ದೈವಜ್ಞ ಬ್ರಾಹ್ಮಣ ಸಮುದಾಯ ಭವನ ನಿರ್ಮಾಣ : ಅರವಿಂದ ಪಾಲನಕರ
Construction of the Divine Brahmin Community Hall: Aravind Palanakara
ಗದಗ 24 :- ಅವಳಿ ನಗರವಾದ ಗದಗ ಬೆಟಗೇರಿ ನಗರದ ಪ್ರತಿಷ್ಠಿತ ಸಮಾಜವಾದ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರ ಪರಿಶ್ರಮದ ದ್ಯೋತಕವಾಗಿ ನಗರದ ಮುಳಗುಂದ ರಸ್ತೆಯಲ್ಲಿ ಸನ್ 1993-94 ರಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರ ಸಾಮಾಜಿಕ, ಧಾರ್ಮಿಕ ಹಾಗೂ ಸೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೆರವುದಾಯಕವಾಗಲು ಬ್ರಹತ್ ಸಮುದಾಯ ಭವನ ಹಾಗೂ ಗಣಪತಿ ದೇವಸ್ಥಾನ ನಿರ್ಮಾಣದ ಕನಸಿನೊಂದಿಗೆ ನಿವೇಶನವನ್ನು ದೈವಜ್ಞ ಸಮಾಜೋನ್ನತಿ ಸಂಘದ ವತಿಯಿಂದ ಖರೀದಿಸಲಾಗಿತ್ತು.
ಆ ಪ್ರಯುಕ್ತ ಇತ್ತೀಚಿಗಷ್ಟೇ ಶ್ರೀದೇವರ ಪ್ರಾಣ ಪ್ರತಿಷ್ಠಾನದೊಂದಿಗೆ ಗಣಪತಿ ದೇವಸ್ಥಾನದ ನಿರ್ಮಾಣದ ಕಾರ್ಯವು ಭರದಿಂದ ಸಾಗಿರುತ್ತದೆ. ಅದರಂತೆ ಅವಳಿ ನಗರದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರ ತನು ಮನ ಧನ ನೆರವಿನೊಂದಿಗೆ ಸಮಾಜದ ಕನಸಿನ ದೈವಜ್ಞ ಸಮುದಾಯ ಭವನದ ನಿರ್ಮಾಣದ ಕಾರ್ಯವು ಅತೀ ತುರುಸಿನಿಂದ ನೆರವೇರಲಿ ಎಂಬ ಮನೋಕಾಂಕ್ಷೇಗಾಗಿ ಸ್ವ ಸಮಾಜದ ಗಣ್ಯ ಮಾನ್ಯರು ತಮ್ಮ ತಮ್ಮ ವಾಗ್ದಾನದಂತೆ ಸ್ವಯಂ ಪ್ರೇರಣೆಯಿಂದ ಆರ್ಥಿಕ ನೆರವಿನ ಸಹಾಯ ಹಸ್ತ ನೀಡಿದರೆ ಅವಳಿ ನಗರದಲ್ಲಿ ಶೀಘ್ರದಲ್ಲಿಯೇ ಸುಸಜ್ಜಿತ ದೈವಜ್ಞ ಬ್ರಾಹ್ಮಣ ಸಮುದಾಯ ಭವನ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ ಎಂದು ದೈವಜ್ಞ ಸಮಾಜ್ಯೋನ್ನತಿ ಸಂಘದ ಅಧ್ಯಕ್ಷರಾದ ಅರವಿಂದ ಪಾಲನಕರ ನುಡಿದರು. ಅವರು ಇದೇ ದಿನಾಂಕ 23 ರಂದು ಬಿಂಕದಕಟ್ಟಿಯಲ್ಲಿರುವ ಶ್ರೀ ರೇಣುಕಾ ದೇವಿ ಯಲ್ಲಮ್ಮ ದೇವಸ್ಥಾನದಲ್ಲಿ ಸಮಾಜ ಭಾಂಧವರಿಗಾಗಿ ಹಮ್ಮಿಕೊಳ್ಳಲಾದ ವನಭೋಜನ ಕಾರ್ಯಕ್ರಮ ಹಾಗೂ ಸಮಾಜದ ಸಾಮಾನ್ಯ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೇವರಾಜ ಡಿ. ದೈವಜ್ಞ ಕಾರ್ಯದರ್ಶಿಗಳಾದ ಕಿಶೋರ ಎನ್. ರೇವಣಕರ ಜಂಟಿ ಕಾರ್ಯದರ್ಶಿಗಳಾದ ಚೇತನ ಜಿ. ಪಾಲನಕರ ಸದಸ್ಯರಾದ ಸಂತೋಷ ಎನ್. ಕುಡತರಕರ, ಸುರೇಶ ಜಿ. ರೇವಣಕರ ಪ್ರಭಾಕರ ವಿ. ರಾಯ್ಕರ, ರಾಮಚಂದ್ರ ಎಸ್. ಪಾಲನಕರ, ಗೌತಮ ಡಿ. ರೇವಣಕರ, ಸಂತೋಷ ಎಸ್. ಕುರ್ಡೆಕರ, ನರಸಿಂಹ ಎಮ್. ಕುಡತರಕರ, ಗೌರವಾಧ್ಯಕ್ಷರಾದ ಗಣಪತಿ ಎನ್. ಪಾಲನಕರ, ಸಲಹಾ ಸಮಿತಿ ಸದಸ್ಯರಾದ ಸುಧಾಕರ ವಿ. ರಾಯ್ಕರ, ದೈವಜ್ಞ ಸಮಾಜ ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ಪದ್ಮಾ ಜಿ. ಪಾಲನಕರ , ಚೇತನಾ ಆರ್. ವೇರ್ಣೆಕರ, ವಿಜಯ ಜಿ ಪಾಲನಕರ,ಉಷಾ ರೇವಣಕರ,ಜ್ಯೋತಿ ಪಿ ರಾಯಕರ, ಲೀಲಾಬಾಯಿ ವೇರ್ಣೇಕರ, ಪಾರ್ವತಿ ಪಾಲನಕರ,ಅನಿತಾ ವೇರ್ಣೇಕರ,ವೈಶಾಲಿ ಪಾಲನಕರ,ವನಿತಾ ಪಾಲನಕರ,ಸಿಂಧೂ ರಾಯಕರ,
ಪದ್ಮಾವತಿ ಕೆ ವೇರ್ಣೇಕರ, ದೀಪಾ ವೇರ್ಣೇಕರ,ರೇಖಾ ವೇರ್ಣೇಕರ, ಸಹನಾ ರಾಘವೇಂದ್ರ ಪಾಲನಕರ, ದೈವಜ್ಞ ಸಮಾಜ ಯುವಕ ಮಂಡಳಿಯ ಅಧ್ಯಕ್ಷರಾದ ಗಣೇಶ ಆರ್. ವೆರ್ಣೇಕರ ರೋಹಿತ ಆರ್. ರೇವಣಕರ, ವಿನಾಯಕ ಎನ್. ರೇವಣಕರ ಕಿಶನ್ ಎಸ್. ವೆರ್ಣೇಕರ, ಅರುಣ ಸಿ. ರಾಯ್ಕರ ನಾಗರಾಜ ಎಂ. ರೇವಣಕರ ಕಿರಣ ವಿ. ವೆರ್ಣೇಕರ, ಅಮಿತ ಸಿ. ವೆರ್ಣೇಕರ, ಮಂಜುನಾಥ ಎಸ್. ಪಾಲನಕರ ಪರಶುರಾಮ ಎಸ್. ವೇರ್ಣೇಕರ, ವಿಶಾಲ ವೇರ್ಣೇಕರ, ಪ್ರಣವ್ ಎಸ್. ರೇವಣಕರ, ನಾಗರಾಜ ಎಮ್. ರಾಯ್ಕರ, ಜಯವಂತ ವೇರ್ಣೇಕರ, ಅರುಣ ವೇರ್ಣೇಕರ, ಸುನೀಲ್ ವೇರ್ಣೇಕರ,ಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 