ವಯೋವೃದ್ಧರ ಹಿತದೃಷ್ಟಿಯಿಂದ ನಗರಸಭೆಯಿಂದ ಪೂರೈಸಿದ ಟ್ಯಾಂಕರ್ ನೀರನ್ನು ತಿರಸ್ಕರಿಸಿದ ಪ್ರಜ್ಞಾವಂತ ನಾಗರಿಕರು
Conscious citizens rejected tanker water supplied by the municipality in the interest of the elderl
ಗದಗ 02:- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವಿವಿಧ ವಾರ್ಡಗಳಲ್ಲಿ ನಿಗದಿತ ಸಮಯದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ವ್ಯೆತೆಯ ಉಂಟಾದಾಗ ಕೂಡಲೇ ಗೌರವಾನ್ವಿತ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವಾಡಿಕೆಯು ಕಳೆದ ಮೂರು ದಶಗಳಿಂದಲೂ ನಾವು ಕಾಣುತ್ತಿದ್ದೇವೆ. ನಗರಸಭೆಯ ಈ ಒಂದು ಸಾರ್ವಜನಿಕ ಹಿತಾದೃಷ್ಟಿಯಿಂದ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವದು ಸಂತಸವೇ. ಆದರೆ ಗದಗ ಬೆಟಗೇರಿ ನಗರಸಭೆಯಿಂದ ಪೂರೈಸಲಾಗುವ ಟ್ಯಾಂಕರ್ ನೀರನ್ನು ಬಡಾವಣೆಯ ವಯಸ್ಸಾದ ಹಿರಿಯ ನಾಗರಿಕರು ವಯೋವೃದ್ಧರು, ಮಹಿಳೆಯರು ಹಾಗೂ ಅಶಕ್ತರಿಗೆ ಮಾತ್ರ ಸದರ ನೀರಿನ ಟ್ಯಾಂಕರ್ ಮೂಲಕ ತಮ್ಮ ಮನೆ ಮನೆಗೆ ನೀರಿನ ಸಂಗ್ರಹ ಮಾಡಿಕೊಳ್ಳುವದು. ಅಸಾಧ್ಯವಾದುದಾಗಿದೆ.
ಇದರಿಂದಾಗಿ ಹಲವು ಬಡಾವಣೆಯ ನಾಗರಿಕರಿಗೆ ಗೌರವಾನ್ವಿತ ನಗರಸಭೆ ವತಿಯಿಂದ ಪೂರೈಸಲಾದ ಟ್ಯಾಂಕರ್ ನೀರಿನ ಸದುಪಯೋಗ ಪಡೆಯುವುದರಲ್ಲಿ ತುಂಬಾ ತೊಂದರೆಯನ್ನು ಎದುರಿಸಿ, ನಗರಸಭೆಯಿಂದ ಪೂರೈಸಿದ ನೀರು ಪಡೆಯಲು ಸಾಧ್ಯವಾಗದಾಗಿರುತ್ತದೆ. ಇದರಿಂದ ಅವರಿಗೆ ನೀರಿನ ಅಭಾವ ಉಂಟಾಗುತ್ತದೆ. ಇದನ್ನು ಅರಿತ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಹನಮನ ಗರಡಿ, ಹಾಗೂ ಮುಲ್ಲಾ ಓಣಿಯ ಬಡಾವಣೆಯ ಪ್ರಜ್ಞಾವಂತ ನಾಗರಿಕರು ಇಂದು ಬೆಳಿಗ್ಗೆ 9 ಘಂಟೆಗೆ ಪೂರೈಸಲಾದ ಟ್ಯಾಂಕರ್ ನೀರನ್ನು ತಮ್ಮ ಮನೆ ಮನೆಗೆ ಸಂಗ್ರಹಿಸಿಕೊಳ್ಳದೇ ಟ್ಯಾಂಕರ್ ನೀರನ್ನು ತಿರಸ್ಕಾರ ಮಾಡಿ ತಮಗೆ ಸಕಾಲಕ್ಕೆ ನಿಗದಿತ ಸಮಯದಲ್ಲಿಯೇ ತುಂಗಭದ್ರಾ ಕುಡಿಯುವ ನೀರನ್ನೇ ಪೂರೈಸಲು ಆಗ್ರಹಿಸಿ ಬಡಾವಣೆಯ ಪ್ರಮುಖ ರಸ್ತೆಯಲ್ಲಿ ಖಾಲಿ ಕೊಡಗಳನ್ನು ಇಟ್ಟು ಸುಮಾರು 3 ಘಂಟೆಗೂ ಹೆಚ್ಚಿನ ಕಾಲ ರಸ್ತೆ ತಡೆ ನಡೆಸಿದರೂ ಕೂಡಾ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳಾಗಲಿ,
ವಾರ್ಡಿನ ನಗರಸಭಾ ಸದಸ್ಯರಾಗಲಿ ಘಟನಾ ಸ್ಥಳಕ್ಕೆ ಬಾರದಿರುವದನ್ನು ಕಂಡು ನಗರಸಭೆಯ ಸಿಬ್ಬಂದಿಗಳಿಗೆ ಹಾಗೂ ನಗರಸಭಾ ಸದಸ್ಯರಿಗೆ ದಿಕ್ಕಾರವನ್ನು ಕೂಗಿದರು. ನಿರಂತರ ಮೂರು ಘಂಟೆಯ ನಂತರದಲ್ಲಿ ತಡವಾಗಿ ಆಗಮಿಸಿದ ನಗರಸಭೆಯ ಹಿರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಲಕ್ಷ್ಮಣ ಮಾರುತಿ ಜೋಗದಂಡಕರ ರವರನ್ನು ಬಡಾವಣೆಯ ನಾಗರಿಕರು ಮುತ್ತಿಗೆ ಹಾಕಿ 23 ನೇ ವಾರ್ಡಿನ ನಗರಸಭಾ ಸದಸ್ಯರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ ಪ್ರಸಂಗ ಜರುಗಿತು. ಈ ಸಂಧರ್ಭದಲ್ಲಿ ಬಡಾವಣೆಯ ಪ್ರಮುಖರಾದ ರಮಾಕಾಂತ ಸಾವಕಾರ, ಬಿಬಿಜಾನ ಶೇಖ್, ಸಹನಾ ರಾಘವೇಂದ್ರ ಪಾಲನಕರ, ರೇಣವ್ವ ಬೋವಿ, ಸೀತಾಲಕ್ಷ್ಮಿ ಅಷ್ಟಪುತ್ರೆ, ಹಣಮವ್ವ ಮೆಣಸಗಿ, ಕಟ್ಟಿಮನಿ, ರಾಯ್ಕರ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 