ಮಕ್ಕಳು ಹೋಳಿ ಹಬ್ಬ ಸಂಭ್ರಮ
Children celebrate Holi festival
ದಾಂಡೇಲಿ 04: ದಾಂಡೇಲಿ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಶಾಂತಿಯುವಾಗಿ ಆಚರಿಸಲಾಯಿತು. ದಾಂಡೇಲಿ ನಗರದ ವಿವಿಧ ಬಡಾವಣೆಗಳಲ್ಲಿ ಯುವ ಜನರಿಂದ ಹೋಳಿಯ ಹಿಂದಿನ ದಿನ ರಾತ್ರಿ ಕಾಮನ ದಹನ ನಡೆಸಿ, ದೇವರ ಮೆರವಣಿಗೆ ಮತ್ತು ಭಜನೆಗಳ ಮೂಲಕ ಸಂಪ್ರದಾಯಗಳ ಆಚರಣೆ ನಡೆಯಿತು. ಮರುದಿನ ವಿವಿಧ ಬಡಾವಣೆಗಳಲ್ಲಿ ಯುವಕರು, ಯುವತಿಯರು ಬೇದಭಾವವಿಲ್ಲದೆ ಬಣ್ಣವನ್ನು ಎರಚಿ ಸಂಭ್ರಮಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಗೌಳಿ ಸಮುದಾಯದವರು ಜನಪದ ವೇಷಧಾರಿಗಳಾಗಿ ಸಾಂಪ್ರದಾಯಿಕ ವೇಷ ಭೂಷಣಗಳೊಂದಿಗೆ ಭಕ್ತಿ -ಭಾವದೊಂದಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಭಜನೆ ಡೊಳ್ಳು ತಾಳದೊಂದಿಗೆ ಹಬ್ಬಕ್ಕೆ ಮೆರಗನ್ನು ತಂದರು. ಕೇವಲ ಬಣ್ಣಗಳ ಆಟವನ್ನು ಮಾತ್ರವಲ್ಲದೇ ಸಮುದಾಯದ ಐಕ್ಯತೆ ಮತ್ತು ದೇವರ ಭಕ್ತಿ ಹಾಗೂ ಪರಂಪರೆಯ ಆಚರಣೆಗಳ ಮಹತ್ವವನ್ನು ಸಾರುವಂತಹ ಕಾರ್ಯಕ್ರಮಗಳನ್ನು ನಡೆಸಿದರು. ಸ್ಥಳೀಯ ಜನಪದ ಕಲೆಗಳನ್ನು ಪ್ರದರ್ಶಿಸಿ ಹೋಳಿ ಹಬ್ಬಕ್ಕೆ ಮೆರಗನ್ನು ನೀಡಿದರು. ಒಂದುವಾರಗಳ ಕಾಲ ಇವರ ಆಚರಣೆ ಮುಂದುವರೆಯಲಿದೆ. ಹಬ್ಬಕ್ಕೆ ಪೋಲಿಸ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸೂಚಿಸಿದ ಸಲಹೆಗಳನ್ನು ಜನರು ಪಾಲಿಸಿದರು. ಯಾವುದೇ ರೀತಿಯ ಅಹಿತಕರೆ ಘಟನೆಗಳು ವರದಿಯಾಗಿಲ್ಲ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 