ಬೆಲೆ ಏರಿಕೆ ಮತ್ತು ನಿರುದ್ಯೋಗ ನಿವಾರಣೆ ಬಗ್ಗೆ ಚಕಾರ ಎತ್ತದ ಕೇಂದ್ರ ಬಜೆಟ್ : ಕಾಂಗ್ರೆಸ್ ವಕ್ತಾರ ಶೆಟ್ಟಿ ಟೀಕೆ
Congress spokesperson Shetty criticizes Union Budget for not addressing price rise and unemployment
ಕಾರವಾರ 01: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ದೇಶದ ಜ್ವಲಂತ ಗಳಾದ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ತಕ್ಷಣಕ್ಕೆ ನಿವಾರಿಸುವ ಯಾವುದೇ ಪರಿಹಾರ ಸೂಚಿಸದಿರುವ ಕಾರಣ ಈ ಬಜೆಟ್ ನಿರಾಶಾದಾಯಕ ಮತ್ತು ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಕೆ .ಶಂಭು ಶೆಟ್ಟಿ ಟೀಕಿಸಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆಗಳನ್ನು ನಾವು ಹತ್ತು ವರ್ಷಗಳಿಂದ ಕೇಳುತ್ತಾ ಬರುತಿದ್ದೇವೆ.ಆದರೆ ಇಂದಿನ ಬಜೆಟ್ ನಲ್ಲಿ ರೈತರಿಗೆ ಬೆಂಬಲ ಬೆಲೆ,ಸಾಲಮನ್ನಾ,ಮತ್ತು ನೀರಾವರಿ ಯೋಜನೆಗಳಿಗೆ ಸ್ಪಷ್ಟ ಹಾಗೂ ಪರ್ಯಾಯ ಹಣಕಾಸು ವ್ಯವಸ್ಥೆ ಕಾಣುತ್ತಿಲ್ಲ. ಯುವಕರಿಗೆ ಉದ್ಯೋಗ ದೊರಕಿಸುವ ಘೋಷಣೆ ಇದೆಯಾದರೂ ಸ್ಪಷ್ಟ ರೋಡ್ ಮ್ಯಾಪ್ ಕಾಣುತ್ತಿಲ್ಲ.
ಪರ್ಯಟನಾ ವಿಭಾಗಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿದ್ದರೂ ನಮ್ಮ ರಾಜ್ಯಕ್ಕೆ ಒಂದೇ ಒಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪ್ರಸ್ತಾಪ ಇಲ್ಲ. ಕರ್ನಾಟಕ ದೇಶಕ್ಕೆ ಅತೀ ಹೆಚ್ಚು ಜಿ ಎಸ್ ಟಿ ನೀಡುವ ರಾಜ್ಯಗಳಲ್ಲಿ ಎರಡನೆಯದಾಗಿದ್ದರೂ,ಆಂಧ್ರ ಮತ್ತು ಬಿಹಾರಕ್ಕೆ ಘೋಷಣೆ ಆದಂತೆ ನಮ್ಮ ರಾಜ್ಯಕ್ಕೆ ಯಾವುದೇ ನೇರ ಪ್ಯಾಕೇಜ್ ಘೋಷಣೆ ಇಲ್ಲ. ಈ ಹಿಂದೆ ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5600 ಕೋಟಿ ಘೋಷಣೆ ಆಗಿದ್ದರೂ ಇಲ್ಲಿವರೆಗೆ ಬಿಡಿಗಾಸೂ ಬಂದಿಲ್ಲ. ಆದ್ದರಿಂದ ಈಗ ಬಜೆಟ್ ನಲ್ಲಿ ಘೋಷಣೆ ಆದ ಅಭಿವೃದ್ಧಿಯ ಅಂಕಿ ಅಂಶ ಗಳು, ಕೊರೊನಾ ಸಮಯದಲ್ಲಿ ಕೇಂದ್ರ ಸರಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿಯ ಅನುದಾನದಂತೆ ಕಾಣದಂತೆ ಮಾಯವಾಗದಿರಲಿ ಎಂಬುದು ಕಾಂಗ್ರೆಸ್ ಆಶಯ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಕೆ .ಶಂಭು ಶೆಟ್ಟಿ ಹೇಳಿದ್ದಾರೆ. .....
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 