ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಸಂಸ್ಕಾರ ನೀಡುವುದವಶ್ಯ: ಮಣ್ಣೂರ
Children need to be given literary education at the primary level: Mannur
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಸಂಸ್ಕಾರ ನೀಡುವುದವಶ್ಯ: ಮಣ್ಣೂರ
ವಿಜಯಪುರ 02: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಾಹಿತ್ಯದ ಸಂಸ್ಕಾರ ನೀಡುವುದು ಅವಶ್ಯವಾಗಿದೆ. ಕವಿಗಳ ಕಾವ್ಯ ಕಥೆ ವಿವಿಧ ಸಾಹಿತ್ಯದ ಪ್ರಕಾರಗಳನ್ನು ಮಕ್ಕಳಿಂದಲೇ ಓದಿಸಿ ಚಿತ್ರ ತೆಗೆಸುವುದರ ಮೂಲಕ ಮಕ್ಕಳ ಮೇಲೆ ಕವಿಗಳ ಪ್ರಭಾವ ಬೀರಿ ಭವಿಷ್ಯದಲ್ಲಿ ಖ್ಯಾತ ಕವಿ ಸಾಹಿತಿಗಳಾಗ ಬಲ್ಲರು ವರಕವಿ ಬೇಂದ್ರೆ ಅವರ ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಮಾಸವನ್ನು ಸಂಭ್ರಮಿಸುವ ಹಾಡು ಸುಂದರವಾಗಿ ಮೂಡಿಬಂದಿದೆ ಎಂದು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ ಎಚ್ ಮಣ್ಣೂರ ನುಡಿದರು.
ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಕಾವ್ಯ ಸಂಭ್ರಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಕ್ಕಳೆ ರಚಿಸಿದ ಭಾವಚಿತ್ರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಖ್ಯಾತ ಕವಿಗಳ ಕವನ ವಾಚನ ಮಾಡಿದರು. ಮಕ್ಕಳಿಗೆ ನಿರಂತರವಾಗಿ ಸೃಜನಶೀಲ ಹಾಗೂ ರಚನಾತ್ಮಕ ಚಟುವಟಿಕೆ ಮಾಡಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ನುಡಿದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ ರಮೇಶ ಕೊಟ್ಯಾಳ ಶಾಲಾ ಪ್ರತಿನಿಧಿ ಕಾರ್ಯದರ್ಶಿ ಸಮರ್ಥ ಮಿರ್ಜಿ ವೈಷ್ಣವಿ ಹತ್ತಳ್ಳಿ ಬೋಧಕ ಬೋಧಕೇತರ ಸಿಬ್ಬಂದಿ ಪಾಲಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 