ಡ್ರಾಯಿಂಗ್ ಪರೀಕ್ಷೆಯಲ್ಲಿ ಮಕ್ಕಳ ಉತ್ತಮ ಸಾಧನೆ
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಸರಕಾರಿ ಪೌಢಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ನವೆಂಬರ 20 ರಿಂದ 22ರ ವರೆಗೆ ನಡೆಸಿದ 2024/25 ನೇ ಸಾಲಿನ ಲೋವರ್ - ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಕುಳಿತ ಲೋವರ್ ಗ್ರೇಡ್ ಒಟ್ಟು-08 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 06 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
1) 439 ಅಂಕ ಪಡೆದ ಬಸಯ್ಯ ಸೋ ಹಂಚಿನಾಳಮಠ
2) 434 ಅಂಕ ಪಡೆದ ರಾಧಿಕಾ ಮಠಪತಿಯ
3) 399 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು
ಶಬನಮ್ ಶಿಪಾ ಘಾಟಿ ಹಾಗೂ ಸುಮಾ ಮದಗುಣಕಿ ಅನುಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕ ಸಿಕಂದರ್ ಹೊಸಳ್ಳಿ ಅವರಿಗೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಹಾಗೂ ಸರ್ವ ಸದಸ್ಯರು, ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.