ಕಾಲೇಜುಗಳು ಉದ್ಯೋಗ ನೀಡುವ ಕೇಂದ್ರಗಳಾಗಲಿ: ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ
ಪದವಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಪದವಿಯ ಕೊನೆ ವರ್ಷದಲ್ಲಿಯೆ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಉದ್ಯೋಗ ಕೋಶಗಳು ಕಾರ್ಯನಿರ್ವಹಿಸಬೇಕು. ಕಾಲೇಜುಗಳು ಪದವಿ ಶಿಕ್ಷಣದ ಜೊತೆಗೆ ಉದ್ಯೋಗ ನೀಡುವ ಕೇಂದ್ರಗಳಾಗಬೇಕು ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.
ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಶನಿವಾರ ಪಿಎಂ ಉಷಾ ಮೇರು ಸ್ಕೀಮ್ ಮತ್ತುಉದ್ಯೋಗ ಕೋಶ ವತಿಯಿಂದ ಜರುಗಿದ ಒಂದು ದಿನದ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾಲೇಜು ಮತ್ತು ವಿವಿಗಳಲ್ಲಿನ ಉದ್ಯೋಗಕೋಶದ ಸಿಬ್ಬಂದಿ ಸಕ್ರಿಯತೆಯು ಅನೇಕ ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕಾಗುವ ಸಾಧ್ಯತೆಯಿದೆ.ಇಂದಿನ ವಿದ್ಯಾರ್ಥಿ ನಾಳೆಯ ಉದ್ಯೋಗಿ ಎಂಬ ಪರಿಕಲ್ಪನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅವರಕೌಶಲ್ಯ ವೃದ್ಧಿಗೆ ಅವಶ್ಯವಿರುವತರಬೇತಿ ಕಾರ್ಯಕ್ರಮಗಳನ್ನು ಉದ್ಯೋಗ ಕೋಶವು ಆಯೋಜಿಸುವುದರತ್ತ ಗಮನ ನೀಡಬೇಕುಎಂದರು.
ಉತ್ತರ ಕರ್ನಾಟಕ ಮತು ್ತಗ್ರಾಮೀಣ ಭಾಗದಿಂದ ಶಿಕ್ಷಣ ಅರಿಸಿ ಬಂದ ವಿದ್ಯಾರ್ಥಿಗಳು ಪ್ರಾಮಾಣಿಕರು ಮತ್ತು ಪರಿಶ್ರಮಿಗಳು ಆಗಿರುತ್ತಾರೆ.ಆದರೆ ಆ ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಕೊರತೆ, ಕೀಳರಿಮೆ ಮತ್ತು ಆತ್ಮ ವಿಶ್ವಾಸದ ಕೊರತೆಯಿಂದ ಬಹುರಾಷ್ಟ್ರೀಯ ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ವಿಫಲರಾಗುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ಸಂವಹನ ಕಲೆ ಮತ್ತು ವೃತ್ತಿಗೆ ಸಂಬಂಧಿಸಿದ ಅವಶ್ಯ ಕೌಶಲ್ಯಗಳ ತರಬೇತಿ ನೀಡಲುಆದ್ಯತೆ ನೀಡಬೇಕುಎಂದರು.
ಕುಲಸಚಿವ ಸಂತೋಷಕಾಮಗೌಡ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುವ ಅವಶ್ಯಕತೆಯಿದೆ. ಓದ್ಯೋಗಿಕ ಜಗತ್ತಿನಲ್ಲಿ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಇಂದಿನ ಪ್ರಸಕ್ತ ಪಠ್ಯಕ್ರಮವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಮಾತ್ರ ಸಹಕಾರಿಯಾಗಿರುವ ಕಾರಣ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ ವಿನಃ ಉದ್ಯೋಗ ಪಡೆಯುವಲ್ಲಿ ಹಿಂದುಳಿಯುತ್ತಿದ್ದಾರೆ ಎಂದರು.
