ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಅಗತ್ಯ: ಡಾ. ಹರೀಶಕುಮಾರ್

ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಅಗತ್ಯ: ಡಾ. ಹರೀಶಕುಮಾರ್

ಕಾರವಾರ : ನಗರೀಕರಣದ ಘನತ್ಯಾಜ್ಯ ಸಮಸ್ಯೆಗೆ ಮನುಷ್ಯನ ದುರಾಸೆ ಕಾರಣ. ಪ್ಲಾಸ್ಟಿಕ್ ಸೇರಿದಂತೆ, ರಾಸಾಯನಿಕ ತ್ಯಾಜ್ಯ, ಇ-ತ್ಯಾಜ್ಯ ಸಮಸ್ಯೆ ಪರಿಹರಿಸುವ ಹೊಣೆ ಅಧಿಕಾರಿಗಳದ್ದು ಮಾತ್ರವಲ್ಲ, ಸಮುದಾಯದ ಭಾಗವಹಿಸುವಿಕೆ ಯಿಂದ ಮಾತ್ರ ಘನತ್ಯಾಜ್ಯ, ಕಸ ನಿರ್ವಹಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಅಭಿಪ್ರಾಯಪಟ್ಟರು. 

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಕಾರವಾರ ನಗರಸಭೆಯಿಂದ ನಗರಸಭೆ ಸದಸ್ಯರು ಮತ್ತು ಪೌರ ಕಾಮರ್ಿಕರಿಗೆ, ಸಮಾಜದ ಗಣ್ಯರಿಗೆ  ಹಮ್ಮಿಕೊಳ್ಳಲಾದ ತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಇಂದು ಎಲ್ಲ ನಗರಗಳಲ್ಲೂ ತಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಮಸ್ಯೆ ಕಂಡು ಬರುತ್ತಿದ್ದು, ಇದೊಂದು ಮಾನವ ನಿಮರ್ಿತ ಸಮಸ್ಯೆಯಾಗಿದೆ. ಹೊಸ ಸಂಶೋಧನೆಗಳು ಮಾನವನ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದ್ದು, ಬಳಕೆಯ ನಂತರ ವೈದ್ಯಕೀಯ, ರಾಸಾಯನಿಕ ಹಾಗೂ ಇ-ತಾಜ್ಯಗಳು ಭೂಮಿ ಮತ್ತು ಪರಿಸರಕ್ಕೆ ಮಾರಕವಾಗಿ ಮಾರ್ಪಟ್ಟಿವೆ. ನಾವು ಸೇವಿಸುವ ಆಹಾರ, ಗಾಳಿ ಶುದ್ಧವಾಗಿರಬೇಕೆಂದರೆ ಇವುಗಳ ನಿಯಂತ್ರಣ ಅತ್ಯಗತ್ಯವಾಗಿದೆ. ಕಸವಿಲೇವಾರಿ ಕೇವಲ ಜನಪ್ರತಿನಿಧಿಗಳಿಂದ, ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿ ಅರಿತು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಾಗ ತಾಜ್ಯನಿರ್ವಹಣೆಯನ್ನು ಮಾಡಬಹುದು. ಜನರು ಅನಾಗರಿಕರಂತೆ ವತರ್ಿಸದೇ, ಸುಶಿಕ್ಷಿತರಾಗಿ ಸುಂದರ ನಗರವನ್ನಾಗಿ ಮಾರ್ಪಡಿಸಲು ಸಹಕರಿಸಬೇಕಾಗುತ್ತದೆ. ತ್ಯಾಜ್ಯ ನಿರ್ವಹಣೆಗೆ ಗ್ರಾಮೀಣ ಪ್ರದೇಶದವರು, ನಗರ ಪ್ರದೇಶವನ್ನು ಅನುಸರಿಸುವದು ಸಮಂಜಸವಲ್ಲ. ಗ್ರಾಮೀಣ ಪ್ರದೇಶ ಜನರು ತೋಟ, ಗದ್ದೆಗಳಿಗೆ ಕಸವನ್ನು ಗೊಬ್ಬರವನ್ನಾಗಿ ಮಾಪರ್ಾಡಿಸುವ ಮೂಲಕ ಸರಳವಾಗಿ ತ್ಯಾಜ್ಯ ನಿರ್ವಹಿಸಬಹುದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. 

