ಹಾವೇರಿ 18: ಸಹಕಾರಿ ಕ್ಷೇತ್ರಗಳ ವ್ಯಾಜ್ಯ ಪರಿಹಾರಕ್ಕಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗೆ ಸಕರ್ಾರದ ಕಾರ್ಯದಶರ್ಿಗಳ ಹಂತದಲ್ಲಿ ಚಚರ್ಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ಸಹಕಾರ ಇಲಾಖೆ ಸಚಿವರಾದ ಬಂಡೆಪ್ಪ ಕಾಶೆಂಪೂರ ಅವರು ಹೇಳಿದರು.
ರವಿವಾರ ಕಾಗಿನೆಲೆಯ ಕನಕ ಕಲಾಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕನರ್ಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ, ಕನರ್ಾಟಕ ರಾಜ್ಯ ಸಹಕಾರ ಚಲನಚಿತ್ರ ಮತ್ತು ಲಲಿತಕಲಾ ಮಹಾಮಂಡಳ, ಕನರ್ಾಟಕ ರಾಜ್ಯ ಸಹಕಾರ ದಜರ್ಿಗಳ ಮಹಾಮಂಡಳ, ದಿ. ಕನರ್ಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ನಿಯಮಿತ, ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಧಾರವಾಡ, ಹಾವೇರಿ ಸಹಕಾರ ಇಲಾಖೆ, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ವಿವಿಧ ಸಹಕಾರ ಸಂಘಗಳ ಸೌಹರ್ಧ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳನ್ನು ಬಲಪಡಿಸಲು ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆ ಸಕರ್ಾರದಿಂದ ಎಲ್ಲ ಸಹಕಾರ ನೀಡಲಾಗುವುದು. ರಾಜ್ಯ ಎಲ್ಲ ಗ್ರಾಮೀಣ ಸೊಸೈಟಿಗಳಿಂದ ಹಿಡಿದು ಆರ್.ಸಿ.ಸಿ.ವರೆಗೆ ಒಂದೇ ವ್ಯವಹಾರ ವ್ಯವಸ್ಥೆಯೊಳಗೊಂಡ ಸಾಫ್ಟವೇರ್ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಗಿಸುವ ಕುರಿತು ಚಿಂತನೆ ನಡೆದಿದೆ. ಯಾವ ರೀತಿ ಸೇವಾ ಭದ್ರತೆ ನೀಡಬೇಕು ಎಂಬ ಬಗ್ಗೆ ಸಕರ್ಾರ ಒಂದು ಕಮೀಟಿ ರಚಿಸಿ ಚಿಂತನೆ ನಡೆಸುತ್ತಿದೆ. ಆದಷ್ಟು ಶೀಘ್ರದಲ್ಲೇ ಅಗತ್ಯಕ್ರಮಕೈಗೊಳ್ಳಲಾಗುವುದು. ಎಲ್ಲರ ಸಹಭಾಗಿತ್ವದಲ್ಲಿ ಸಹಕಾರ ಇಲಾಖೆ ಬೆಳೆಸೋಣ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಬೆಳೆಸೋಣ ಎಂದು ಹೇಳಿದರು ಎಂದು ತಿಳಿಸಿದರು.
ಬೀದರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನಿಂದ 900 ಕೋಟಿ ಸಾಲ ನೀಡಲಾಗಿದೆ. ಅದನ್ನು ಹೊಲಿಸಿದೆ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಸಾಲ ವಿತರಣೆಯಾಗಿದೆ. ಪ್ರಸಕ್ತ ಸಕರ್ಾರ ರೈತರಿಗೆ 3000 ಕೋಟಿ ಸಾಲ ವಿತರಿಸಿದೆ. ಗುಲ್ಬರ್ಗ ಮತ್ತು ಧಾರವಾಡ ಸಹಕಾರಿ ಕ್ಷೇತ್ರ ಅಧೋಗತಿಯಲ್ಲಿದ್ದು, ಸಾಲ ಮರುಪಾವತಿ ಕಡಿಮೆ ಪ್ರಮಾಣದಲ್ಲಿದೆ. ಬರುವ ದಿನಗಳಲ್ಲಿ ಧಾರವಾಡ, ಗದಗ ಹಾವೇರಿ ಜಿಲ್ಲೆಗಳ ಸಹಕಾರಿ ಸಂಘಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಹೇಳಿದರು.
