ಶೈಕ್ಷಣಿಕ ಪ್ರಗತಿಗೆ ಏಕಾಗ್ರತೆ ಬಹುಮುಖ್ಯ : ಡಾ.ವಿರುಪಾಕ್ಷ ದೇವರಮನೆ

ಶೈಕ್ಷಣಿಕ ಪ್ರಗತಿಗೆ ಏಕಾಗ್ರತೆ ಬಹುಮುಖ್ಯ : ಡಾ.ವಿರುಪಾಕ್ಷ ದೇವರಮನೆ Concentration is very important for academic progress: Dr. Virupaksha Devaramane

 

ಹೊಸಪೇಟೆ 21:   ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ನಾಗೇನಹಳ್ಳಿಯಲ್ಲಿ ಮಣಿಪಾಲದ ಎ.ವಿ.ಬಾಳಿಗ, ಆಸ್ಪತ್ರೆಯ ಮನೋವೈದ್ಯ, ಡಾ.ವಿರುಪಾಕ್ಷ ದೇವರಮನೆ, ಶಾಲಾ ಮಕ್ಕಳೊಂದಿಗೆ ಪರೀಕ್ಷಾ ಪೂರ್ವತಯಾರಿಗಾಗಿ ಸಂವಾದ ನಡೆಸಿದರು. ಗೆಲುವಿಗಾಗಿ ಅನೇಕ ಯೋಜನೆಗಳು ಇರುತ್ತವೆ ಆದರೆ ಸೋಲಿಗೆ ಕೇವಲ ನೆಪಗಳು ಮಾತ್ರ ಇರುತ್ತವೆ. ಅದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಜವಾಬ್ದಾರಿಯುತವಾಗಿ ಜೀವನ ಸಾಗಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.  ಶೈಕ್ಷಣಿಕ ಪ್ರಗತಿಗೆ ಏಕಾಗ್ರತೆ ಬಹುಮುಖ್ಯ. ಕಟ್ಟುನಿಟ್ಟಿನ ಸತತ ಪ್ರಯತ್ನದಿಂದ ಶೈಕ್ಷಣಿಕ ಅಡೆತಡೆಗಳನ್ನು ನಿವಾರಿಸಬಹುದು ಎಂದು ಅನೇಕ ಶೈಕ್ಷಣಿಕ ಸಾದಕರ ಉದಾಹರಣೆಗಳೊಂದಿಗೆ ಮಕ್ಕಳಿಗೆ ತಿಳಿಹೇಳಿದರು.

ಕೀಳಿರಿಮೆ ಹಾಗೂ ಸೋಮಾರಿತನ ವನ್ನು ಕಟ್ಟುನಿಟ್ಟಿನಿಂದ ತೆಗೆದು ಹಾಕಿದರೆ ಯಶಸ್ಸು ಸಾಧ್ಯ ಎಂದು ವಿವರಿಸುತ್ತಾ ಮಾನಸಿಕವಾಗಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಕ್ಕಳ ಪ್ರಶ್ನೆಗಳಿಗೆ ಉತ್ತರವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ ಹಾಗೂ ಶಿಕ್ಷಣ ಸಂಯೋಜಕರಾದ ಅಬ್ದುಲ್ ಕಲಾಂ ಅವರು ಸಹ ಮಾತನಾಡಿ, ಡಾ.ವಿರುಪಾಕ್ಷ ದೇವರ ಮನೆಯವರು ಯಾವುದೇ ಸಾಮಾಜಿಕ ಸೌಲತ್ತುಗಳು ಇಲ್ಲದ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಮನೋವೈದ್ಯನಾಗಿ ಮಾನಸಿಕ ಸಮಸ್ಯೆಗಳಿಗಾಗಿ ಅನೇಕ ಪುಸ್ತಕಗಳನ್ನು ರಚಿಸಿ ಇಂದು, ತಾವು ಓದಿದ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವುದು ತುಂಬಾ ಸಂತೋಷಕರ ವಿಷಯ. ಇದೇ ರೀತಿ ಮಕ್ಕಳು ಅದಿಹರೆಯದ ವಯಸ್ಸಿನಲ್ಲಿ ತಂದೆ ತಾಯಿ ಹಾಗೂ ಶಿಕ್ಷಕರ ಸಲಹೆಗಳನ್ನು ಕೇಳದೇ ಸ್ನೇಹಿತರ ಸಲಹೆಗಳಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡುವ ವಯೋಮಾನವಾಗಿರುತ್ತದೆ.

ಆದ್ದರಿಂದ ಉತ್ತಮ ಮತ್ತು ಆದರ್ಶ ಸ್ನೇಹಿತರನ್ನು ಆರಿಸಿಕೊಳ್ಳಿ. ಮುಂದೆ ಪಶ್ಚಾತಾಪ ಪಡುವುದಕ್ಕಿಂತ ಉತ್ತಮ ಪ್ರಗತಿಯನ್ನು ಸಾದಿಸಬಹುದು. ಕೇವಲ ಪ್ರಥಮ ದರ್ಜೆಯಲ್ಲಿ ಉತ್ತೀರ್ಣವಾಗುವುದೊಂದೇ ಮಾನದಂಡವಲ್ಲ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರವನ್ನು ಕಲಿಯುವುದು ಬಹುಮುಖ್ಯವಾದುದು ಎಂದು ಹೇಳಿದರು. ಕೊನೆಯಲ್ಲಿ ಡಾ.ವಿರುಪಾಕ್ಷ ದೇವರಮನೆ ಇವರಿಗೆ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ದುರುಗಪ್ಪ, ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಡಿ.ರವಿಶಂಕರ್, ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಸೌಜನ್ಯ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಕೊಟ್ರೇಶ್ ಅವರು ವಂದನಾರೆ​‍್ಣ ಮಾಡಿದರು.