ಕೃಷಿ ಪತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪೆನಲ್ ಮೇಲುಗೈ
Congress party wins landslide victory in agricultural elections
ಕೃಷಿ ಪತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪೆನಲ್ ಮೇಲುಗೈ
ತಾಂಬಾ 14: ಗ್ರಾಮದ ವಿವಿದೋದ್ದೆಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪೆನಲ್ ಮೇಲುಗೈ ಸಾಧಿಸಿದೆ. ಅವಿರೋಧ ಆಯ್ಕೆ ನಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಣ್ಣ ಕಲ್ಲ್ಲೂರ ಹಾಗೂ ರಾಚಪ್ಪ ಗಳೇದ ಅವರು ಪ್ರಯತ್ನಿಸಿದರಾದರೂ ಸಹ ಚುನಾವಣೆ ನಡೆಯಿತು ಆದರೂ ಕಾಂಗ್ರೆಸ್ ಫೈನಲ್ ಪರವಾಗಿ ಬ್ಯಾಟಿಂಗ್ ನಡೆಸಿದ ಅಪ್ಪಣ್ಣ ಕಲ್ಲೂರ ಹಾಗೂ ರಾಚಪ್ಪ ಗಳೇದ ಜಂಟಿ ಕಾರ್ಯತಂತ್ರ ನಡೆಸಿ ತಮ್ಮ ಪೆನಲ್ ಸದಸ್ಯರನ್ನು ಆಯ್ಕೆಗೋಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರ.ೆ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪೆನಲ್ 11 ಸದಸ್ಯರು ಆಯ್ಕೆಯಾಗಿದ್ದಾರೆ ಕೇವಲ ಒಂದು ಸ್ಥಾನಕ್ಕೆೆ ಬಿಜೆಪಿ ಮುಖಂಡರು ತೃಪ್ತಿ ಪಡಬೇಕಾಯಿತ್ತು.
ಚುನಾವಣಾ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ವಿಜಯೋತ್ಸವ ಆಚರಿಸಲಾಯಿತು ಆಯ್ಕೆಯಾದ ನಿರ್ದೇಶಕರ ಅಭಿಮಾನಿಗಳ ಬಳಗ ಸಂಭ್ರಮಾಚರಣೆ ನಡೆಸಿದರು ತಡರಾತ್ರಿಯವರೆಗೂ ಚುನಾಯಿತ ನಿರ್ದೇಶಕರಿಗೆ ಅಪ್ಪಣ್ಣ ಕಲ್ಲೂರ ಹಾಗೂ ರಾಚಪ್ಪ ಗಳೇದ ಅವರು ಎಸ್ ಕೆ ಪೆಟ್ರೋಲ್ ಪಂಪ್ ಆವರಣದಲ್ಲಿ ಮಾಲಾರೆ್ಣ ಮಾಡಿ ಶುಭ ಹಾರೈಸುವುದರೊಂದಿಗೆ ಮೆರವಣಿಗೆ ಮಾಡಲಾಯಿತು ನಂತರ ಸಿಂದಗಿ ಶಾಸಕ ಅಶೋಕ ಮನಗೂಳಿ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಭೇಟಿ ನೀಡಿ ಗೆಲುವಿನ ವಿವರವನ್ನು ತಿಳಿಸಿ ಶಾಸಕರಿಗೆ ಸನ್ಮಾನಿಸಿ ಶಾಸಕರಿಂದ ನಿರ್ದೇಶಕರು ಸನ್ಮಾನಿಸಿಕೊಂಡು ಸಿಹಿ ವಿತರಣೆ ಮಾಡಿ ಸಂಭ್ರಮ ಆಚರಿಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ, ಮಹ್ಮದ ವಾಲಿಕಾರ, ಸಿದ್ದನಗೌಡ ಬೀರಾದಾರ, ಜೆ.ಎಸ್.ಹತ್ತಳ್ಳಿ, ಸಿದಗೋಂಡ ಹಿರೇಕುರಬರ, ಕಾಮೇಶ ಉಕ್ಕಲಿ, ಪರಸು ಬೀಸನಾಳ, ಸಿದ್ದು ಹತ್ತಳ್ಳಿ, ರಾಯಗೊಂಡ ನಾಟೀಕಾರ, ಮಹಾದೇವ ಮೂಲಿಮನಿ, ನಾಗಪ್ಪ ಕುರುಬತಳ್ಳಿ, ಸದು ಗಡ್ಡದ, ಮಾಹಂತೇಶ ಬಡದಾಳ, ಸಿದ್ದಪ್ಪ ಕಿಣಗಿ ಸೇರಿದಂತೆ ಮತ್ತಿತರರು ಇದ್ದರು. ಗೆಲವು ಸಾಧಿಸಿದವರು: ಬಾಬುರಾವು ಯಲಗೊಂಡ ಪಾಟೀಲ, ಲಕ್ಷ್ಮಣ ನಂದಪ್ಪ ಹಿರೇಕುರಬರ, ಧರ್ಮಣ್ಣ ನಾಗಪ್ಪ ಮಸಳಿ, ಮೈಬೂಬ ಹುಸೇನಸಾಬ ಮುಲ್ಲಾ, ಅಮೋಘಿ ಸಿದ್ದಪ್ಪ ಕನ್ನಾಳ, ಗುರುಲಿಂಗವ್ವ ಗುರ್ಪ ಜೇವುರ, ಭಾರತಿ ಸಂಗಯ್ಯ ಅರೇಕಾರ, ಶಿವಪುತ್ರ ಸಿದ್ದಪ್ಪ ಗಗನಳ್ಳಿ, ಗುರ್ಪ ಸಿದ್ದಪ್ಪ ಮದಭಾವಿ, ಗೋಪಾಲ ಹುಚ್ಚಪ್ಪ ಸಿಂಗೆ, ಶಂಕ್ರೇಪ್ಪ ಸಿದ್ದಪ್ಪ ಶಿರಗೂರ, ಮಹಾದೇವಪ್ಪ ರಾಚಪ್ಪ ಗಳೇದ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 