನಂತರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿಗಳ ಕುರಿತು ಸಚಿವರಿಂದ ಮಾಹಿತಿ ಪಡೆದ ಶ್ರೀಗಳು ಭೂಸ್ವಾಧೀನ ಹಾಗೂ ಭೂಪರಿಹಾರ ಕುರಿತು ಏನೇನು ಕಾರ್ಯ ಆಗುತ್ತಿದೆ? ಎಂದು ಕೇಳಿದರು. ಈ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಪುನರ್ವಸತಿ ಮತ್ತು ಪುನರ್ನಿಮರ್ಾಣ ಕಾರ್ಯಕ್ಕಾಗಿ ಮೂರು ಹಂತಗಳಲ್ಲಿ ರೂಪುರೇಷೆ ಸಿದ್ದಪಡಿಸಲಾಗುತ್ತಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಸವಿವರವಾಗಿ ಚಚರ್ೆ ಮಾಡಲಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.
ಗೃಹ ಸಚಿವನಾಗಿ ಎರಡನೇಯ ಬಾರಿಗೆ ನನ್ನ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕೃಷ್ಣಾ ನದಿಯ ಮೇಲೆಯೇ ಶ್ರೀಗಳ ದರ್ಶನ ಹಾಗೂ ಮಾರ್ಗದರ್ಶನ ದೊರೆತಿರುವದು ನನ್ನ ಸೌಭಾಗ್ಯ ಎಂದಿರುವ ಸಚಿವ ಎಂ.ಬಿ.ಪಾಟೀಲ್ ನೀರಾವರಿ ಹಾಗೂ ರೈತಾಪಿ ಜನರ ಕುರಿತು ಶ್ರೀಗಳ ಕಳಕಳಿ, ಕಾಳಜಿಯನ್ನು ಕೊಂಡಾಡಿದ ಅವರು, ನಮ್ಮ ಸಮಿಶ್ರ ಸಕರ್ಾರ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ನಾನೂ ಕೂಡಾ ಶ್ರೀಗಳ ಆಶಯದಂತೆ ಸದಾ ನೀರಾವರಿಗಾಗಿ ಸದಾ ಶ್ರಮಿಸುತ್ತೇನೆ ಎಂದು ತಮ್ಮ ಸಂತೋಷವನ್ನು ತಮ್ಮ ಆಪ್ತವಲಯದಲ್ಲಿ ಹಂಚಿಕೊಂಡರು.