ಚೌಡಯ್ಯನವರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ

Choudaiya's various religious worship programs

ಚೌಡಯ್ಯನವರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು  

ರಾಣಿಬೆನ್ನೂರ 15:  ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿ ತಟದಲ್ಲಿರುವ ನಿಜಶರಣ  ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ಕುಂಬಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಂಗಳವಾರ ಭಕ್ತಿ ಭಾವದಿಂದ ನಡೆದವು. 

  ಗ್ರಾಮದ ಶ್ರೀಗಳ ಮಠದಿಂದ ಬೆಳಿಗ್ಗೆ 10ಗಂಟೆಗೆ  ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ವಿರುಪಾಕ್ಷ ಒಡೆಯರ ಅವರ ಭಾವಚಿತ್ರದ ಮೆರವಣಿಗೆಯು ಪ್ರಾರಂಭಗೊಂಡು ನಂತರ ತುಂಗಭದ್ರ ನದಿ ತಟದಲ್ಲಿರುವ ಚೌಡಯ್ಯನವರ ಐಕ್ಯ ಮಂಟಪಕ್ಕೆ ಬಂದು ತಲುಪಿತು.   

   ಅಭಿಷೇಕದ ನಂತರ ಶ್ರೀಗಳನ್ನು ಶೃಂಗರಿಸಿದ ದೋಣೆಯಲ್ಲಿ ಕರೆದೋಯ್ದು ನದಿಯ ಮಧ್ಯದಲ್ಲಿರುವ ಈಶ್ವರ ಲಿಂಗುವಿಗೆ ಪೂಜೆಯನ್ನು ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಜಾಂಜ್ ಮೇಳ, ಭಜನೆ ಸೇರಿದಂತೆ ವಿವಿಧ ವಾದ್ಯವೃಂದಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು. ಗ್ರಾಮಸ್ಥರು, ಶರಣ ಚೌಡಯ್ಯನವರ ಭಕ್ತರು, ಮಹಿಳೆಯರು ಸೇರಿದಂತೆ ಸಹಸ್ರಾರು ಭಕ್ತರು ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಇದ್ದರು. ನಂತರ ಶ್ರೀಗಳ ಮಠದಲ್ಲಿ ಅನ್ನಸಂತರೆ​‍್ಣ ನಡೆಯಿತು.