ಸಾವಿರ ಸಮಸ್ಯೆಗಳ ನಿರ್ಮಿಸಿದ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನದ ಸಂಭ್ರಮಾಚರಣೆಗೆ ಯಾವುದೇ ನೈತಿಕತೆ ಇಲ್ಲ ಹಿ ಎನ್‌. ರವಿಕುಮಾರಿ​‍್ಶರ

ಸಾವಿರ ಸಮಸ್ಯೆಗಳ ನಿರ್ಮಿಸಿದ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನದ ಸಂಭ್ರಮಾಚರಣೆಗೆ ಯಾವುದೇ ನೈತಿಕತೆ ಇಲ್ಲ ಹಿ ಎನ್‌. ರವಿಕುಮಾರಿ​‍್ಶರ Congress government that created a thousand problems has no morals to celebrate 1000 days: N. Ravik


ಶಿರಹಟ್ಟಿ 14 : ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳ ಸಂಭ್ರಮಾಚರಣೆ ಮಾಡಲು ಯಾವುದೇ ನೈತಿಕತೆ ಇಲ್ಲ. ಇದು ರಾಜ್ಯದ ಜನತೆಗೆ ಸಾವಿರ ಸಮಸ್ಯೆಗಳ ನಿರ್ಮಿಸಿದ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ ಆರೋಪಿಸಿದರು.ಅವರು ಶನಿವಾರ ಶಿರಹಟ್ಟಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಾನ್ಯ ಮುಖ್ಯಮಂತ್ರಿಗಳು ಸ್ವತಃ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ  ಹಗರಣದಲ್ಲಿ ಭಾಗಿಯಾಗಿ ಸುಮಾರು 14 ಸೈಟುಗಳನ್ನು ವಾಪಸ್ ನೀಡಿರುವುದು ನೈತಿಕ ಪತನದ ಉದಾಹರಣೆ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣದ ಕುರಿತು ಸದನದಲ್ಲೇ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿರುವುದು ಸಾಕ್ಷಿಯಾಗಿದೆ ಎಂದರು, ಅಬಕಾರಿ ಇಲಾಖೆಯಲ್ಲಿ ಸುಮಾರು ?6000 ಕೋಟಿ ಹಗರಣ ನಡೆದಿದ್ದರೂ ಸಚಿವರು ರಾಜೀನಾಮೆ ನೀಡಿಲ್ಲ. ವೈನ್ ಶಾಪ್ ಅಸೋಸಿಯೇಷನ್ಗಳು ದೂರು ಹಾಗೂ ಸಾಕ್ಷಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಗಳು ಲಂಚದ ಹಣ ಸಮೇತ ಬಂಧಿತರಾದರೂ ಸಚಿವರು ಅದೇ ಖಾತೆಯಲ್ಲಿ ಮುಂದುವರಿದಿರುವುದು ದುರಂತ ಎಂದು ಟೀಕಿಸಿದರು.ಮೈಸೂರಿನಲ್ಲಿ ವೈನ್ ಶಾಪ್ ನಡೆಸಲು ಪ್ರತಿ ತಿಂಗಳು ?11,000 “ಮಂತ್ಲಿ ಫಿಕ್ಸ್‌” ಮಾಡಿರುವುದು ಭ್ರಷ್ಟಾಚಾರದ ಪರಾಕಾಷ್ಠೆ ಎಂದರುಸುಮಾರು ?37,000 ಕೋಟಿ ಗುತ್ತಿಗೆದಾರರ ಬಾಕಿ ಹಣ ಪಾವತಿಸಿಲ್ಲ, ಅಲ್ಲದೆ ಈ ಸರಕಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಬೀರ​‍್ಪ ಅವರೇ ಸರ್ಕಾರದಲ್ಲಿ 63ಅ ಕ್ಕೂ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಹೇಳಿಕೆ ನೀಡಿರುವುದೇ ಮತ್ತೊಂದು ಸಾಕ್ಷಿ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದರು.“ಇದು ಗೃಹಲಕ್ಷ್ಮೀ ಅಲ್ಲ, ಎಲೆಕ್ಷನ್ ಲಕ್ಷ್ಮೀ” ಎಂದು ಕಟುವಾಗಿ ಟೀಕಿಸಿದ ಅವರು, ಗೃಹಲಕ್ಷ್ಮೀ ಯೋಜನೆಯಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. 2025 ಫೆಬ್ರವರಿ-ಮಾರ್ಚ್‌ ತಿಂಗಳ ಕಂತುಗಳನ್ನು ಮಹಿಳೆಯರಿಗೆ ನೀಡದೇ ಸುಮಾರು ?5000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಚುನಾವಣೆ ಬಂದಾಗ ಮಾತ್ರ ಹಣ ಜಮೆ ಮಾಡುತ್ತಾರೆ ಎಂದರು. ರಾಜ್ಯಾದ್ಯಂತ ಃಕಐ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ ಎಂದರು.ಇದು ಅಲ್ಪಸಂಖ್ಯಾತರ ತುಷ್ಟೀಕರಣ ಸರ್ಕಾರವಾಗಿದೆ. ರೈತರ ಜಮೀನು, ಮಠ-ಮಂದಿರಗಳ ಆಸ್ತಿಗಳನ್ನು ವಕ್ಫ್‌ ಆಸ್ತಿಗಳಾಗಿ ಪರಿವರ್ತಿಸಲು ಬಹುದೊಡ್ಡ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.ವಸತಿ ಇಲಾಖೆಯಲ್ಲಿ 15ಅ ಮೀಸಲು, ಸರ್ಕಾರಿ ಗುತ್ತಿಗೆಯಲ್ಲಿ 4ಅ ಮೀಸಲು, ನೂರಾರು ಕೋಟಿ ಸಾಲಗಳ ಬಡ್ಡಿ ್ಕ್ಲೂ್ಣೂಶ್ರಿಚಿಟಟ ಮತಬ್ಯಾಂಕ್ ರಾಜಕಾರಣದ ಭಾಗ ಎಂದರು.

