ಲೋಕದರ್ಶನ ವರದಿ
ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ (ತ್ವರಿತ ಬಸ್ ಸಾರಿಗೆ ವ್ಯವಸ್ಥೆ) ಯೋಜನೆಯಡಿ ಸಾರ್ವಜನಿಕರಿಗೆ ಶೀಘ್ರ, ಸುರಕ್ಷಿತ ಮತ್ತು ಸುಖಕರ ಪ್ರಯಾಣದ ಸೇವೆ ನೀಡುವ ಧ್ಯೇಯದೊಂದಿಗೆ 'ಚಿಗರಿ' ಬಸ್ಗಳ ಸಂಚಾರಕ್ಕಾಗಿ ಅವಳಿ ನಗರಗಳ ಮಧ್ಯ (ಹುಬ್ಬಳ್ಳಿಯ ಸಿ.ಬಿ.ಟಿ. ಯಿಂದ ಧಾರವಾಡದ ಮಿತ್ರ ಸಮಾಜದ ವರೆಗೆ) ಒಟ್ಟು 33 ಬಸ್ ನಿಲ್ದಾಣಗಳನ್ನು ನಿಮರ್ಿಸಲಾಗಿದ್ದು, ಚಿಗರಿ ಬಸ್ಗಳ ನಿರ್ವಹಣೆಗಾಗಿ ಹುಬ್ಬಳ್ಳಿ ಮತ್ತು ಧಾರವಾಡ ದಲ್ಲಿ ಪ್ರತ್ಯೇಕವಾಗಿ ಬಸ್ ಘಟಕ (ಃಣ ಆಜಠಿಠಣ) ಗಳನ್ನು ನಿಮರ್ಿಸಿದ್ದು ಅವುಗಳು ಸಮಾನಾರಂತರವಾಗಿ ಕಾರ್ಯನಿರ್ವಹಿಸಲಿವೆ.
ಈಗಾಗಲೇ ಪ್ರಾಯೋಗಿಕವಾಗಿ 20 ಬಸ್ಗಳ ಸಂಚಾರ ಪ್ರಾರಂಭಗೊಂಡು ದಿನಾಂಕ: 11-11-2018 ರಿಂದ ಒಟ್ಟು 45 ಬಸ್ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ. ಚಿಗರಿ ಬಸ್ಗಳ ಸಂಚಾರದಲ್ಲಿ '100 ಬಿ' ಮತ್ತು '200 ಎ', '200 ಸಿ' ಸೇವಾ ಮಾದರಿ ಬಸ್ಸುಗಳು ಮೂರು ವಿಧದಲ್ಲಿ ವಿಂಗಡಿಸಲಾಗಿದೆ.
'100 ಬಿ' ಸೇವಾಮಾದರಿ ತಡೆರಹಿತ ಬಸ್ಸುಗಳು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ ಧಾರವಾಡ ಮಿತ್ರ ಸಮಾಜದವರೆಗೆ
ರೈಲು ನಿಲ್ದಾಣ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಹೊಸೂರ ಕ್ರಾಸ್, ಕಿಮ್ಸ, ನವನಗರ, ಎಸ್ಡಿಎಂ ವೈದ್ಯಕೀಯ ಕಾಲೇಜು, ಟೋಲ್ನಾಕಾ, ಜುಬಿಲಿ ವೃತ್ತ ಮತ್ತು ಮಿತ್ರಸಮಾಜ ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಲಿವೆ.
'200 ಎ' ಸೇವಾಮಾದರಿ ಬಸ್ ನಿಲ್ದಾಣವಾರು ನಿಲುಗಡೆ ಬಸ್ಸುಗಳು ಹುಬ್ಬಳ್ಳಿಯ ಸಿ.ಬಿ.ಟಿ.ಯಿಂದ ಧಾರವಾಡ ಮಿತ್ರ ಸಮಾಜದವರೆಗೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮೂರೂ ಮಾದರಿಯ ಬಸ್ಗಳು ಚಿಗರಿ ಸಕರ್ಾರಿ ಬಸ್ಗಳಾಗಿದ್ದು ಮೂರು ಬಸಗಳಿಗೆ ಪ್ರಯಾಣಕ್ಕೆ ಅಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ದರಗಳನ್ನು ನಿಗದಿಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡದ ಮಧ್ಯ ಪ್ರತಿ ದಿನಕ್ಕೆ ಒಟ್ಟು 500 ಬಾರಿ ಸಂಚರಿಸಲಿವೆ. ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 9.30 ವರೆಗೆ ಸೇವೆ ಒದಗಿಸುತ್ತವೆ. ಅದರನ್ವಯ ಸಾರ್ವಜನಿಕರು ಚಿಗರಿ ಬಸ್ಗಳ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಲು ಮತ್ತು ಪೂರಕವಾಗಿ ಸಹಕರಿಸಲು ಹೆಡಿ.ಬಿ.ಅರ್.ಟಿ.ಎಸ್ ವ್ಯವಸ್ಥಾಪಕ ನಿದರ್ೇಶಕರು ಕೋರಿದ್ದಾರೆ.