ಪೌರಾಯುಕ್ತರಾದ ಎಸ್. ಯೋಗೇಶ್ವರ್  ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಘನತ್ಯಾಜ್ಯ ವಿಧಗಳು, ದುಷ್ಟರಿಣಾಮಗಳು, ನಿರ್ವಹಣೆಯ ಪರಿಕಲ್ಪನೆ, ಘನತ್ಯಾಜ್ಯದ ನಿರ್ವಹಣೆ, ಸಂಗ್ರಹಣೆ, ದಾಸ್ತಾನು, ತ್ಯಾಜ್ಯ ನಿರ್ವಹಣೆ ಮತ್ತು ಸಾಗಾಣಿಕೆ, ತ್ಯಾಜ್ಯ ವಿಲೇವಾರಿ ವಿಧಾನಗಳ ಕುರಿತು ಮಾಹಿತಿ ನೀಡಿ, ಮುಂದಿನ ವಾರದಲ್ಲಿ ಬ್ಯಾಗ್ ವೆಂಡಿಂಗ್ ಮಶಿನ್ ಪರಿಚಯಿಸಲಾಗುವುದು,  ಇದನ್ನು ಎನ್.ಜಿ.ಒ ನಿರ್ವಹಿಸಲಿದ್ದು, ನಾಗರಿಕರು ಕೇವಲ 5 ರೂಪಾಯಿಗೆ ಬಟ್ಟೆ ಬ್ಯಾಗ ಕೊಳ್ಳಬಹುದಾಗಿರುತ್ತದೆ ಎಂದರು. 

ನ್ಯಾಯಾಧೀಶ ಟಿ. ಗೋವಿಂದಯ್ಯ ಅವರು ಮಾತನಾಡಿ ಪರಿಸರ ಹಾನಿಯನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲ ನಾಗರಿಕರು ಜವಾಬ್ದಾರಿ ಅರಿತು ಗಿಡ-ಮರಗಳನ್ನು ಬೆಳಸಬೇಕು. ಹಸಿರು ಪೀಠ ಉದ್ದೇಶವೇ ಪರಿಸರ ಉಳಿಸಿ ಬೆಳೆಸುವುದಾಗಿದೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದರು. 

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಡಾ. ರಮೇಶ ರಾವ್ ಅವರು ಮಾತನಾಡಿ, ತಾಜ್ಯವಿಲೇವಾರಿ ಸೂಕ್ತವಾಗಿ ಆಗದಿದ್ದಾಗ ರೋಗಗಳ ಉಲ್ಬಣವು ಹೆಚ್ಚಾಗುತ್ತದೆ. ಸಾರ್ವಜನಿಕರು ಪ್ಲಾಸ್ಟಿಕ್ ಕಸವನ್ನು ಚರಂಡಿ ಅಥವಾ ರಸ್ತೆಗಳಿಗೆ ಎಸೆಯದೇ ನಗರಸಭೆ ವಾಹನಗಳಿಗೆ ನೀಡಿದರೆ ಸಾಕು. ಆ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಹಾಗೂ ಜಿಲ್ಲಾ ನಗರಾಭಿವೃದ್ಧಿಕೋಶದ ಅಧಿಕಾರಿ ಆರ್.ಪಿ.ನಾಯ್ಕ ಅವರು ಉಪಸ್ಥಿತರಿದ್ದರು.  ಸಾರ್ವಜನಿಕರು, ಗಣ್ಯರು,ಜನಪ್ರತಿನಿಧಿಗಳು, ಪೌರಕಾಮರ್ಿಕರು, ನಗರಸಭೆಯ ಸಿಬ್ಬಂದಿಗಳು ತರಬೇತಿ ಶಿಬಿರದಲ್ಲಿದ್ದರು. ಪೌರಾಯುಕ್ತರಾದ ಎಸ್. ಯೋಗೇಶ್ವರ ಅವರು ಸ್ಲೈಡ್ ಮೂಲಕ ಪರಿಸರ ರಕ್ಷಣೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ಪ್ರಾತ್ಯಕ್ಷಿಕತೆ ನೀಡಿದರು.