ನರೇಗಾ ಉದ್ಯೋಗಿಗಳ ಇ-ಕೆವೈಸಿ ಪೂರ್ಣಗೊಳಿಸಿ: ತಾಪಂ ಇಓ ವಿಶ್ವನಾಥ ಹೊಸಮನಿ
Complete e-KYC of NREGA employees: TAP EO Vishwanath Hosamani
ನರೇಗಾ ಉದ್ಯೋಗಿಗಳ ಇ-ಕೆವೈಸಿ ಪೂರ್ಣಗೊಳಿಸಿ: ತಾಪಂ ಇಓ ವಿಶ್ವನಾಥ ಹೊಸಮನಿ
ಮುಂಡರಗಿ 16: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿರುವ ತಾಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರಗತಿ ಪೂರ್ಣಗೊಳಿಸಲು ತಾಲೂಕು ಪಂಚಾಯತ ನರೇಗಾ ಸಿಬ್ಬಂದಿಗಳಿಗೆ ತಾಪಂ ಇಓ ವಿಶ್ವನಾಥ ಹೊಸಮನಿ ತಿಳಿಸಿದರು. ತಾಲೂಕು ಪಂಚಾಯತಿಯ ತಮ್ಮ ಕಚೇರಿಯಲ್ಲಿ ನರೇಗಾ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕಿರುವ ಕುರಿತು ಆದೇಶವಿರುವುದರಿಂದ ನರೇಗಾ ಕೂಲಿಕಾರರನ್ನು ಮನೆ ಮನೆಗೆ ಸಂಪರ್ಕಿಸಿ ಸಕ್ರಿಯವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದರು.ತಾಲೂಕಿನ 19 ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಮನರೇಗಾ ಸಿಬ್ಬಂದಿಗಳಾದ ಗ್ರಾಮ ಕಾಯಕ ಮಿತ್ರ, ಬಿಎಫ್ಟಿ, ತಾಂತ್ರಿಕ ಸಹಾಯಕರಿಗೆ ಇ ಕೆವೈಸಿ ಕುರಿತು ತರಬೇತಿ ನೀಡಲಾಗಿದೆ. ಗ್ರಾಪಂಗಳ ಇತರ ಸಿಬ್ಬಂದಿಗಳನ್ನು ಬಳಸಿಕೊಂಡುಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ಗಳನ್ನು ಇ-ಕೆವೈಸಿ ಮೂಲಕ ಪರೀಶೀಲಿಸುವ ಕಾರ್ಯ ತುರ್ತಾಗಿ ನಡೆಯಲಿ ಎಂದರು. ನರೇಗಾ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಅಡಿಯ ಕೃಷಿ ಹೊಂಡ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಿ ಕೂಲಿಕಾರರಿಗೆ ಉದ್ಯೋಗ ನೀಡಲು ಸೂಚಿಸಿ ಇದರಿಂದ ಮಾನವ ದಿನಗಳ ಸೃಜನೆಯು ಸಾಧ್ಯವಾಗಲಿದೆ ಹಾಗಾಗಿ ಆ ನಿಟ್ಟಿನ ಕಡೆಯು ಗಮನಹರಿಸಿ ಎಂದು ತಿಳಿಸಿದರು. ಚಾಲ್ತಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಲು ಗಮನಹರಿಸಲು ತಿಳಿಸಿದರು. 2026-27ನೇ ನರೇಗಾ ಕ್ರಿಯಾಯೋಜನೆಗೆ ಈಗಾಗಲೇ ಸುತ್ತೋಲೆ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯವು ನಡೆಯಲಿ ಎಂದರು. ಈ ವೇಳೆ ಟಿಸಿ ಪ್ರವೀಣ ಸೂಡಿ, ಟಿಎಂಐಎಸ್ ಬಸವರಾಜ ಮಣ್ಣಮ್ಮನವರ, ತಾಂತ್ರಿಕ ಸಹಾಯಕರು, ಬಿಎಫ್ ಟಿ ಇದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 