11 ನೇ ಕೃಷಿ ಗಣತಿ ಕಾರ್ಯ ಆರಂಭ
ಇಂಡಿ,21 : ತಾಲ್ಲೂಕಿನ ಗಣವಲಗಾ ಗ್ರಾಮದಲ್ಲಿ 11 ನೇ ಕೃಷಿ ಗಣತಿ 3ನೇ ಹಂತದ ಇನ್ ಪುಟ್ ಸಮಿಕ್ಷೇ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪೂರ ಜಿಲ್ಲಾ ಸಂಖ್ಯಾ ಸಂಗ್ರಾಹಣ ಅಧಿಕಾರಿ (ಪ್ರಭಾರಿ) ಅಲ್ತಾಫ್ ಹಮ್ಮದ ಮನಿಯಾರ ಅವರು ಕೃಷಿ ಗಣತಿಯಲ್ಲಿ ಜಮೀನುಗಳ ಸಂಖ್ಯೆ, ವಿಸ್ತೀರ್ಣ, ವರ್ಗವಾರು ಹಂಚಿಕೆ, ಸಣ್ಣ, ಅತಿ ಸಣ್ಣ, ಮಧ್ಯಮ, ದೊಡ್ಡ ರೈತರನ್ನು ಗುರುತಿಸುವುದು, ಮಣ್ಣು ಪರೀಕ್ಷೆ, ಬೆಳೆಗಳ ಸಮಗ್ರ ಮಾಹಿತಿ, ಸಾಗುವಳಿ ಹಿಡುವಳಿದಾರರ ಸಂಖ್ಯೆ, ಭೂ ಬಳಕೆ, ಬೆಳೆ ವಿಭಾಗ, ಉತ್ಪಾದನೆ ಮೊದಲಾದ ಮಾಹಿತಿಗಳನ್ನು ಗಣತಿಯಲ್ಲಿ ಸಂಗ್ರಹಿಸಲಾಗುತ್ತದೆ.
ಕೃಷಿಯ ಸಮಗ್ರ ಮಾಹಿತಿ, ದತ್ತಾಂಶ ಸಂಗ್ರಹದ ಆಧಾರದ ಮೇಲೆ ಪ್ರತಿ ಕೃಷಿ ಕ್ಷೇತ್ರದ ರಚನೆ ಮತ್ತು ಗುಣ ಲಕ್ಷಣಗಳನ್ನು ತಿಳಿದು, ಕೃಷಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಮತ್ತು ಪ್ರಗತಿ ಮೌಲ್ಯ ಮಾಪನಕ್ಕೆ ಗಣತಿ ಅಗತ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾಹಯಕ ಸಂಖ್ಯಾತಿ ಅಧಿಕಾರಿಗಳಾದ ಮಲ್ಲಾರಾವ ದಾದಾಜಿ,ಸಂದೀಪ ಜೋಶಿ, ಸುಷ್ಮಾ ಮಜ್ಜಗಿ, ಗೀತಾ ಕೇಸುಗೊಳ, ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಹೇಶ್ ಗುರಬೆಟ್ಟ ಹಾಗೂ ರೈತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.