ನಾಳೆ ಬೆನಕನಕೊಂಡ ಗ್ರಾಮದಲ್ಲಿ ಕುಮಾರೇಶ್ವರ ಜೀವನ ದರ್ಶನ ಪ್ರವಚನದ ಮುಕ್ತಾಯ ಸಮಾರಂಭ

Closing ceremony of Kumareshwara's life-long discourse in Benakanakonda village tomorrow

ನಾಳೆ ಬೆನಕನಕೊಂಡ ಗ್ರಾಮದಲ್ಲಿ   ಕುಮಾರೇಶ್ವರ ಜೀವನ ದರ್ಶನ ಪ್ರವಚನದ ಮುಕ್ತಾಯ ಸಮಾರಂಭ 

ರಾಣೇಬೆನ್ನೂರು 14: ರಾಣೇಬೆನ್ನೂರು ತಾಲೂಕಿನ ಜೋಯಿಸರಹರಳಹಳ್ಳಿಯ ಶ್ರೀ ಕುಮಾರೇಶ್ವರ ಮಠದ 5 ನೇ ವರ್ಷದ ಮಹಾರತೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿರುವ ಹಳ್ಳಿಗಳಲ್ಲಿಯ ‘ಜನ ಜಾಗೃತಿ ಪಾದಯಾತ್ರೆಯು ಬೆನಕನಕೊಂಡ ಗ್ರಾಮದಲ್ಲಿ 11-03-2025 ರಂದು ಶ್ರೀ ಕುಮಾರೇಶ್ವರ ಜ್ಯೋತಿ ರಥಯಾತ್ರೆಯೊಂದಿಗೆ ಪ್ರಾರಂಭಗೊಂಡಿತು. ತನ್ನಿಮಿತ್ತ 5 ದಿನಗಳ ಕಾಲ ಹಾನಗಲ್ಲ ಕುಮಾರಶಿವಯೋಗಿಗಳವರ ಜೀವನ ದರ್ಶನ ಪ್ರವಚನವು, ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಮನೆ ಮನೆಗೆ ತೆರಳಿ ಭಸ್ಮ, ರುದ್ರಾಕ್ಷಿಗಳನ್ನು ನೀಡಿ ದುಶ್ಚಟಗಳ ಬೀಕ್ಷೆ, ಸದ್ಗುಣಗಳ ದೀಕ್ಷೆ ಕಾರ್ಯಕ್ರಮವು ವಿದಾಯಕವಾಗಿ ನೆರವೇರುತ್ತಿದೆ. ಇದರ ಮುಕ್ತಾಯ ಸಮಾರಂಭವು 15-03-2025 ರಂದು ಇದ್ದು   ಹಾವೇರಿ ಹುಕ್ಕೇರಿ ಮಠದ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಹೊಳಲಿನ ಮಲ್ಲಿಕಾರ್ಜುನ ಮಠದ   ಚನ್ನಬಸವ ದೇವರು ನೇತೃತ್ವವನ್ನು ಹಾಗೂ ಬೆಳಗಾವಿ ಕಾರಂಜಿ ಮಠದ   ಡಾ. ಶಿವಯೋಗಿ ದೇವರು ಸಮ್ಮುಖಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೈತ ಮುಖಂಡರಾದ ರವೀಂದ್ರಗೌಡ ಎಫ್‌. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಬೆನಕನಕೊಂಡ ಹಾಗೂ ಸುತ್ತಮುತ್ತಲಿನ ಊರ ಪ್ರಮುಖರು ಹಾಗೂ ಸಮಸ್ತ ಭಕ್ತವೃಂಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಿದ್ದಾರೂಡಮಠದ ಕಮಿಟಿ ಬಳಗದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.