ಯರಗಟ್ಟಿ ತಾಲೂಕಿನಾದ್ಯಂತ ಡಿಜೆ ಸಿಸ್ಟಂ ಸಂಪೂರ್ಣ ನಿಷೇಧ: ಕಾನೂನು ಸುವ್ಯವಸ್ಥೆ ದಕ್ಕೆ ತರುವವರ ವಿರುದ್ಧ ಸೂಕ್ತ ಕಾನೂನು ಕ್ರಮ
Complete ban on DJ systems across Yaragati taluk
ಯರಗಟ್ಟಿ 13: ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥಿತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಆಯ್ ಎಂ ಮಠಪತಿ ಹೇಳಿದರು.ಪಟ್ಟಣದ ಮಹಾಂತ ದುರದುಂಡಿಶ್ವರ ಶ್ರೀಮಠದಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಮಂಗಳವಾರ ಏರಿ್ಡಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯಿಂದ ಹೊಂದಿರಬೇಕು.ಪಟ್ಟಣ ಶಾಂತಿಗೆ ಹೆಸರಾಗಿದ್ದು, ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಆದ್ದರಿಂದ ಮುಂಬರುವ ಹಬ್ಬಗಳನ್ನು ಎಲ್ಲರೂ ಸೌಹಾರ್ದದಿಂದ ಆಚರಿಸಬೇಕು ಎಂದು ಕರೆ ನೀಡಿದರು.ಪಿಎಸ್‌ಐ ಎಲ್. ಬಿ. ಮಾಳಿ ಮಾತನಾಡಿ, ಶಾಂತಿ ಕದಡುವ ಕೆಲಸ ಮಾಡಬೇಡಿ. ಸಾಮಾಜಿಕ ಮಧ್ಯಮಗಳ ಮೇಲೆ ಸಂಪೂರ್ಣ ನಿಗಾ ಇಟ್ಟಿದ್ದು, ಕೋಮು ಭಾವನೆ ಹರಡುವ ಸಂದೇಶಗಳನ್ನು ಹರಡಬಾರದು.ಅಂಥ ಘಟನೆಗಳು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಣೇಶ ಚತುರ್ಥಿ ಕಮೀಟಿ ಸದಸ್ಯರು ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ, ಪರವಾನಗಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದರು.
ಉಪತಹಸೀಲ್ದಾರ್ ಎಸ್. ಬಿ. ಕುಲಕರ್ಣಿ, ಹೆಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಪಟ್ಟಣ ಪಂಚಾಯಿತಿ ಅಧಿಕಾರಿ ಕೆ. ಎಸ್. ಬಾಕಳೆ, ಪಿಎ ಎಎ ಬಿ. ಕೆ. ರಂಗಣ್ಣನವರ, ಎಂ. ಬಿ. ಸಣ್ಣನಾಯ್ಕರ, ಸ್ಥಳೀಯರಾದ ವಿಠ್ಠಲಗೌಡ ದೇವರಡ್ಡಿ, ಸದಾನಂದ ಹಣಬರ, ಶಿವಾನಂದ ಪಟ್ಟಣಶೆಟ್ಟಿ, ಈರಣ್ಣಾ ಮಠಪತಿ, ಭಾಸ್ಕರ ಹಿರೇಮೆತ್ರಿ, ಶ್ರೀಶೈಲ ವಾಲಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಮಾಜಿ ಗ್ರಾ. ಪಂ. ಸದಸ್ಯ ಗೋವಿಂದ ದೇವರಡ್ಡಿ, ಪ್ರಮೋದ ಬಡಿಗೇರ, ಇಮಾಮಸಾಬ ಹುಸೇನನಾಯಕ, ರಫೀಕ ಡಿ ಕೆ, ಹುಸೇನ ದಿಲಾವರನಾಯ್ಕ, ಬಸವರಾಜ ಚನ್ನಮೇತ್ರಿ, ವೆಂಕಟೇಶ ಮಿಕಲಿ, ಮಲ್ಲಿಕಾರ್ಜುನ ಹಡಪದ, ರಾಮನಗೌಡ ಪಾಟೀಲ, ಸದಾನಂದ ಪಾಟೀಲ, ಈರಣ್ಣಾ ಪೂಜೇರ, ಮಹಾಂತಯ್ಯ ಮಠ, ಮಂಜುನಾಥ ಬಾವಿಹಾಳ, ಮಹಾಂತೇಶ ಭಜಂತ್ರಿ, ನಿಖಿಲ ಹುಣಶೀಕಟ್ಟಿ, ವಿಜಯ ಹುಣಶೀಕಟ್ಟಿ, ಈರಣ್ಣಾ ಪಟ್ಟಣಶೆಟ್ಟಿ, ಕೃಷ್ಣಾ ಹಿರೂರ, ಲಕ್ಷ್ಮಣ ಗುತ್ತಿಗೋಳಿ, ಫಕ್ಕೀರ್ಪ ಬಸಿಡೋಣಿ, ಅಭಿಷೇಕ ಗಲಬಿ, ಶಶಾಂಕ ಗಲಬಿ, ಮೌನೇಶ ಹಳ್ಳಂಡಿ, ಬಾಬು ಚನ್ನಮೆತ್ರಿ ಸೇರಿದಂತೆ ಅನೇಕರು ಗಜಾನನ ಮಂಡಳಿಯ ಅಧ್ಯಕ್ಷ ಹಾಗೂ ಸರ್ವಸದಸ್ಯರು ಇದ್ದರು.ಹೇಳಿಕೆ: ಡಿಜೆ ಸಿಸ್ಟಂಗಳನ್ನು ಉಪಯೋಗಿಸುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಸೌಹಾರ್ದತೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆಗಳು ಪೂರ್ಣಗೊಳ್ಳುವವರೆಗೆ ಸರಕಾರದ ಆದೇಶದಂತೆ ಡಿಜೆ ಸಿಸ್ಟಂಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ. ಹಾಗೂ ಗಣೇಶ ವಿಸರ್ಜನೆಗೆ ತೆರಲುವ ಮಾರ್ಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಕಾನೂನು ಸುವ್ಯವಸ್ಥೆ ಕೆದಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.ಆಯ್ ಎಂ ಮಠಪತಿ, ಸಿಪಿಐ ಮುರಗೋಡ ಪೊಲೀಸ್ ಠಾಣೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 