ಇಟ್ಟಿಗೆ ಬಟ್ಟಿಯಲ್ಲಿ ಹಲ್ಲೆಗೊಳ್ಳಗಾದ ನೊಂದ ಕಾರ್ಮಿಕರಿಗೆ ಸಾಂತ್ವಾನ

Condolences to the aggrieved workers who were assaulted in the brick kiln

ಇಟ್ಟಿಗೆ ಬಟ್ಟಿಯಲ್ಲಿ ಹಲ್ಲೆಗೊಳ್ಳಗಾದ ನೊಂದ ಕಾರ್ಮಿಕರಿಗೆ ಸಾಂತ್ವಾನ 

ವಿಜಯಪುರ,20  : ನಗರದ ಹೊರವಲಯ ಮಹಾತ್ಮ ಗಾಂಧಿನಗರ, ಸ್ಟಾರ್‌ಚೌಕ್ ಹತ್ತಿರ ಇಟ್ಟಗೆಬಟ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕೆ ಬಂದ ಕಾರ್ಮಿಕರಾದ ಜಮಖಂಡಿ ತಾಲೂಕಿ ಚಿಕ್ಕಲಕಿ ಕ್ರಾಸ್‌ನ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಬಬಲಾದಿ ಇವರನ್ನು ಮೂರಾ​‍್ನಲ್ಕು ದಿನ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿರುವುದು ಅತ್ಯಂತ ಹೀನ ಕೃತ್ಯವಾಗಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಟ್ಟಿಗೆ ಬಟ್ಟೆ ಮಾಲೀಕ ಹಾಗೂ ಗುಂಡಾ ವರ್ತನೆ ತೋರಿದ ಇತರರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರಿಗೆ ಹಣ್ಣು ಹಂಪಲು ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದರು. 

 ನಗರದಲ್ಲಿ ದಿನಂಪ್ರತಿ ಕಳ್ಳತನ, ದರೋಡನೆ, ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಗುಂಡಾ ಸಾಮ್ರಾಜ್ಯ ನೆಲೆಯೂರಿದಂತಾಗಿದೆ. ಕಾರಣ ನಾಗರೀಕರು ಭಯಭೀತರಾಗಿದ್ದಾರೆ. ಇಂಥಹ ದುಷ್ಕೃತ್ಯ ಎಸಗುವುದನ್ನು ಬಂಧಿಸಿ ಕೂಡಲೇ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.  

ನ್ಯಾಯವಾದಿ ಬಾಬು ಹಿಪ್ಪರಗಿ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದ್ದು, ಕಾನೂನಿನ ಸುವ್ಯವಸ್ಥೆ ಹದಗೆಟ್ಟಂತಾದಗಿದೆ. ಹತ್ತಾರು ಜನ ಸೇರಿ ಕೈ ಕಾಲು ಕಟ್ಟಿ ಪ್ರಾಣಾಪಾಯ ಆಗುವಂತೆ ಥಳಿಸಿದ ಹೀನ ಮನಸ್ಸಿನ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ಇಂತಹ ವ್ಯಕ್ತಿಗಳಿಗೆ ನಾಗರೀಕ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದು ತಿಳಿದುಕೊಳ್ಳಲು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಕ್ರೊಶ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಕಾಶ ರಜಫೂತ ಪೆಟ್ಟು ತಿಂದವರಿಗೆ ಸಾಂತ್ವಾನ ವ್ಯಕ್ತಪಡಿಸಿ ಕಾರ್ಮಿಕ ಇಲಾಖೆಯಿಂದ ಹಾಗೂ ಸರ್ಕಾರದಿಂದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವುದಲ್ಲದೇ ದುಸ್ಕೃತ್ಯ ಎಸಗಿದವರನ್ನು ಕಠೀಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಲಾಗುವುದು.  

ನಗರದ ಜನತೆ, ಸಂಘ, ಸಂಸ್ಥೆಗಳು ತಮ್ಮ ಜೊತೆಗಿದ್ದು, ಯಾವುದೇ ಭಯ ಒತ್ತಡಕ್ಕೆ ಮಣಿಯದೆ ಪಿರಾ​‍್ಯಧಿ ದಾಖಲಿಸಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆಂದು ಧೈರ್ಯ ತುಂಬಿದರು.