ಬಾಗಲಕೋಟೆ 13: ಸಹಕಾರ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೂ ಸಮರ್ಪಕವಾಗಿ ಸೇವೆ ದೊರೆಯುತ್ತಿದ್ದು, ರಾಷ್ಟ್ರದ ಅಭಿವೃದ್ದಿಗೆ ಸಹಕಾರ ಕ್ಷೇತ್ರದ ಸೇವೆ ಅಗತ್ಯವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಗುಳೇದಗುಡ್ಡ ಪಟ್ಟಣದ ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿಂದು ಲಕ್ಷ್ಮೀ ಸಹಕಾರಿ ಬ್ಯಾಂಕ್ನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಗುಜರಾತಿನ ಹಾಲು ಕ್ರಾಂತಿ, ಕನರ್ಾಟಕದ ಹಸಿರು ಕ್ರಾಂತಿಗಳು ಸಹಕಾರಿ ಸಂಘಗಳಿಂದ ಸಾಧ್ಯವಾಗಿದ್ದನ್ನು ನಾವು ಕಾಣಬಹುದಾಗಿದೆ. ಸಹಕಾರಿ ತತ್ವಗಳನ್ನು ಇಟ್ಟುಕೊಂಡ ಬದುಕಿರುವ ನಾವು ಇತ್ತೀಚಿನ ದಿನಮಾನಗಳಲ್ಲಿ ಕೇವಲ ರಾಷ್ಟ್ರೀಕೃತ ಬ್ಯಾಂಕಗಳಿಗೆ ಅವಲಂಬಿತರಾಗಿ ಜೀವನ ಸಾಗಿಸುತ್ತಿವೆ. ದುರದುಷ್ಟ ವಶಾತ್ ರಾಷ್ಟ್ರೀಕೃತ ಬ್ಯಾಂಕುಗಳು ಮುಚ್ಚುತ್ತಿದ್ದು, ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ನೀರವ ಮೋದಿ ಮತ್ತು ವಿಜಯ ಮಲ್ಯ ನಂತವರಿಗೆ ಸಾಲ ನೀಡಿ ದಿವಾಳಿಯಾಗಿದ್ದು ಎಂದರು.
ಈ ರಾಷ್ಟ್ರ ಬದುಕುಳಿಯಲು ಪರ್ಯಾಯ ಮಾರ್ಗವೆಂದರೆ ಸಹಕಾರ ಸಂಘಗಳು. ಒಂದೊಂದು ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿದ ಅನಾಹುತಗಳನ್ನು ಯಾವುದೇ ಸಹಕಾರ ಸಂಘಗಳು ಮಾಡಿಲ್ಲ. ಇಂತಹ ಸಹಕಾರ ಕ್ಷೇತ್ರಗಳನ್ನು ಬೆಳೆಯಲು ಐ.ಎ.ಎಸ್ ಮತ್ತು ಐ.ಪಿ.ಎಸ್ ನಂತಹ ಅಧಿಕಾರಿಗಳು ಹಿಂದೆಟಿನ ಪರಿಣಾಮ ಸಹಕಾರ ಕ್ಷೇತ್ರಗಳ ಸೇವೆ ಪ್ರತಿ ಮನೆಗಳಿಗೂ ತಲುಪುತ್ತಿಲ್ಲ. ಸರಕಾರ ಸಾಲ ಮನ್ನಾ ಮಾಡಿದ್ದು ಎಂದರೆ ಅದು ಮೊದಲು ಸಹಕಾರ ಕ್ಷೇತ್ರದಲ್ಲಿ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಲ್ಲಿ 32 ಲಕ್ಷ ರೈತ ಕುಟುಂಬಗಳಿಗೆ ಸಾಲ ನೀಡಿದೆ. ಸಹಕಾರಿ ಬ್ಯಾಂಕ್ ಎಲ್ಲ ಕಡ ಬಡವರನ್ನು ಸಲುಗಿ ಶತಮಾನೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಬ್ಯಾಂಕ್ ಇನ್ನು ಸಾವಿರಾರು ವರ್ಷ ಬದುಕುಳಿಯಲಿ ಎಂದು ಆಶಿಷಿದರು.
ಸಹಕಾರ ಸಚಿವರಾ ಬಂಡೆಪ್ಪ ಕಾಶೆಂಪೂರ ಮಾತನಾಡಿ ಕಳೇ ವರ್ಷದಲ್ಲಿ 800 ಕೋಟಿ ರೈತರ ಸಾಲ ಮನ್ನಾ ಮಾಡಿದರೆ ಈ ವರ್ಷ 750 ರೈತರ ಸಾಲ ಮನ್ನಾ ಮಾಡಿದೆ. ರೈತರ ಪರವಾಗಿ ಕಾಳಜಿ ವಹಿಸುತ್ತಿರುವ ಕನರ್ಾಟಕ ಸರಕಾರದ ಮಾರ್ಗವನ್ನು ಎಲ್ಲ ರಾಜ್ಯಗಳು ಅನುಸರಿಸುತ್ತಿವೆ. ರಾಜ್ಯದ 1,69,544 ರೈತರಿಗೆ 963 ಕೋಟಿ ರೂ.ಗಳನ್ನು ಟಾನ್ಸಪರ್ ಮಾಡಲಾಗಿದ್ದು, ಇನ್ನು 350 ಕೋಟಿ ಹಣ ಉಳಿದಿದ್ದು, ಹಂತ ಹಂತವಾಗಿ ನೀಡಲಾಗುವುದೆಂದರು. ದೇಶದಲ್ಲಿ ರೈತರಿಂದ ಮಾಹಿತಿ ಪಡೆದು ನೇರವಾಗಿ ಅವರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಇದರಿಂದ ಮಧ್ಯವತರ್ಿಗಳಿಂದ ಆಗುವ ಅನ್ಯಾಯವನ್ನು ತಪ್ಪಿಸಲಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಪೇಜಾವರ ಮಠದ 1008 ವಿಶ್ವೇಶ್ವರತೀರ್ಥ ಪಾದಂಗಳ ಅವರು ರೈತ ಮತ್ತು ಸಹಕಾರಿ ಕ್ಷೇತ್ರಗಳು ಸಮೃದ್ದಿಯಾಗಿದ್ದರೆ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ. ಆದ್ದರಿಂದ ಸರಕಾರ ಸಹಕಾರ ಕ್ಷೇತ್ರವನ್ನು ಬಲಿಷ್ಟಪಡಿಸುವ ಕಾರ್ಯವಾಗಬೇಕು. ಈ ಕುರಿತು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಜೊತೆ ಮಾತನಾಡಿ ಸಮಸ್ಯೆಗೆ ಸ್ಪಂದಿಸಲು ತಿಳಿಸಿರುವುದಾಗಿ ಹೇಳಿದರು.
ಹೊಳೆ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮಿಗಳು, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ, ಎಂ.ವಿ.ಬನ್ನಿ, ನಾರಾಯಣಸಾ ಭಾಂಡಗೆ, ಸ್ವಾಗತ ಸಮಿತಿ ಅಧ್ಯಕ್ಷ ದಾಮೋದರ, ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಶೀಲವಂತ, ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಉಪನಿಬಂಧಕ ಎಸ್.ಎಸ್.ಮುಳ್ಳೂರ, ನಬಾರ್ಡ ಬ್ಯಾಂಕಿನ ನಿದರ್ೇಶಕ ಗದ್ದನಕೇರಿ, ಹನಮಂತ ಮಾವಿನಮರದ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಮಹಾಂತೇಶ ಮಮದಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.