ಶ್ರೀರಾಮಲು ವಿರುದ್ಧ ಜನಾರ್ದನರೆಡ್ಡಿ ಅವಹೇಳನಕಾರಿ ಹೇಳಿಕಗೆ ಖಂಡನೆ : ಮಲ್ಲಿಕಾರ್ಜುನ ಬಟಗಿ
ವಿಜಯಪುರ ಸೊಂಡೂರು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಮಾಜಿ ಸಚಿವ ಶ್ರೀರಾಮುಲು ಕಾರಣ ಎಂದು ಬಿಜೆಪಿ ಕೇಂದ್ರ ವೀಕ್ಷಕರಾದ ರಾಧ ಕೃಷ್ಣ ಅವರು ನೇರವಾಗಿ ಆರೋಪಿಸಿದ ಹಿನ್ನೆಲೆಯಲ್ಲಿ,ಈ ಆರೋಪದ ಹಿಂದೆ ಶಾಸಕ ಜಿ. ಜನರ್ಧನ ರೆಡ್ಡಿಯ ಕುತಂತ್ರ ಕಾರಣ ಎಂದು ಶ್ರೀರಾಮುಲು ಆರೋಪಿಸಿದ್ದರು. ಮುಂದುವರಿದು ಜನಾರ್ಧನ ರೆಡ್ಡಿ ಶ್ರೀರಾಮುಲು ಒಬ್ಬ ರೌಡೀಶೀಟರ್, ಒರಟ ಕೈಯಲ್ಲೇ ವೆಪನ್ಸ್ ಹಿಡಿದು ಕೊಂಡು. ಹತ್ತಾರು ಹುಡುಗರ ಜೊತೆ ಓಡಾಡುತ್ತಿದ್ದ. ಎನ್ನುವಂತೆ ಮಾಧ್ಯಮದಲ್ಲಿ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಈ ಹೇಳಿಕೆಯನ್ನ ಖಂಡಿಸಿ. ಚಳ್ಳಕೆರೆ ವಾಲ್ಮೀಕಿ ಗುರುಪೀಠದ ಹರ್ಷ ನಂದ ಸ್ವಾಮೀ ಜಿ. ಶ್ರೀರಾಮುಲು ವಿರುದ್ಧದ ಆರೋಪವನ್ನು ಹಾಗೂ ಅವರ ವಿರುದ್ಧ ತೇಜೋವಧೆ ಆಗುವಂತ ಹೇಳಿಕೆಗಳನ್ನು ಈ ಕೂಡಲೇ ಜನಾರ್ಧನ ರೆಡ್ಡಿ ಅವರು ಹಿಂಪಡೆಯ ಬೇಕು. ಇಲ್ಲವೆಂದರೆ ವಾಲ್ಮೀಕಿ ಸಮಾಜ ಮುಂದಿನ ದಿನಗಳಲ್ಲಿ ನಿಮ್ಮ
ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಜಯಪುರ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಟಗಿ ಮಾತನಾಡುತ್ತಾ, ಶ್ರೀರಾಮುಲು ವಿರುದ್ಧ ಜನಾರ್ಧನ ರೆಡ್ಡಿ ಮಾಡಿದ ಅವಹೇಳನಕಾರಿ ಮಾತುಗಳನ್ನು ಖಂಡಿಸಿ.ಶ್ರೀರಾಮುಲು ಅವರಿಗೆ ನಮ್ಮ ವಾಲ್ಮೀಕಿ ಸಮಾಜದ ಬೆಂಬಲ ಸದಾ ಇರುತ್ತದೆ.
ಶ್ರೀರಾಮುಲು ರಾಜ್ಯ ವಾಲ್ಮೀಕಿ ನಾಯಕ ಸಮಾಜದ ಪ್ರಶ್ನತೀತ ನಾಯಕ, 7ಬಾರಿ ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಈ ರಾಜ್ಯ ಕಂಡ ಅಪರೂಪದ ಮಾಸ್ ಲೀಡರ್ ಶ್ರೀರಾಮುಲು.ಸಮಾಜದ ಪರ ಹೋರಾಟಗಳು, ಬಡವರ ಪರ ಧ್ವನಿಯಾಗಿ,ಎಸ್.ಟಿ ಮೀಸಲಾತಿ ಹೋರಾಟದಲ್ಲಿ ರಾಜ್ಯದ್ಯಂತ ಸಮಾಜವನ್ನು ಸಂಘಟಿಸಿದ ಏಕೈಕ ನಾಯಕರಾಗಿದ್ದಾರೆ. ಇಂತಹ ಶೋಷಿತ ವಾಲ್ಮೀಕಿ ಸಮಾಜದ ನಾಯಕ ಶ್ರೀ ರಾಮುಲು ಅವರಿಗೆ ರೌಡಿ ಎಂಬಂತಹ ಅರ್ಥ ಬರುವಂತೆ ಅವರನ್ನು ಅವಮಾನಿಸಿ ಮಾತನಾಡಿ, ಮಾಧ್ಯಮಗಳಲ್ಲಿ ಹೇಳಿಕೆ ಕೊಡುವ ಮೂಲಕಸಮಸ್ತ ವಾಲ್ಮೀಕಿ ನಾಯಕ ಸಮಾಜಕ್ಕೆ ಅವಮಾನಿಸಿರುತ್ತಾರೆ. ಆದ್ದರಿಂದ ಈ ಕೂಡಲೇ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರಿಗೆ ಬೇಷರತ್ತು ಕ್ಷಮೆಯಾಚಿಸಬೇಕುಶ್ರೀ ರಾಮುಲುರವರು ವಾಲ್ಮೀಕಿ ಸಮಾಜದ ಹಿರಿಯ ನಾಯಕ ಇಂತಹ ನಾಯಕನ ವಿರುದ್ಧ ಜನಾರ್ಧನ ರೆಡ್ಡಿ ಅಪೇಕ್ಷ ಅರ್ಹಪದಗಳಿಂದ ಸಾರ್ವಜನಿಕವಾಗಿ ನಿಂದಿಸಿ. ಅವರ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಕೆಲಸ ಮಾಡಿದ್ದು ಖಂಡನೀಯ. ವಾಲ್ಮೀಕಿ ಸಮಾಜದ ಬೆಂಬಲವಿಲ್ಲದೆ, ಬಳ್ಳಾರಿ ಜಿಲ್ಲೆ ಸೇರಿದಂತೆ ಅವರು ಶಾಸಕರಾಗಿ ಪ್ರತಿನಿಧಿಸುವ ಗಂಗಾವತೀ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮಾಡಿದ್ದಿರೋ ನೀವು ಜನಾರ್ಧನ ರೆಡ್ಡಿಯವರೇ, ಶ್ರೀರಾಮುಲು ಅವರ ನಿಮ್ಮ ಜೊತೆ ಸ್ನೇಹ ಮಾಡಿದ್ದರಿಂದ, ರಾಜಕೀಯದಲ್ಲಿ ಪ್ರಭಾವಿಗಳಾಗಿ ಬೆಳೆದದ್ದು, ಏನಾದರೂ ಶ್ರೀರಾಮಲು ವಿರುದ್ಧ ಹೇಳಿಕೆಯನ್ನು ಹಿಂಪಡೆದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಪ್ರಕಟಣೆಯ ಮೂಲಕ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ ಹಾಗೂ ವಾಲ್ಮೀಕಿ ಸಮಾಜದದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.