ಮಕ್ಕಳನ್ನು ಪ್ರೀತಿ ಪ್ರೇಮದಿಂದ ಕಾಣಬೇಕು: ಕಲಾದಾಗಿ

ಮಕ್ಕಳನ್ನು ಪ್ರೀತಿ ಪ್ರೇಮದಿಂದ ಕಾಣಬೇಕು: ಕಲಾದಾಗಿ Children should be treated with love and affection: Kaladagi

           ವಿಜಯಪುರ 14: ಮಕ್ಕಳು ದೇಶದ ಆಸ್ತಿ ಅವರನ್ನು ಪ್ರೀತಿ ಪ್ರೇಮದಿಂದ ಕಾಣಬೇಕು ಎಂದು ಸಮಾಜ ಸೇವಕ ಫಯಾಜ ಕಲಾದಾಗಿ ಹೇಳಿದರು. ನಗರದ ಗ್ಯಾಲಕ್ಸಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಆಹಾರ ಮೇಳವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ದೇಶದ ಭವಿಷ್ಯ, ಅವರನ್ನು ಪ್ರೀತಿ, ಕಾಳಜಿ ಮತ್ತು ಉತ್ತಮ ಶಿಕ್ಷಣದಿಂದ ಬೆಳೆಸುವುದು ನಮ್ಮ ಕರ್ತವ್ಯ. ಪ್ರತಿ ವರ್ಷ ನವೆಂಬರ್ 14 ಅನ್ನು ಮಕ್ಕಳ ದಿನವೆಂದು ಆಚರಿಸಲಾಗುತ್ತದೆ. ಈ ದಿನವು ಭಾರತ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ ನೆಹರೂ ಅವರ ಜನ್ಮ ದಿನವಾಗಿದ್ದು, ಅವರು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದರಿಂದ ಅವರನ್ನು "ಚಾಚಾ ನೆಹರೂ" ಎಂದು ಕರೆಯಲಾಗುತ್ತದೆ.

   ಮಕ್ಕಳ ಮಹತ್ವವನ್ನು ಜಗತ್ತಿಗೆ ತಿಳಿಸುವ ದಿನವೆಂದೂ ಇದನ್ನು ಪರಿಗಣಿಸಲಾಗುತ್ತದೆ. ಮಕ್ಕಳ ದಿನದ ಮುಖ್ಯ ಉದ್ದೇಶ ಮಕ್ಕಳಲ್ಲಿ ಸ್ವಾಭಿಮಾನ, ಸೃಜನಶೀಲತೆ, ಓದು-ಕಲಿಕೆ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿತೆಗಳನ್ನು ಬೆಳೆಸುವುದು. ಈ ದಿನ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಪ್ರಾರ್ಥನಾ ಸಭೆಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತದೆ; ಬಳಿಕ ಶಿಕ್ಷಕರು ಮತ್ತು ಅತಿಥಿಗಳು ಚಾಚಾ ನೆಹರೂ ಅವರ ತತ್ವಗಳು ಹಾಗೂ ಶಿಕ್ಷಣದ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಳ್ಳುತ್ತಾರೆ ಎಂದರು. 

       ಈ ಸಂದರ್ಭದಲ್ಲಿ ಶೇಷಾರಾವ್ ಮಾನೆ ಮಾತನಾಡಿ ವಿಜಯಪುರ ಜಿಲ್ಲೆಯು ಸೂಫಿ ಸಂತರ ನಾಡಾಗಿದ್ದು, ಇಲ್ಲಿ ಅನೇಕ ಮಹಾನ ವ್ಯಕ್ತಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಆರ್‌.ಜಿ.ಕೋಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿ.ಡಿ.ಕೋಟ್ನಾಳ, ಖಾನ್‌ಬಾಬಾ, ಆರ್ ಡಿ ಕದಂ, ಆರ್ ಎಂ ಇನಾಮದಾರ, ಆರ್ ಜಿ ಬಿರಾದಾರ, ಐ ಜಿ ಕೋಟ್ನಾಳ, ಜೆ ಎಸ್ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳು ಮತ್ತು ಪಾಲಕರು ಪೋಷಕರು ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.