ಎನ್.ಎಸ್.ಎಸ್ ಘಟಕದ ಕಾರ್ಯಚಟುವಟಿಕೆಗಳ ಸಮಾರೋಪ: ಯುವಜನಾಂಗ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ: ಕುಡ್ಡನ್ನವರ ಕರೆ

ಅಥಣಿ 05: ಆಥರ್ಿಕವಾಗಿ ಸಧೃಢರಾಗಲು ಕೇವಲ ನೌಕರಿಯೊಂದೇ ದಾರಿ ಎನ್ನುವದನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಿ ಸಾಕಷ್ಟು ಅವಕಾಶಗಳು ನಿಮ್ಮನ್ನು ಆಥರ್ಿಕ ಸಧೃಢತೆಯತ್ತ ಕೊಂಡೊಯ್ಯಲು ಕಾಯುತ್ತಿರುತ್ತವೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಎಸ್.ಎಲ್. ಕುಡ್ಡನ್ನವರ ಹೇಳಿದರು.

 ಅವರು ಕೆ ಎಲ್ ಇ ಸಂಸ್ಥೆಯ ಸ್ಥಳೀಯ ಎಸ್.ಎಸ್.ಎಮ್.ಎಸ್ ಪದವಿ ಮಹಾವಿದ್ಯಾಲಯದಎನ್.ಎಸ್.ಎಸ್ ಘಟಕದ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.

             ಇಂದಿನ ಯುವಜನಾಂಗ ನೌಕರಿಗಾಗಿ ಕಾಯುತ್ತಾ ಕೂಡದೇ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು. ವಿಶೇಷ ತೋಟಗಾರಿಕಾ ಬೆಳೆಗಳನ್ನು ಅತ್ಯಾಧುನಿಕ ಪದ್ಧತಿಗಳನ್ನು ಬಳಸಿ ಆಥರ್ಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದ ಅವರು, ಕೇವಲ ಕಂಪ್ಯೂಟರ ಅಥವಾ ಎಲೆಕ್ಟ್ರಾನಿಕ್ಸ ಕ್ಷೇತ್ರದಲ್ಲಿ ಮಾತ್ರ ಆಥರ್ಿಕ ಸಬಲತೆ ಕಾಣಬಹುದು ಎನ್ನುವುದಕ್ಕಿಂತ, ಆಟ, ಕಲೆ, ಸಂಗೀತ, ದಿನ ನಿತ್ಯ ಬಳಸುವಂತ ಉತ್ಪನ್ನಗಳ ಮಾರಾಟ ಮುಂತಾದ ಕ್ಷೇತ್ರಗಳಲ್ಲಿಯೂ ಸಹ ಆಥರ್ಿಕವಾಗಿ ಗಟ್ಟಿಯಾಗಬಹುದು ಎಂದ ಅವರು ಶ್ರಮ ಪಡುವ ಗಟ್ಟಿ ಮನಸ್ಸಿದ್ದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಕಾಣಬಹುದು ಎಂದರು. 

         ನಂತರ ಎನ್.ಎಸ್.ಎಸ್ ನಾಯಕರಾದ ಸಾಗರ ಹಳ್ಳದಮಳ, ರಾಕೇಶ ಹೆಗ್ಗಣವರ ನಾಯಕಿಯರಾದ ಶೈಲಾ ಮೇತ್ರಿ ಎನ್.ಎನ್.ಎಸ್ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ವರ್ಷದುದ್ದಕ್ಕೂ ಉತ್ತಮಸಾಧನೆಗಳನ್ನು ಮಾಡಿದ ಗಣಪತಿ ಹಳ್ಳದಮಳ- ಶಿಸ್ತು ಪರಿಪಾಲಕ ,ಅರುಣಕುಮಾರ ಯಲ್ಲಟ್ಟಿ - ಉತ್ತಮವರದಿಗಾರ, ಸಾಗರ ಹಳ್ಳದಮಳ, ಸ್ನೇಹಾ ಮೇತ್ರಿ, ಜಯಶ್ರೀ ಸನದಿ, ಲಕ್ಶ್ಮೀಗುಮಟಿಉತ್ತಮ ಸಂಘಟನಾಕಾರರು, ಚಿದಾನಂದ ಚಮಕೇರಿ-ಉತ್ತಮ ಸ್ವಯಂ ಸೇವಕ, ಸಾಗರ ಗಣಿ- ಉತ್ತಮ ನಿರೂಪಕ ಪ್ರಶಸ್ತಿ ನೀಡಲಾಯಿತು.

ಶಿಬಿರದ ಹಾಗೂ ವಾಷರ್ಿಕ ವರದಿಯ ಉತ್ತಮ ಬರವಣಿಗೆಗಾಗಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ತುಂಗಭದ್ರಾ ತಂಡಗಳು ಪ್ರಶಸ್ತಿಗಳನ್ನು ಪಡೆದುಕೊಂಡರು.

 ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಫ್.ಇಂಚಲ ವಹಿಸಿದ್ದರು. ಎನ್.ಎಸ್.ಎಸ್ ಅಧಿಕಾರಿ ಡಾ.ಎಸ್.ವಾಯ್.ಹೊನ್ನುಂಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎನ್.ಎಸ್ ಗೀತೆಯನ್ನು ಅಶ್ವಿನಿ ನರಗುಂದ ಹಾಗೂ ಸಂಗಡಿಗರು ಹಾಡಿದರು. ಸ್ವಾಗತವನ್ನು ಸಾಗರಗಣಿ, ಪರಿಚಯವನ್ನು ಅಶ್ವಿನಿ ಬಾವಡೇಕರ, ಎನ್.ಎಸ್.ಎಸ್ ವಾಷರ್ಿಕ ವರದಿಯನ್ನು ಜಯಶ್ರೀ ಸನದಿ, ಬಹುಮಾನ ವಿತರಣೆಯನ್ನು ಶ್ರೀದೇವಿ ಕಿದ್ರಾಪುರ, ರಾಜಶ್ರೀ ಹಳಿಂಗಳಿ ವಂದಿಸಿದರು. 

ಪ್ರೋ.ಕೆ.ಎಸ್.ಚಂಡಿ ಹಾಗೂ ಪ್ರೋ.ಮಂಜುನಾಥಎನ್.ವಿ ಉಪಸ್ಥಿತರಿದ್ದರು.