ಸುಕ್ಷೇತ್ರ ಐರಣಿಯಲ್ಲಿ 11 ಎಕರೆ ಜಮೀನಿನಲ್ಲಿ ಗೋ ಶಾಲೆ ನಿರ್ಮಾಣ
Construction of a cow school on 11 acres of land in Sukshetra Ironi
ರಾಣಿಬೆನ್ನೂರು 08 : ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯನೀಯ ಭಾವನೆ ಇದೆ ಜೊತೆಗೆ ಕಾಮಧೇನು ಎಂದೇ ಕರೆಯಲಾಗುತ್ತಿದೆ. ಒಂದು ಹಸು ಮನೆಯಲ್ಲಿದ್ದರೆ ಲಕ್ಷ್ಮಿ ವಾಸವಿದ್ದಂತೆ ಎಂಬ ನಂಬಿಕೆ ಭಾರತೀಯರದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ತಾಲೂಕಿನ ಸುಕ್ಷೇತ್ರ ಐರಣಿಯ ಹೋಳೆ ಮಠದಲ್ಲಿ ರವಿವಾರ 11 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಗೋಶಾಲೆಯನ್ನು ಉದ್ಘಾಟಿಸಿ ಮಾತನಾಡಿದ, ಅದರಲ್ಲೂ ಉತ್ತರ ಭಾರತದಲ್ಲಿ ಗೋವಿಗೆ ವಿಷೇಶ ಸ್ಥಾನ ಮಾನವಿದೆ. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಗೋಶಾಲೆಗಳಿವೆ. ಅಲ್ಲಿಯ ಕೃಷಿಕರು ವಯಸ್ಸಾದ ಹಸುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡದೆ ಗೋಶಾಲೆಗೆ ದಾನ ಮಾಡುತ್ತಾರೆ.
ಇದರಿಂದ ಗೋವುಗಳ ರಕ್ಷಣೆಯಾಗುತ್ತದೆ ಎಂದರು. ಅದೇ ಮಾದರಿಯಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಶ್ರೀಮಠದ ಪೂಜ್ಯರು ಮುಂದಾಗಿರುವುದು ಸಂತಸ ತಂದಿದೆ. ರೈತರು ಹಸುಗಳನ್ನು ಕಸಾಯಿಖಾನೆ ಮಾರಾಟ ಮಾಡದೆ ಶ್ರೀಮಠದ ಗೋಶಾಲೆಗೆ ದಾನ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಬೇಕು. ಶ್ರೀಮಠಕ್ಕೆ ಬಾಬಣ್ಣ ಶೆಟ್ಟರ ಇಟ್ಟಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರುಸುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಐರಣಿಯ ಹೋಳೆ ಮಠ ಸ್ಥಾಪನೆಯ ಕಾಲದಿಂದಲೂ ಈ ಹಿಂದಿನ ಪೂಜ್ಯರಾದ ಲಿ. ಮುಪ್ಪಿನಾರ್ಯರು ಗೋವುಗಳನ್ನು ಸಾಕುವ ಮೂಲಕ ಪಾಲನೆ ಪೋಷಣೆ ಮಾಡುತ್ತಾ ಬಂದಿದ್ದರು. ಪ್ರಸ್ತುತ ಶ್ರೀಗಳು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಪಾಲನೆ ಪೋಷಣೆ ಮಾಡಲು ಮುಂದಾಗಿದ್ದಾರೆ.
ಗೋವುಗಳು ಶ್ರೀಮಠಕ್ಕೆ ಮುಕುಟವಿದ್ದಂತೆ. ಭಾರತೀಯರು ಮನೆಯಲ್ಲಿ ನಡೆಯುವ ಪ್ರತಿಯೊಂದು ಮಂಗಲ ಕಾರ್ಯದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು. ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸಿದ್ಧಾರೂಢ ಭಾರತಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಮಾಜಿ ಅಧ್ಯಕ್ಷ ಜೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಸತೀಶಗೌಡ ಮಲ್ಲನಗೌಡ್ರ, ಸಿದ್ಧನಗೌಡ ಗೋವಿಂದಗೌಡ್ರ, ಭಾರತಿ ಜಂಬಗಿ, ಪವನಕುಮಾರ ಮಲ್ಲಾಡದ, ಶ್ರೀಮಠದ ಕಾರ್ಯದರ್ಶಿ ಬಾಬಣ್ಣ ಐರಣಿಶೆಟ್ಟರ ಮತ್ತು ಭಕ್ತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 