ನಾವು ನೀವು ರೈತರ ಮತ್ತು ಬಡವರ ಪರವಾಗಿ ಕೆಲಸಮಾಡಬೇಕಾಗಿದೆ. ಬರುವ ದಿನಗಳಲ್ಲಿ 15 ಲಕ್ಷ ಹೊಸ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ನಮ್ಮ ಸಕರ್ಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಿ ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗುವುದು. ಕಾಯಕ ವಿಶೇಷ ಯೋಜನೆಯಡಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರೂ.5 ಲಕ್ಷ ಬಡ್ಡಿರಹಿತ ಸಾಲ ಹಾಗೂ ರೂ. 5 ಲಕ್ಷ ಶೇ.4ರ ಬಡ್ಡಿದಲ್ಲಿ ಸಾಲ ವಿತರಣೆ ಡಿಸೆಂಬರ್ ಮೊದಲವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಬಡವರ ಬಂಧು ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ರೂ. 2 ಸಾವಿರದಿಂದ 10 ಸಾವಿರದವರೆಗೆ ಬಡ್ಡಿರಹಿತ ಸಾಲ ಸೌಲಭ್ಯಕ್ಕೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ರಾಜ್ಯದಲ್ಲಿ ಎಲ್ಲ ರೈತರಿಗೂ ಏಕರೂಪದಲ್ಲಿ ಹಾಲಿನ ದರ ಪದ್ಧತಿ ಜಾರಿಗೆ ತರಬೇಕು. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಕನರ್ಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಸಿ.ಎಂ.ಮಾರೇಗೌಡ ಅವರು ಮಾತನಾಡಿದರು.
ಕಾಗಿನೆಲೆ ಕನಕಗುರುಪೀಠದ ಅಮೋಘಾನಂದ ಸ್ವಾಮಿ ಅವರು ಸಾನಿಧ್ಯ ವಹಿಸಿದ್ದರು. ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಕಾರ್ಯದಶರ್ಿ ಹಾಗೂ ಹಾವೇರಿ ಜಿಲ್ಲಾ ಸಹಕಾರ ಸಪ್ತಾಹ ನೋಡಲ್ ಅಧಿಕಾರಿ ಪಿ.ಎಂ.ನಾಗಶಯನ, ವಿವಿಧ ಸಹಕಾರ ಮಹಾಮಂಡಗಳ ಅಧ್ಯಕ್ಷರಾದ ರಾಜಶೇಖರ ಮಗಿಮಠ, ಬಾಪುಗೌಡ ಪಾಟೀಲ, ಬಸವರಾಜ ಎಸ್.ಸುಲ್ತಾನಪುರಿ, ನಿದರ್ೆಶಕರಾದ ಸುರೇಶ ಯತ್ನಳ್ಳಿ, ಜದೀಶ ತಂಬಾಕದ, ಸಿದ್ದಣ್ಣ ಅಂಬಲಿ, ಅಶೋಕ ಬನ್ನಿಹಳ್ಳಿ, ಲಿಂಗರಾಜ ಚಪ್ಪರದಹಳ್ಳಿ ಇತರರು ಹಾಗೂ ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ದ ಆಡಳಿತದ ಮಂಡಳಿಯ ನಿದರ್ೆಶಕರು, ಹಾವೇರಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಶಶಿಕಲಾ ಪಾಳೇದ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಇತರರು ಉಪಸ್ಥಿತರಿದ್ದರು. ಕೆ.ಎಂ.ಎಫ್.ನ ಬಸವರಾಜ ಅರಬಗೊಂಡ ಸ್ವಾಗತಿಸಿದರು. ಚಂದ್ರಶೇಖರ ಕರಿಯಣ್ಣನವರ ಕಾರ್ಯಕ್ರಮ ನಿರೂಪಿಸಿದರು.