ಕಾಂಗ್ರೆಸ್ ಪಕ್ಷ ಶಿಕ್ಷಕರ ಘಟಕದ ಸಭೆ
ಕೊಪ್ಪಳ 11: ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಶಿಕ್ಷಕರ ಘಟಕದ ತಾಲ್ಲೂಕು ಅದ್ಯಕ್ಷರ ಸಭೆ ನಡೆಸಲಾಯಿತು. ಜಿಲ್ಲಾ ಕಾರ್ಯದರ್ಶಿ ಉಮೇಶಬಾಬು ಸುರ್ವೆ ಎಲ್ಲರನ್ನ ಸ್ವಾಗತಿಸಿ ಕೆಪಿಸಿಸಿ ಅಡಿಯಲ್ಲಿ ಶಿಕ್ಷಕರ ಘಟಕ ಸ್ಥಾಪನೆಯ ಉದ್ದೇಶ ಕುರಿತು ಮಾತನಾಡಿದರು. ಜೊತೆಗೆ ತಾಲುಕಿನ ಸ್ಥಳಿಯ ಕಾಂಗ್ರೆಸ್ ಮುಖಂಡರನ್ನ, ತಾಲೂಕು ಬ್ಲಾಕ ಕಾಂಗ್ರೆಸ್ ಅಧ್ಯಕ್ಷರನ್ನ ಸಂಪರ್ಕಿಸಿ ಅವರೊಂದಿಗೆ ಸಹಕರಿಸಿ ಪಕ್ಷದ ಸಂಘಟನೆ ಬಲ ಪಡಿಸಲು, ಹಾಗೂ ಗ್ರಾಮ ಪಂಚಾಯತ ಮಟ್ಟದ ಅದ್ಯಕ್ಷರನ್ನ ಆಯ್ಕೆ ಮಾಡಲು ಕೋರಿದರು. ಕಾಂಗ್ರೆಸ್ ಪಕ್ಷದ ಶಿಕ್ಷಕರ ಘಟಕದ ಜಿಲ್ಲಾ ಅದ್ಯಕ್ಷ ಓ ಯಂಕಪ್ಪ ಮಾತನಾಡಿ ಪ್ರತಿ ತಾಲುಕಿನಿಂದ ಒಬ್ಬ ಸದಸ್ಯರ ಹೆಸರನ್ನ ಜಿಲ್ಲಾ ಸಮಿತಿಗೆ ಕೋಡಿ ಎಂದು ತಿಳಿಸಿದರು. ಅಲ್ಲದೆ ತಾಲುಕ ಹಂತದಲ್ಲಿ ನಡೆಯುವ ಕಾಂಗ್ರೆಸ್ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಕೋರಿದರು. ಕೊಪ್ಪಳ ತಾಲುಕ ಅದ್ಯಕ್ಷ ಸಂಗಪ್ಪ ಅಂಗಡಿ, ಗಂಗಾವತಿ ಅದ್ಯಕ್ಷ ಬಿ ರಾಮಣ್ಣ, ಯಲಬುರ್ಗಾ ಅದ್ಯಕ್ಷ ಕಳಕಪ್ಪ ಕುರಿ, ಜಿಲ್ಲಾ ಉಪಾದ್ಯಕ್ಷ ಭರಮಪ್ಪ ಕಟ್ಟಿಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು.