ನರೇಗಾ ಹೆಸರು ಬದಲಾವಣೆ ಮಾಡಿದ ಬಿಜೆಪಿ ವಿರುದ್ದ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ,
Congress protests in the city against BJP for changing the name of NREGA,
ಬಳ್ಳಾರಿ 31: ನಗರದ ಡಿಸಿ ಕಚೇರಿ ಎದುರಿನ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಕಾಂಗ್ರೆಸ್ ಜಿಲ್ಲಾ ಘಟಕದಿಂದ ನರೇಗಾ ಹೆಸರು ಬದಲಾವಣೆ ವಿರುದ್ದ ನಗರದಲ್ಲಿ ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷರು ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ ತಲೆಗೆ ಟವಲ್ ಕಟ್ಟಿಕೊಂಡು ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಲಾಯತ್ತು.ಕೇಂದ್ರ ಸರ್ಕಾರದಿಂದ ದೇಶದ ಬಡ ಜನತೆಗೆ ಅವಶ್ಯವಾದ ಉದ್ಯೋಗವನ್ನು ನೀಡುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬದಲಾವಣೆ ಮಾಡಿರುವುದರ ವಿರುದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗಿ. ನರೇಗಾ ಹೆಸರು ಬದಲಾವಣೆ ಮಾಡದಂತೆ ಆಗ್ರಹಸಿದರು.ಈ ವೇಳೆ ಮಾತನಾಡಿದ ಮುಖಂಡರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಮುಖ್ಯ ಕಾರಣರಾದ ಮಹಾತ್ಮಾ ಗಾಂಧಿಯ ಹೆಸರನ್ನೇ ತೆಗೆದು.
ಅದನ್ನು ಜಿ. ರಾಮ್ ಜಿ ಎಂದು ಬದಲಾವಣೆ ಮಾಡಿರುವ ಬಿಜೆಪಿ ಧೋರಣೆಯನ್ನು ವಿರೋಧಿಸಿದರು.ಯೋಜನೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರ ತಡೆಯಲು "ವಿಕಸಿತ ಭಾರತ ಗ್ಯಾರೆಂಟಿ ಫರ್ ರೋಜಗಾರ್ ಆಜೀವಿಕ ಮಿಷನ್ ಗ್ರಾಮೀಣ" ಎಂದು ಬದಲು ಮಾಡಿದೆ ಎಂದು ಬಿಜೆಪಿ ಹೇಳುತ್ತಿದೆ. ಭ್ರಷ್ಟಾಚಾರ ತಡೆಯವಲ್ಲಿ ಆದರೆ ಮಹಾತ್ಮನ ಹೆಸರು ಬದಲಾವಣೆ ಯಾಕೆ ಬೇಕು. ಜೊತೆಗೆ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆ ಮಾಡಿ, ಬಡವರ ಹೊಟ್ಟೆಗೆ ಕಂಟಕ ತರುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಅವಶ್ಯ ಇಲ್ಲ ಎನ್ನಲಾಯತ್ತು.ಈ ಪ್ರತಿಭಟನೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಕೆ.ಇ ಚಿದಾನಂದಪ್ಪ,ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಎ.ಮಾನಯ್ಯ,ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ, ಪ್ರಚಾರ ಸಮಿತಿಯ ಈರನಗೌಡ, ಮುಖಂಡರುಗಳಾದ ಕಲಕಂಬ ಪಂಪಾಪತಿ,ಕಮಲಮ್ಮ,ಹೆಚ್.ಸಿದ್ದೇಶ್,ಯರ್ರಿಸ್ವಾಮಿ ಬೂದಿಹಾಳು, ಅಲುವೇಲು ಸುರೇಶ್ ಕಾಂಗ್ರೆಸ್ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 