ಕೊಪ್ಪಳ 04: ಖಾಸಿಗೆ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಇಲಾಖೆ ಸಹಕಾರ ನೀಡಿದಾಗ ಮಾತ್ರ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲೂ ಸಾಧ್ಯವೆಂದು ಹೈದ್ರಾಬಾದ್ ಕನರ್ಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಹೇಳಿದರು.
ಅವರು ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಶೃಕ್ಷಣಿಕ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹೈದ್ರಾಭಾದ್ ಕನರ್ಾಟಕದಂತಹ ಹಿಂದೂಳಿದ ಪ್ರದೇಶದಲ್ಲಿ ಶೃಕ್ಷಣಿಕ ಸೇವೆ ಮಾಡುವಂತಹದ್ದು ಸವಾಲಿನ ಸಂಗತಿಯಾಗಿದೆ. ಶಿಕ್ಷಣ ಇಲಾಖೆ ದಿನಕೊಂದು ನೂತನ ನಿಯಮದಿಂದ ಸಾಕಷ್ಟು ಗೊಂದಲು ಉಂಟಾಗುತ್ತದೆ ಸರಕಾರ ಇಲಾಖೆಯಿಂದ ಕಾನೂನು ಅಡಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಲಾ ನವಿಕರಣ ಹಾಗೂ ಸಕರ್ಾರದಿಂದ ಬರುವ ಪುಸ್ತಕ ಹಂಚಿಕೆ, ಇಲಾಖೆಯಿಂದ ಸೂಚನೆಗಳು ನೋಟಿಸ ನೀಡುವಾಗ ಖಾಸಿಗೆ ಶಾಲೆಗಳಿಗೆ ಸಹಕಾರ ನೀಡಿಬೇಕು. ಸಕರ್ಾರ ಮಾಡದಂತ ಕೆಲಸವನ್ನು ಖಾಸಿಗೆ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವಂತಹ ಕೆಲಸಗಳನ್ನು ಮಾಡುತ್ತೆವೆ ಎಂದರು.
ಯಾವುದೇ ಎರಡು ಮೂರು ದೊಡ್ಡಶಾಲೆಗಳನ್ನು ಗಮನದಲ್ಲಿಟ್ಟು ಕೊಂಡು ಸಕರ್ಾರ ನಿಯಮ ರೂಪಿಸಿದರೆ ಗ್ರಾಮೀಣ ಭಾಗದಲ್ಲಿ ಕಷ್ಟ ಪಟ್ಟು ಶಿಕ್ಷಣ ನೀಡುವ ಶಾಲೆಗಳಿಗೆ ತೊಂದರೆ ಮಾಡುತ್ತದೆ ಅದನ್ನು ಗಮನದಲ್ಲಿ ಇರಿಸಿಕೊಂಡು ಇಲಾಖೆ ನಿಯಮಗಳನ್ನು ರೂಪಿಸಿ ಸಹಕರಿಸಿ ಬೇಕು ಎಂದರು.
ಕಾರ್ಯಗಾರ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ ಮಾತನಾಡಿ ಕಾನೂನ ಚೌಕಟ್ಟಿನಲ್ಲಿ ಕಾನೂನು ಬದ್ಧವಾಗಿ ಶೈಕ್ಷಣಿಕ ಸೇವೆ ಮಾಡಿ ಎಲ್ಲಾ ದಾಖಲಾತಿಗಳನ್ನು ಮತ್ತು ನಿಯಮನುಸಾರ ಶಾಲೆ ನಡೆಸಿ ಅಂದಾಗ ಮಾತ್ರ ಶಾಲೆಯಿಂದ ಉತ್ತಮ ಶಿಕ್ಷಣ ಸಾಧ್ಯ ಎಂದರು.
ಸಕರ್ಾರದ ನಿಯಮಗಳು ಮಕ್ಕಳ ರಕ್ಷಣೆ ಹಾಗೂ ಅವರಿಗೆ ಉತ್ತಮ ಶಿಕ್ಷಣದ ದೃಷ್ಟಿ ಹಾಗೂ ಕಡ್ಡಾಯ ಶಕ್ಷಣಕ್ಕಾಗಿ ರೂಪಿತವಾಗಿರುತ್ತದೆ. ಕಾನೂನು ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದರು.
ಶಿಕ್ಷಣ ಹಕ್ಕು ವಿದ್ಯಾರ್ಥಗಳಿಗೆ ಅಪ್ಲೋಡ್ ಮಾಡುವಾಗ ವಹಿಸಬೇಕಾದ ತಾಂತ್ರಿಕ ಎಚ್ಚರಿಕೆಗಳ ಕುರಿತಾಗಿ ಹನುಮಸಾಗರದ ಉದರ್ು ಶಾಲೆ ಮುಖ್ಯ ಶಿಕ್ಷಕ ಎಮ್.ಎಸ್.ಬಡದಾನಿ ಮಾತನಾಡಿದರು. ಶಾಲೆಗಳಿಲ್ಲಿ ಇಡಬೆಕಾದ ದಾಖಲೆಗಳು ಮತ್ತು ನಿರ್ವಹಣೆ ಕುರಿತಾಗಿ ನಿವೃತ್ತ ಉಪಪ್ರಾಚಾರ್ಯ ಕೃಷ್ಣಮೂತರ್ಿ ದೇಸಾಯಿ ಹಾಗೂ ಎಸ್.ಟಿ.ಎಸ್ ಮತ್ತು ಆರ್.ಡಿ.ಇ. ಆನಲೈನ್ ಕಾರ್ಯದ ಬಗ್ಗೆ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಜಿಲ್ಲಾ ಅನುದಾನ ರಹಿತ ಶಾಲಾ ಸಂಸ್ಥೆಗಳ ಒಕ್ಕೂಟದ ಕಾರ್ಯದಶರ್ಿ ಪ್ರಹ್ಲಾದ ಅಗಳಿ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಶಿವಕುಮಾರ ಕುಕನುರ ಉಪಸ್ಥಿತರಿದ್ದರು. ಬಸವರಾಜ ಶಿರಗುಂಪಿ ಶೆಟ್ರ ನಿರೂಪಿಸಿದರು. ರಾಜು ಚಿಲುವಾಡಿಗಿ ಸ್ವಾಗತಿಸಿದರು. ಶಕುಂತಲಾ ಬಿನ್ನಾಳ ತಮಡ ಪ್ರಾರ್ಥನೆ ಸಲ್ಲಿಸಿದ್ದರು. ಕೊನೆಯಲ್ಲಿ ಮಂಜುನಾಥ ಅಂಗಡಿ ವಂದಿಸಿದರು.