ಲೋಕದರ್ಶನ ವರದಿ
ಮುದ್ದೇಬಿಹಾಳ 1:ಪಟ್ಟಣವನ್ನು ರಾಷ್ಟ್ರೀಯ ನಗರಗಳ ನೈರ್ಮಲ್ಯ ಯೋಜನೆ ಕಾರ್ಯನೀತಿ ಅಡಿ ಅಳವಡಿಸಲಾಗಿದ್ದು ಇದರ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ ಸಕರ್ಾರಕ್ಕೆ ವರದಿ ಸಲ್ಲಿಸಲು ಬೆಂಗಳೂರು ಮೂಲದ ಟೈಡ್ ಟೆಕ್ನೋಕ್ರ್ಯಾಟ್ಸ್ ಪ್ರೈವೆಟ್ ಲಿಮಿಟೆಡ್ ಅನ್ನು ನೋಡಲ್ ಏಜನ್ಸಿಯಾಗಿ ನೇಮಿಸಲಾಗಿದೆ. ಇದಕ್ಕಾಗಿ ಕಾರ್ಯಪಡೆಯೊಂದರನ್ನು ರಚಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಎಲ್ಲರೂ ಪಟ್ಟಣದಲ್ಲಿ ಸ್ವಚ್ಛತೆ, ಕುಡಿವ ನೀರಿನ ಸಬಲೀಕರಣ ಮತ್ತು ನೈರ್ಮಲ್ಯೀಕರಣ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ನೋಡಲ್ ಏಜನ್ಸಿಯ ಜಿಲ್ಲಾ ಕೋ ಆಡರ್ಿನೇಟರ್ ಎಂ.ಅರುಣಕುಮಾರ ಮನವಿ ಮಾಡಿದ್ದಾರೆ.
ಇಲ್ಲಿನ ಪುರಸಭೆಯಲ್ಲಿ ಶನಿವಾರ ನಡೆದ ನಗರ ನೈರ್ಮಲ್ಯ ಕಾರ್ಯಪಡೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಇದೇ ವರ್ಷದ ಜುಲೈ ತಿಂಗಳವರೆಗೆ ಟೈಡ್ ವತಿಯಿಂದ ಮುದ್ದೇಬಿಹಾಳದಲ್ಲಿ ಕುಡಿವ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯೀಕರಣ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಆ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಒಟ್ಟುಗೂಡಿಸಿ ಪೌರಾಡಳಿತ ಇಲಾಖೆ ಮೂಲಕ ಸಕರ್ಾರಕ್ಕೆ ವರದಿ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸಕರ್ಾರದ ಅನುದಾನ ನೇರವಾಗಿ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳುವ ಹೊಣೆ ನಿಭಾಯಿಸಬೇಕಿದೆ ಎಂದರು.
ಕೇಂದ್ರ ಸಕರ್ಾರದ ಸ್ವಚ್ಛಭಾರತ ಅಭಿಯಾನದಡಿ ಇಟ್ಟುಕೊಂಡ ಗುರಿಯನ್ನು ರಾಷ್ಟ್ರೀಯ ನೀತಿಯ ಮಾರ್ಗದರ್ಶನದನ್ವಯ ಯೋಜನೆ ತಯಾರಿಸಬೇಕಾಗಿದೆ. ಹಾಗಾಗಿ ಮುದ್ದೇಬಿಹಾಳ ಪಟ್ಟಣಕ್ಕೆ ನೈರ್ಮಲ್ಯ ಯೋಜನೆ ತಯಾರಿಸುವ ಅವಶ್ಯಕತೆ ಇದೆ. ಇದನ್ನು ತಯಾರಿಸುವ ಮತ್ತು ಅನುಷ್ಠಾನಗೊಳಿಸುವ ಸಲುವಾಗಿ ನಗರ ನೈರ್ಮಲ್ಯ ಕಾರ್ಯಪಡೆ ಸೃಜಿಸಲಾಗಿದೆ. ಈ ಕಾರ್ಯಪಡೆಯು ಯೋಜನೆ ಅನುಷ್ಠಾನದವರೆಗೂ ಹಲವು ಜವಾಬ್ಧಾರಿ ನಿರ್ವಹಿಸುತ್ತದೆ ಎಂದು ತಿಳಿಸಿದರು.
ನೈರ್ಮಲ್ಯತೆ ಬಗ್ಗೆ ಶೇ.100 ತಿಳಿವಳಿಕೆ ಮೂಡಿಸಲು ಕಾರ್ಯಕ್ರಮ ಹಮ್ಮಿಸುವುದು, ನೈರ್ಮಲ್ಯ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಅವರ ಕಾಯರ್ಾಚರಣೆ ಹಾಗೂ ವರದಿ ಪ್ರಗತಿ ಅನುಮೋದಿಸುವುದು, ಸ್ಥಳೀಯ ಸಂಸ್ಥೆಗಳಿಂದ ನಗರ ಯೋಜನೆ ಅನುಮೋದನೆ, ಯೋಜನೆ ಪ್ರಗತಿ ಗಮನಿಸಲು ಆಗಿಂದಾಗ್ಗೆ ಸ್ಥಳ ಪರಿಶೀಲಿಸುವುದು, ನೈರ್ಮಲ್ಯತೆಗಾಗಿ ಖಾಯಂ ಆಗಿ ಜವಾಬ್ದಾರಿ ನಿರ್ವಹಿಸಲು ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸು ಮಾಡುವಿಕೆ ಸೇರಿ ಹಲವು ಮಹತ್ವದ ಚಟುವಟಿಕೆಗಳನ್ನು ಕಾರ್ಯಪಡೆ ನಿರ್ವಹಿಸಬೇಕಾಗುತ್ತದೆ. ನಗರ ಯೋಜನೆ ಅಂತಿಮವಾಗಿ ತಯಾರಿಸಿ ಅನುಮೋದನಗೊಳ್ಳುವವರೆಗೆ ಕಾರ್ಯಪಡೆ ಅಸ್ತಿತ್ವದಲ್ಲಿ ಇರುತ್ತದೆ ಎಂದರು.
ಕೇಂದ್ರದ ಕುಡಿವ ನೀರು, ನೈರ್ಮಲ್ಯ ಅಡಿ ಸ್ವಚ್ಛಭಾರತ ಮತ್ತು ರಾಜ್ಯದ ನೈರ್ಮಲ್ಯೀಕರಣ ಯೋಜನೆ ಅನುಷ್ಠಾನಕ್ಕೆ ಬಿಡುಗಡೆಯಾಗುವ ಅನುದಾನ ದುರ್ಬಳಕೆ ಆಗದಂತೆ ತಡೆಗಟ್ಟಿ ನೇರವಾಗಿ ಉದ್ದೇಶಿತ ಯೋಜನೆಗೆ ಬಳಸುವ ಮೂಲಕ ಪಟ್ಟಣದಲ್ಲಿ ನೈರ್ಮಲ್ಯ ಯೋಜನೆ ಯಶಸ್ವಿಗೊಳಿಸುವುದು ಸಕರ್ಾರದ ಉದ್ದೇಶವಾಗಿದ್ದು ಈ ಉದ್ದೇಶ ಈಡೇರಲು ಅಗತ್ಯ ಕ್ರಮ ಜರುಗಿಸುವ ಹೊಣೆಯನ್ನು ಕಾರ್ಯಪಡೆ ಮತ್ತು ಪುರಸಭೆ ಆಡಳಿತ ಜಂಟಿಯಾಗಿ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆ, ಕುಡಿವ ನೀರು ಪೂರೈಕೆ ವ್ಯವಸ್ಥೆ ಮತ್ತು ನೈರ್ಮಲ್ಯೀಕರಣ ಕುರಿತು ಸಮೀಕ್ಷೆ ನಡೆಸಿ ಸಿಡಿ, ಪಿಪಿಟಿಗಳನ್ನು ತಯಾರಿಸಲಾಗಿದೆ. ನಿರುಪಯುಕ್ತ ನೀರಿನ ಮರುಬಳಕೆ ಮತ್ತು ಮಳೆನೀರಿನ, ನದಿನೀರಿನ ಬಳಕೆ ಕುರಿತೂ ಮಾಹಿತಿ ಸಂಗ್ರಹಿಸಲಾಗಿದೆ. ಸಧ್ಯ ಇರುವ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ. ನೀತಿ ನಿಯಮಗಳನ್ನು ರೂಪಿಸಲಾಗಿದೆ. ಎಲ್ಲವನ್ನೂ ಪುಸ್ತಕರೂಪದಲ್ಲಿ ತಯಾರಿಸಿ ಸಕರ್ಾರದ ಅನುಮೋದನೆಗೆ ಕಳಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಕಾರ್ಯಪಡೆಯ ಪ್ರತಿನಿಧಿಯಾಗಿರುವ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ ಮಾತನಾಡಿ, ಕಾರ್ಯಪಡೆಗೆ ಇನ್ನೂ ಕೆಲವು ಪ್ರಮುಖರನ್ನು ಸೇರ್ಪಡೆ ಮಾಡಿಕೊಳ್ಳಲು ಸಲಹೆ ನೀಡಿದರು. ಕಾರ್ಯಪಡೆಗೆ ಅಂದಾಜು 15-20 ಸದಸ್ಯರನ್ನು ನೇಮಿಸಲು ಅವಕಾಶ ಇದ್ದು ಸಮರ್ಪಕ ಬಳಕೆ ಮಾಡಿಕೊಂಡು ಉತ್ಸಾಹಿಗಳು, ಯೋಜನೆಯ ಅರಿವು ಹೊಂದಿದವರು ಮತ್ತು ಪಟ್ಟಣದ ಅಭಿವೃದ್ಧಿ ಬಗ್ಗೆ ನೈಜ ಕಳಕಳಿ ಇರುವವರನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಆಲೋಚಿಸಬೇಕು ಎಂದು ಸಲಹೆ ನಿಡಿದರು.
ಕಾರ್ಯಪಡೆ ಸಂಚಾಲಕ ಪುರಸಭೆ ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ, ಕಾರ್ಯಪಡೆ ಪ್ರತಿನಿಧಿಗಳಾದ ಪುರಸಭೆ ಜೆಇ ಭೀಮನಗೌಡ ಬಗಲಿ, ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಚಲವಾದಿ, ಸ್ವಚ್ಛತಾ ಕಾಮರ್ಿಕ ಪ್ರತಿನಿಧಿ ಚನ್ನಪ್ಪ, ಮಾಧ್ಯಮ ಪ್ರತಿನಿಧಿ ನಾರಾಯಣ ಮಾಯಾಚಾತಿ, ಪುರಸಭೆ ಸಮುದಾಯ ಸಂಘಟಕ ವಿನೋದ ಝಿಂಗಾಡೆ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.