ಹಾವೇರಿ14: ಪುರವಂತಿಕೆಯಂತಹ ಜಾನಪದ ಕಲೆಗಳನ್ನು ನಮ್ಮ ಬಾಲಮಂದಿರದ ಮಕ್ಕಳು ಪ್ರದಶರ್ಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಪಿ.ವಾಯ್.ಶೆಟ್ಟೆಪ್ಪನವರ್ ಹೇಳಿದರು.
ಇತ್ತೀಚಿಗೆ ನಗರದ ಡಿ.ದೇವರಾಜ ಅರಸು ಭವನದಲ್ಲಿ ಕನರ್ಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲಕರ ಸಕರ್ಾರಿ ಬಾಲಮಂದಿರ ರಾಣೇಬೆನ್ನೂರು, ಬಾಲಕಿಯರ ಸಕರ್ಾರಿ ಬಾಲಮಂದಿರ ಹಾವೇರಿ ಹಾಗೂ ಶ್ರೀ ಶಕ್ತಿ ಅಸೋಸಿಯೆಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕರ ಸಕರ್ಾರಿ ಬಾಲಮಂದಿರ ರಾಣೇಬೆನ್ನೂರು, ಬಾಲಕಿಯರ ಸಕರ್ಾರಿ ಬಾಲಮಂದಿರ ಹಾವೇರಿ, ನಿರ್ಗತಿಕ ಕುಟೀರ, ತೆರೆದ ತಂಗುದಾಣ, ದತ್ತು ಸಂಸ್ಥೆಗಳಲ್ಲಿ ಮಕ್ಕಳ ಪಾಲನೆ ಪೋಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾಜರ್ುನ ಮಠದ ಮಾತನಾಡಿ ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. 6 ರಿಂದ 18 ವರ್ಷದೊಳಗಿನ ಅನಾಥ, ನಿರ್ಗತಿಕ, ಭಿಕ್ಷಾಟನೆ ಮಕ್ಕಳು ಕಂಡುಬಂದಲ್ಲಿ ತಕ್ಷಣವೇ 1098 ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆಮಾಡಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ಧ ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಅಧ್ಯಕ್ಷ ಎಸ್.ಹೆಚ್.ಮಜೀದ್ ಅವರು ಮಾತನಾಡಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲಕರ ಬಾಲಮಂದಿರದ ಮತ್ತು ಬಾಲಕಿಯರ ಬಾಲಮಂದಿರದ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀಮತಿ ಚೈತ್ರಾ.ಎಸ್.ಜಾವಗಲ್ ಸ್ವಾಗತಿಸಿದರು. ಶೈಲಾ ಬಿದರಗಡ್ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ರಾಣೇಬೆನ್ನೂರ ಸಂಸ್ಥೆಯ ಅಧೀಕ್ಷಕರಾದ ಶ್ರೀಮತಿ ಜಯಶ್ರೀ ಪಾಟೀಲ, ಹಾವೇರಿ ಸಂಸ್ಥೆಯ ಅಧೀಕ್ಷಕರಾದ ಶ್ರೀಮತಿ ನೇತ್ರಾವತಿ ಜಿ ಹಾಗೂ ಇತರರು ಉಪಸ್ಥಿತರಿದ್ದರು.