ಮಕ್ಕಳು ಅರಿವಿನ ಪ್ರಜ್ಞೆ, ಸಂಸ್ಕಾರ ಬೆಳೆಸಿಕೊಳ್ಳಬೇಕು: ಡಾ. ನಿಜಗುಣಾನಂದ ಶ್ರೀಗಳು
Children should develop a sense of awareness and culture: Dr. Nijagunananda
ಹಾರೂಗೇರಿ : ತಾವು ಉಪವಾಸವಿದ್ದು, ತಮ್ಮ ಮಕ್ಕಳನ್ನು ಓದಿಸಿ, ಅವರ ಬದುಕಿಗೆ ಬೆಳಕು ನೀಡುವ ತಂದೆ, ತಾಯಿ ತ್ಯಾಗವನ್ನು ವಿದ್ಯಾರ್ಥಿಗಳು ಮರೆಯಬಾರದು. ಅರಿವಿನ ಪ್ರಜ್ಞೆ, ಸಂಸ್ಕಾರ ಬೆಳೆಸಿಕೊಳ್ಳಬೇಕೆಂದು ಬೈಲೂರು ನಿಷ್ಕಲ ಮಂಟಪದ ಶ್ರೀ ಡಾ. ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ಆರ್.ದರೂರ ಸಾಹೇಬರ ಜಯಂತ್ಯುತ್ಸವ ನಿಮಿತ್ತ ಕೊಡಮಾಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳ ಧ್ಯೇಯ ಕೇವಲ ನೌಕರಿ, ಹಣ, ಸಂಪತ್ತು, ಪ್ರಖ್ಯಾತಿ ಗಳಿಸುವುದಕ್ಕೆ ಸೀಮಿತವಾಗಬಾರದು. ಅಧಿಕಾರ, ಹಣ ಮನಸ್ಸಿನಿಂದ ಮರೆಯಾಗುತ್ತದೆ. ಆದರೆ ಬಿ.ಆರ್.ದರೂರ ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಾತ್ರ ಜನಮಾನಸಲ್ಲಿ ಶಾಶ್ವತವಾಗಿ ಉಳಿದಿದೆ ಎಂದರು.
ಅಧ್ಯಕ್ಷೀಯ ಪರ ಮಾತನಾಡಿದ ಸಾಹಿತಿ ಡಾ.ವಿ.ಎಸ್.ಮಾಳಿ ಅವರು ಬಿ.ಆರ್.ದರೂರ ಸಾಹೇಬರು ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸಿದ್ದರಿಂದಲೇ ಜನ ಅವರನ್ನು ಸಾಹೇಬರು ಎನ್ನುತ್ತಿದ್ದಾರೆ. ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆ ಮೂಲಕ ನಿಜವಾದ ಸಮಾಜ ಸೇವೆ ಸಲ್ಲಿಸುವುದೇ ಸಾಹೇಬರ ಆಶಯವಾಗಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಗಣ್ಯರಾದ ರಾಮಣ್ಣ ಗಸ್ತಿ ಮಾತನಾಡುತ್ತ ಬಿ.ಆರ್.ದರೂರ ಈ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದ್ದಾರೆಂದು ಹೇಳಿದರು. ಈ ವೇಳೆ ಅಥಣಿ ತಾಲೂಕಿನ ಸಂಕೋನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮತ್ತು ಆದರ್ಶ ಶಿಕ್ಷಕಿ ಕವಿತಾ ಸೊಂಡೂರ ಅವರಿಗೆ ಬಿ.ಆರ್.ದರೂರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಂಸ್ಥೆ ಅಧ್ಯಕ್ಷ ಗೀರೀಶ ದರೂರ, ಅತಿಥಿಗಳಾಗಿ ಪಿಕೆಪಿಎಸ್ ಅಧ್ಯಕ್ಷ ಜಿನ್ನಪ್ಪ ಅಸ್ಕಿ, ಆರ್.ಎಸ್.ಯಲಶೆಟ್ಟಿ, ಭೀಮಪ್ಪ ಬದ್ನಿಕಾಯಿ, ಎಸ್.ಎಲ್.ಜಾಧವ, ಶ್ರೀಪಾಲ ದಟವಾಡ, ಪ್ರಾಚಾರ್ಯ ಸರಥ್ ಕೆ.ಎಸ್, ಡಾ.ಸಿ.ಆರ್.ಗುಡಸಿ, ಡಾ.ಐ.ಆರ್.ಕೊಕಟನೂರ, ಪ್ರೊ.ಎಸ್.ಜಿ.ಸುಳ್ಳದ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 