ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆ

ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆ  Constitution Day celebration at the court premises

ಸವದತ್ತಿ 28: ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಇವರುಗಳ ಸಹಯೊಗದೊಂದಿಗೆ ನ್ಯಾಯಾಲಯದ ಆವರಣ ಸವದತ್ತಿಯಲ್ಲಿ ಸಂವಿಧಾನ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೆ?ವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮರವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮದ ಉದ್ಫಾಟನೆ ನೇರವೇರಿಸಿದರು. ನಂತರ ನೆರದಿರುವ ಎಲ್ಲರಿಗೂ ಸಂವಿಧಾನ ಪಿಠಿಕೆಯನ್ನು ಬೋದಿಸಿದರು.  

ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಎಸ್‌.ಎಸ್‌. ಕಾಳಪ್ಪನವರ ರವರು ಮಾತನಾಡಿ ಸಂವಿಧಾನವು ಜನೇವರಿ 26, 1950 ರಂದು ಜಾರಿಗೆ ಬಂದು ಭಾರತವನ್ನು ಸಾರ್ವಭೌಮ ಗಣರಾಜ್ಯವೆಂದು ಘೋಷಿಸಿತು. ಈ ದಿನವನ್ನು ನಾವು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ ಸಂವಿಧಾನದ ಮಹತ್ವ ಅದರ ರಚನಾಕಾರರು ಮತ್ತು ಆಧುನಿಕ ಭಾರತಕ್ಕೆ ಅದರ ಪ್ರಸ್ತುತತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರವು 2015 ರ ನವೆಂಬರ್ 26 ಅನ್ನು ಅಧಿಕೃತವಾಗಿ ಸಂವಿಧಾನ ದಿನ ಎಂದು ಘೋಷಿಸಿತು ಎಂದು ಹೇಳಿದರು.  

ಮುಖ್ಯ ಅತಿಥಿ ಭಾಷಣ ಮಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ  ಸಿದ್ರಾಮ ರೆಡ್ಡಿ, ರವರು ಮಾತನಾಡಿ 2025 ರ ಆಚರಣೆಗಳಿಗಾಗಿ ದೇಶಾದ್ಯಂತದ ಸಚಿವಾಲಯಗಳು ಮತ್ತು ಸಂಸ್ಥೆಗಳು ಅಧಿಕೃತವಾಗಿ ಅಳವಡಿಸಿಕೊಂಡ ಥೀಮ್ ನಮ್ಮ ಸಂವಿಧಾನ ಹಿ ನಮ್ಮ ಸ್ವಾಭಿಮಾನ. ಇದು ಸಾಂವಿಧಾನಿಕ ಘನತೆ, ಏಕತೆ ಮತ್ತು ನಾಗರಿಕರ ಭಾಗವಹಿಸುವಿಕೆಗಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ಹಂತದ ಪ್ರಮುಖ ಚಟುವಟಿಕೆಗಳು ಮತ್ತು ಸ್ಪರ್ಧೆಗಳು ಸಂವಿಧಾನಿಕ ಮೌಲ್ಯಗಳು, ರಾಷ್ಟ್ರೀಯ ಕರ್ತವ್ಯಗಳು ಮತ್ತು ನಾಗರಿಕ ಹೆಮ್ಮೆಯ ವಿಷಯಗಳನ್ನು ಆಧರಿಸಿರುತ್ತವೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ. ಮುನವಳ್ಳಿ, ಸಹಾಯಕ ಸರ್ಕಾರಿ ಅಭಿಯೊಜಕರಾದ ಮಂಜುನಾಥ ಸನ್ನಿಂಗನವರ, ಮಹಿಳಾ ಪ್ರತಿನಿಧಿ ಎಸ್‌.ವಾಯ್‌.ಶಿಬಾರಗಟ್ಟಿ ಇತರರು ಉಪಸ್ಥಿತರಿದ್ದರು.  ನ್ಯಾಯವಾದಿಗಳಾದ ಎಮ್‌.ಎಮ್‌.ಮಡಿವಾಳರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು