ಮಕ್ಕಳ ಸವಾಂರ್ಗಿನ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು: ನಡಗಡ್ಡಿ

ಮಕ್ಕಳ ಸವಾಂರ್ಗಿನ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು: ನಡಗಡ್ಡಿ  Children should be given opportunities to achieve self-development: Nadagaddi

ತಾಂಬಾ 11: ಪ್ರತಿಯೊಂದು ಮಗುವಿನಲ್ಲೂ ಸಂಸ್ಕೃತಿಕ ಪ್ರತಿಭೆ ಅಡಿಗಿರುತ್ತದೆ ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳ ಸವಾಂರ್ಗಿನ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಸ್‌.ಆರ್‌.ನಡಗಡ್ಡಿ ಹೆಳಿದರು.  ಗ್ರಾಮದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏರಿ​‍್ಡಸಿದ್ದ ತಾಂಬಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿಯನ್ನು ಆಯೋಜಿಸಿದೆ ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ ಸಾಹಿತ್ಯ ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ನಿರ್ಣಾಯಕರು ಸೂಕ್ತವಾದ ನಿರ್ಣಯವನ್ನು ಕೊಟ್ಟು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತ್ತು ಹೇಳಿದರು.               ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಜಿ.ಎಂ.ಗುಳಗಿ ಮಾತನಾಡಿ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಸರಿಯಾದ ವೇಳೆಗೆ ಶಿಕ್ಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು ಮಕ್ಕಳು ಆಗ ಯಶಸ್ವಿಯಾದ ಸಾಧನೆ ಮಾಡಲಿದ್ದಾರೆ ಎಂದರು.  ಗ್ರಾಪಂ ಅಧ್ಯಕ್ಷರಾದ ಆಸ್ಮಾ ರಜಾಕಸಾಬ ಚಿಕ್ಕಗಿಸಿ, ಉಪಾಧ್ಯಕ್ಷರಾದ ರಾಮಚಂದ್ರ ದೊಡಮನಿ, ಮಾಜಿ ತಾಪಂ ಸದಸ್ಯರಾದ ಪ್ರಕಾಶ ಮುಂಜಿ, ಪಿಕೆಪಿಎಸ್ ಅಧ್ಯಕ್ಷರಾದ ಲಕ್ಷ್ಮಣ ಹಿರೇಕುರಬರ, ಎ.ಸಿ.ಹುಣಸಿಗಿ, ಸಿ.ಬಿ.ಬಿರಾದಾರ, ಎ.ಜಿ.ರಾಠೋಡ, ಶರಣು ಖ್ಯಾತ, ಮುರಾರ್ಜಿ ಶಾಲೆಯ ಪ್ರಾಚಾರ್ಯ ಸಜ್ಜನ್‌ಸರ್, ಆನಂದ ಕೆಂಭಾವಿ ಸೇರಿದಂತೆ ಮತಿತರರು ಉಪಸ್ಥಿತರಿದ್ದರು  ಇದಕ್ಕೂ ಮೊದಲು ಮಕ್ಕಳು ಪ್ರಾಥ ಸ್ವಾಗತಿಯೊಂದಿಗೆ ಸಭೆ ಪ್ರಾರಂಭಗೊಂಡಿತು. ಶಿಕ್ಷಕ ಬಿ.ಬಿ.ಬರಮಣ್ಣ ಸ್ವಾಗತಿಸಿದರು, ಕೆ.ಬಿ ಬರಮಣ್ಣ ನಿರೂಪಿಸಿದರು. ಕೆ.ಕೆ.ಕನ್ನೂರ ವಂದಿಸಿದರು.