ಅವಳಿ ನಗರದಲ್ಲಿ ಮೂಲಭೂತ ಸೌಕರ್ಯ ವಂಚಿತ ನಾಗರಿಕರು: ಪಾಲನಕರ
Citizens deprived of basic amenities in twin cities: Guardian
ಅವಳಿ ನಗರದಲ್ಲಿ ಮೂಲಭೂತ ಸೌಕರ್ಯ ವಂಚಿತ ನಾಗರಿಕರು: ಪಾಲನಕರ
ಗದಗ 07: ಬೆಟಗೇರಿ ನಗರಸಭೆಯ ಒಟ್ಟು 35 ವಾರ್ಡಗಳ ಜನಪ್ರತಿನಿದಿಗಳು ಮಾತ್ರ ಯಾವುದೇ ಜನಪರ ಯೋಜನೆ, ಹಾಗೂ ತಮ್ಮ ಬಡಾವಣೆಯ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ರಸ್ತೆ, ಗಟಾರ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ, ಹಾಗೂ ಇನ್ನಿತರೇ ಅಭಿವೃದ್ಧಿ ಪರ ಕಾರ್ಯಯೋಜನೆಗಳನ್ನು ಕೈಗೊಳ್ಳುವುದರಿಂದ ಹಿನ್ನೆಡೆಯನ್ನು ಅನುಭವಿಸುತ್ತಿರುವರು ಕಾರಣಾಠರದಿಂದಾಗಿ ಗದಗ ಬೆಟಗೇರಿ ನಗರಸಭೆಯಲ್ಲಿ ಹಲವಾರು ಅಹಿತಕರ ಘಟನೆಯಿಂದಾಗಿ ಅವಳಿ ನಗರದಲ್ಲಿ ಜಿಲ್ಲಾಡಳಿತದ ಸುಪರ್ಧಿಯಲ್ಲಿರುವದು. ಹೀಗಿರುವಾಗ ಸಂವಿಧಾನ ಬದ್ದವಾಗಿ ಮತದಾರರಿಂದ ಚುನಾಯಿತರಾದ ಜನಪ್ರತಿನಿದಿಗಳಾದ ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡಿನ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತುಂಬಾ ಅನಾನುಕೂಲ ಉಂಟಾಗಿರುತ್ತದೆ.
ಇಂತಹ ಸಂಧಿಘತೆಯಲ್ಲಿ ನಗರದಲ್ಲಿನ ಎರಡು ವಾರ್ಡಗಳ ಗಡಿಯಲ್ಲಿನ ಬಡಾವಣೆಗಳಲ್ಲಿನ ನಿವಾಸಿಗಳಿಗೆ ಮೂಲಭೂತವಾಗಿ ಅತ್ಯಗತ್ಯವಾದ ಸಮರಾ್ವದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ದುರಸ್ಥಿ ಹಾಗೂ ಗಟಾರ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಇನ್ನೂ ಮುಂತಾದ ಮೂಲಭೂತ ಸೌಕರ್ಯಗಳು ಸದರ ಎರಡು ವಾರ್ಡಿನ ಗಡಿಯಲ್ಲಿನ ನಿವಾಸಿಗಳಿಗೆ ಮರೀಚಿಕೆಯಾಗಿರುತ್ತದೆ. ಇದರಲ್ಲಿ ಪ್ರಮುಖವಾಗಿ ಮೂರು ಮತ್ತು ನಾಲ್ಕನೇ ವಾರ್ಡಿನ ಬಡಾವಣೆಗಳಾದ ಜರ್ಮನ್ ಆಸ್ಪತ್ರೆ ವಿಭಾಗ, 22 ಹಾಗೂ 23 ವಾರ್ಡಿನ ಗಡಿ ಭಾಗವಾದ ಸಿ ಡಿ ಓ ಜೈನ್ ಶಾಲೆಯ ರಸ್ತೆ, ಹಾಗೂ ಜವುಳ ಗಲ್ಲಿ ಭಾಗದ 17 ಮತ್ತು 18 ನೇ ವಾರ್ಡಿನ ಚವ್ವಾಣ ರವರ ಮನೆಯಿಂದ ಮಹೇಂದ್ರಕರ ಸರ್ಕಲ್ ಸಂಪರ್ಕಿಸುವ ಮೀನು ಮಾರುಕಟ್ಟೆಯ ಪ್ರಮುಖ ರಸ್ತೆಗಳು ಹಾಗೂ ಐತಿಹಾಸಿಕ ವೀರನಾರಾಯಣ ದೇವಸ್ಥಾನಕ್ಕೆ ಹತ್ತಿರದಲ್ಲಿರುವ 23 ಮತ್ತು 20 ನೇ ವಾರ್ಡಿನ ಗಂಜೀ ಬಸವೇಶ್ವರ ಸರ್ಕಲ್ ಹತ್ತಿರ ಪ್ರಮುಖ ರಸ್ತೆಯಲ್ಲೇ ಸಾರ್ವಜನಿಕ ಮುತ್ರಾಲಯವಿದ್ದು, ಅದರ ಪಕ್ಕದಲ್ಲಿಯೇ ಬಡಾವಣೆಗೇ ನೀರು ಸರಬರಾಜು ಮಾಡುವ ವಾಲ್ ಇದ್ದು, ಅದರ ಮೇಲೆಯೇ ಕಸದ ರಾಶಿ ಹಾಗೂ ಕೊಳಚೆ ನೀರು ಹರಿಯುತ್ತದೆ.
ಮೂರು ಮತ್ತು ನಾಲ್ಕನೇ ವಾರ್ಡಿನಲ್ಲಿ ರಸ್ತೆಯು ಮಳೆಗಾಲದಲ್ಲಿ ಕೇಸರಿನಿಂದ ಕೂಡಿದ್ದು, ಇಲ್ಲಿಯೇ ಅನಾದಿ ಕಾಲದಿಂದಲೂ ಸಾರ್ವಜನಿಕ ಗಜಾನನ ಉತ್ಸವ ಜರುಗುತ್ತದೆ. ಆದರೂ ರಸ್ತೆ ದುರಸ್ಥಿ ಕಾಣದಾಗಿದೆ. ನಗರಸಭೆಯ ಚುನಾಯಿತ ಸದಸ್ಯರು ಮಾತ್ರ ಒಬ್ಬರ ಮೇಲೆ ಒಬ್ಬರು ಹಾಕುತ್ತಾ ಅವರು ಮಾಡುತ್ತಾರೆ. ಇವರು ಮಾಡುತ್ತಾರೆ ಎನ್ನುತ್ತಾ ಅಭಿವೃದ್ಧಿ ಕಾರ್ಯಗಳಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿರುವರು. ಆದುದರಿಂದ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಈ ಒಂದು ಎರಡು ಗಡಿಯಲ್ಲಿನ ನಿವಾಸಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ನಿವಾರಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 