ಹುಬ್ಬಳ್ಳಿಯ ದೇಶಪಾಂಡೆ ಪೌಂಢೇಶನ್ ನಿರ್ದೇಶಕರವಿ ಚವ್ಹಾಣ ಮಾತನಾಡಿ, ಕಾಲೇಜು ಸ್ಟ್ರೀಮ್ ಜೊತೆಗೆ ಭೌಗೋಳಿಕ ಹಿನ್ನೆಲೆಯಲ್ಲಿ ಕೆಲ ಕೌಶಲ್ಯಯುಕ್ತ ಉದ್ಯೋಗಗಳು ಸ್ಥಳಿಯವಾಗಿ ಲಭ್ಯವಿರುತ್ತವೆ. ಆ ನಿಮಿತ್ತ ಆ ಕೌಶಲ್ಯಗಳು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಸಮಯದಲ್ಲಿ ಪಡೆದುಕೊಂಡರೆ, ಆ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗದೊರೆಯುವಲ್ಲಿ ಬಹಳ ಅನುಕೂಲವಾಗುತ್ತದೆ. ಉದ್ಯೋಗ ಕೋಶದ ಅಧಿಕಾರಿ ವಿದ್ಯಾರ್ಥಿಗಳಿಗೆ ಎಲ್ಲ ಉದ್ಯೋಗಗಳು ಸಮಾನವು ಎಂದು ಜಾಗೃತಿ ಮೂಡಿಸುವ ಜೊತೆಗೆ ಉದ್ಯೋಗದ
ಪ್ರಾರಂಭದ ಹಂತದಲ್ಲಿ ಸಂಬಳಕ್ಕಿಂತ ಅನುಭವ ಪ್ರಾಪ್ತಿ ಮತ್ತು ಕಲಿಕೆಗೆ ಆದ್ಯತೆ ನೀಡಬೇಕುಎಂದು ತಿಳಿ ಹೇಳುವ ಅವಶ್ಯಕತೆಯಿದೆಎಂದರು.
ಇದೆ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಮತ್ತು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಮಧ್ಯಕೌಶಲ್ಯಅಭಿವೃದ್ಧಿ ಮತ್ತು ಶೈಕ್ಷಣಿಕಒಡಂಬಡಿಕೆ ಮಾಡಿಕೊಳ್ಳುವುದರ ಕುರಿತಾಗಿ ನಿರ್ಣಯ ತೆಗೆದುಕೊಳ್ಳಲಾಯಿತು.
ವಿವಿಯ ಹಣಕಾಸು ಅಧಿಕಾರಿಗಳಾದ. ಎಂ.ಎ .ಸ್ವಪ್ನಾ, ಪಿಎಂ ಉಷಾ ನೊಡಲ್‌ಅಧಿಕಾರಿ ಪ್ರೊ.ಬಾಲಚಂದ್ರ ಹೆಗಡೆ, ಉದ್ಯೋಗಕೋಶದ ಸಂಯೋಜಕರಾದ ಡಾ.ಕಿರಣಕುಮಾರ ಮತ್ತುಡಾ. ಮಹಾಂತೇಶಕುರಿ, ದೇಶಪಾಂಡೆ ಫೌಂಡೇಶನ್ ಸಿಬ್ಬಂದಿ ಶಿವಾನಂದ ಪಾಟೀಲ ಸೇರಿದಂತೆ ಆರ್‌ಸಿಯು ವ್ಯಾಪ್ತಿಯ ವಿವಿಧ ಪದವಿ ಕಾಲೇಜುಗಳ ಉದ್ಯೋಗಕೋಶದ ಅಧಿಕಾರಿಗಳು.ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಶೃತಿ ಪ್ರಾರ್ಥಿಸಿದರು.ಉದ್ಯೋಗ ಕೋಶದ ಅಧಿಕಾರಿ ಪ್ರೊ.ಆರ್.ಎನ್. ಮನಗೂಳಿ ಸ್ವಾಗತಕೋರಿ, ಪರಿಚಯಿಸಿದರು.ಡಾ. ನಂದಿನಿದೇವರಮನಿ ವಂದಿಸಿದರು.ಪ್ರೀತಿ.ಸಿ ನಿರೂಪಿಸಿದರು.