ಹಳೆ ಹುಬ್ಬಳ್ಳಿ, ಮಂಗಳೂರು, ಡಿಜೆ ಹಳ್ಳಿ, ಕೆಜೆ ಹಳ್ಳಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಪೊಲೀಸ್ ಮೇಲಿನ ಹಲ್ಲೆ ಹಾಗೂ ಆಸ್ತಿನಷ್ಟಕ್ಕೂ ಪ್ರಕರಣಗಳನ್ನು ರದ್ದು ಮಾಡಿರುವುದು ಕಾನೂನು ಸುವ್ಯವಸ್ಥೆಯ ಪತನದ ಉದಾಹರಣೆ ಎಂದು ಹೇಳಿದರು.ಇದು ರೈತರ ವಿರೋಧಿ ಸರ್ಕಾರವಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರದ್ದು, ಬೆಂಬಲ ಬೆಲೆ ನೀಡದಿರುವುದು, ರೈತ ವಿದ್ಯಾನಿಧಿ ಸ್ಥಗಿತವಾಗಿದೆ ಇದು ರೈತ ವಿರೋಧಿ ನೀತಿಗಳು ಎಂದರು. ತುಂಗಭದ್ರ ಡ್ಯಾಂ ದುರಸ್ತಿ ಕಾಮಗಾರಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ಜೈಲುಗಳು ಅರಮನೆಗಳಾಗಿ ಮಾರ​‍್ಪಟಟಿವೆ. ಬೆಂಗಳೂರು, ವಿಜಯಪುರ, ಬೀದರ್, ಮಂಗಳೂರು ನಗರಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಿವೆ. ಪೊಲೀಸರೇ ಅನೇಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದರು.ಮೈಸೂರು ಹಾಗೂ ಬೆಂಗಳೂರಿನಲ್ಲಿ ಬೇರೆ ರಾಜ್ಯದ ಪೊಲೀಸರು ಬಂದು ಡ್ರಗ್ಸ್‌ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.



Valmiki Corporation Scandal 14 Sites Returned Abkari Department Scandal Corruption in Wine Shops