ಎರಡು ದಿನಗಳ ತತ್ವಶಾಸ್ತ್ರದ ರಾಷ್ಟ್ರೀಯ ಸಮಾವೇಶದ ಸಮಾರೋಪ

Conclusion of the two-day National Conference on Philosophy

ಎರಡು ದಿನಗಳ ತತ್ವಶಾಸ್ತ್ರದ ರಾಷ್ಟ್ರೀಯ ಸಮಾವೇಶದ ಸಮಾರೋಪ  

ಬೆಳಗಾವಿ 07: ಎ.ಸಿ.ಪಿ.ಆರ್ ಸಂಘಟಿಸಿದ ಎರಡುದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ದಿ. 7ರಂದು ಸಂಜೆ ಜರುಗಿತು. ದಿ.6 ಹಾಗೂ 7ರ ಎರಡು ದಿನಗಳಲ್ಲಿ ಒಟ್ಟು 6 ಶೈಕ್ಷಣಿಕಗೋಷ್ಠಿ ಹಾಗೂ ಒಂದು ಸಂವಾದ ಗೋಷ್ಠಿ ಜರುಗಿದವು. ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಚಾರ್ಯರು ಹಾಗೂ ಚಿಂತಕರು ಭಾಗವಹಿಸಿ, ಗುರುದೇವ ರಾನಡೆಯವರ ಜೀವನ ಮತ್ತು ತತ್ವಚಿಂತನೆಗಳ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲಿದರು. ಗುರುದೇವರ ಚಿಂತನೆಯಾದ ದೇವನೊಬ್ಬ ಜಗ ಒಂದೇ, ಮಾನವತೆಯೊಂದೇ ಎಂಬ ವಾಕ್ಯದಮೇಲೆ ಅರ್ಥಪೂರ್ಣ ಸಂವಾದ ಜರುಗಿತು.  

ವಿನೋದ ದೊಡ್ಡಣ್ಣವರ್, ರಾಜೇಂದ್ರ ಬೆಳಗಾವಕರ್, ಡಾ. ಸುಶಾಂತ ಜೋಶಿ ಭಾಗವಹಿಸಿದ್ದರು. ಅಶುತೋಷ ಡೇವಿಡ್ ನಿರ್ವಹಿಸಿದರು. 12 ಜನ ವಿದ್ವಾಂಸರು ದೇಶದ ಬೇರೆ ಬೇರೆ ವಿಶ ್ವವಿದ್ಯಾಲಯದಿಂದ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಎರಡು ದಿನಗಳ ಸಂಗ್ರಹ ವರದಿಯನ್ನು ಸ್ವಾತಿ ಜೋಗ್ ಮಂಡಿಸಿದರು.  

ಸಮಾರೋಪದ ನುಡಿಯನ್ನು ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಸಂದೀಪ ನಾಯರ್ ಮಾತನಾಡಿ ಗುರುದೇವ ರಾನಡೆಯವರು ಹೇಳಿದಂತೆ, ಪೂರ್ವ ಮತ್ತು ಪಶ್ಚಿಮಗಳು ಜಗತ್ತಿನಲ್ಲಿ, ಬೇರೆಲ್ಲೂ ಅಲ್ಲದೆ ಭಾರತದಲ್ಲಿ ಸೇರಲಿವೆ ಎಂದು ನುಡಿದ ಭವಿಷ್ಯವು ಸತ್ಯವಾಗುವ ಕಾಲ ಈಗ ಬಂದಿದೆ. ಭಾರತದ ಯುವ ಶಕ್ತಿ ಅದನ್ನು ಸಾಕಾರಗೊಳಿಸಲಿದೆ ಎಂದು ನುಡಿದರು.  

ಮುಕ್ತಾಯದ ನುಡಿಯನ್ನು ಆಡಿದ ಖ್ಯಾತ ಉದ್ಯಮಿ ರಾಮ ಭಂಡಾರೆ ಯವರು ಮಾತನಾಡಿ ಎಲ್ಲರೂ ಸುಖವಾಗಿರಲಿ ಎಂಬ ತತ್ವದಂತೆ ನಾವು ಉದ್ಯಮಿಗಳು ಸಾಕಷ್ಟು ಜನರಿಗೆ ಉದ್ಯೋಗ ಕಲ್ಪಿಸುವುದರ ಮೂಲಕ ತತ್ವಶಾಸ್ತ್ರವನ್ನು ಅನುಸರಿಸೋಣ ಎಂದು ನುಡಿದರು. ವಂದನಾರೆ​‍್ಣಯನ್ನು ಮಾಡಿದ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಿ ಝಿರಲಿಯವರು ಗುರುದೇವರು ಸ್ವತಃ ಶಿಕ್ಷಕರಾಗಿ ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದರು ಹಾಗಾಗಿ ನಾವು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಸೇರಿಸಿ ಗುರುದೇವ ರಾನಡೆಯವರ ವಿಚಾರಗಳನ್ನು ತಿಳಿಯಪಡಿಸಿದ್ದೇವೆ. ಪ್ರಸಿದ್ಧಿಯನ್ನು ಬಯಸದೆ ಗುಣಾತ್ಮಕವಾಗಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಎ.ಸಿ.ಪಿ.ಆರ್ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. 

 ಬೆಳಗಾವಿ ನಗರದ ಎಲ್ಲಾ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಪ್ರಾಚಾರ್ಯರು ಹಾಗೂ ಕೆಲವು ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು. ಆರ್‌.ಸಿ.ಯು ಪ್ರೋಫೆಸರ್ ಅಶ್ವಿನಿ ಜವಳಿಮಠ ನಡೆಸಿಕೊಟ್ಟರು.