ಬಾರದ ಮಳೆಯಿಂದ ಬೆಳೆದ ಕಡಲೆ ಈಳುವರಿ ಕುಂಟಿತ
Chickpea yield stunted due to lack of rain
ಬಾರದ ಮಳೆಯಿಂದ ಬೆಳೆದ ಕಡಲೆ ಈಳುವರಿ ಕುಂಟಿತ
ಯಲಬುರ್ಗಾ 14: ಈ ವರ್ಷದ ಮುಂಗಾರಿನಆರಂಭದಲ್ಲಿ ಸುರಿದಅಲ್ಪ ಮಳೆ ರೈತರಲ್ಲಿ ಮೂಡಿಸಿದ ಮಂದಹಾಸ ಬಹುಕಾಲ ಉಳಿಯಲಿಲ್ಲ, ನಂತರ ಸಕಾಲದಲ್ಲಿ ಮಳೆ ಸುರಿಯದಕಾರಣ ಮತ್ತೆರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ತಾಲ್ಲೂಕಿನ ಹೊಸಳ್ಳಿ ಚಿಕ್ಕೋಪ್ಪ, ಮುಧೋಳ, ಕರಮುಡಿ, ತೊಂಡಿಹಾಳ, ಬಂಡಿಹಾಳ, ಹಿರೇಮ್ಯಾಗೇರಿ, ಸಂಗನಾಳ, ಕಲ್ಲೂರು ಸೇರಿ ವಿವಿಧೆಡೆ ಹಿಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗಿದೆ. ಆದರೆ ಸಕಾಲಕ್ಕೆ ಮಳೆ ಆಗದೇತೇವಾಂಶಕೊರತೆ ಹಾಗೂ ಚಳಿಯ ಅಭಾವದಿಂದಕಡಲೆ ಬೆಳೆ ಇಳುವರಿ ಕುಸಿದಿದೆ.ಎಕರೆಗೆ 2 ಕ್ವಿಂಟಾಲ್: ಹೋಬಳಿಯ ಹಲವಡೆ ಹಿಂಗಾರು ಹಂಗಾಮಿನಲ್ಲಿಅಧಿಕ ಪ್ರಮಾಣದಲ್ಲಿಕಡಲೆ ಬೆಳೆಯಲಾಗಿದೆ.ಫಸಲಿನ ರಾಶಿ ಮಾಡುವಕಾರ್ಯ ಭರದಿಂದ ಸಾಗಿದ್ದರೂ ಇಳುವರಿ ಮಾತ್ರತೀವ್ರವಾಗಿ ಕುಸಿದಿದೆ. ಪ್ರತಿ ಬಾರಿ ಎಕರೆಗೆ 5ರಿಂದ 6 ಕ್ವಿಂಟಾಲ್ ಇಳುವರಿ ಬರುತ್ತಿತ್ತು.ಈ ಬಾರಿಎರಡುಕ್ವಿಂಟಾಲ್‌ದಾಟದಿರುವುದುರೈತರ ನಿದ್ದೆಗಡೆಸಿದೆ.ಹೆಚ್ಚು ಖರ್ಚು: ಕಪ್ಪು ಮಣ್ಣು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಕಡಲೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ಬೆಳೆಗೆ ಕೀಟಬಾಧೆ ಹೆಚ್ಚು.ಬಿತ್ತನೆ ಮಾಡಿ ಬೆಳೆಗೆ ಹೂ ಹಾಗೂ ಕಾಯಿ ಹಿಡಿಯವರೆಗೂ ಕೀಟಗಳಿಂದ ಸಂರಕ್ಷಿಸಲುಕೀಟನಾಶಕ ಸಿಂಪಡಿಸಬೇಕು.ಎಕರೆಗೆ ಕನಿಷ್ಠ 6 ರಿಂದ 7 ಸಾವಿರರೂ.ಖರ್ಚು ಮಾಡಬೇಕಾಗುತ್ತದೆ.ರಾಶಿ ಮಾಡಲು 8 ರಿಂದ 10 ಸಾವಿರರೂ.ಖರ್ಚಾಗುತ್ತದೆ.ಖರ್ಚು ಹೆಚ್ಚಾದರೂಎಕರೆಗೆ 2 ಕ್ವಿಂಟಾಲ್ ಇಳುವರಿ ಬಂದಿರುವುದು ನುಗ್ಗಲಾರದತುತ್ತಾಗಿ ಪರಿಣಮಿಸಿದೆ.ಕಳೆದ ಮೂರ್ನಾಲ್ಕು ವರ್ಷಗಳಿಂದ ಕಡಿಮೆ ಮಳೆ ಆಗುತ್ತಿದ್ದು, ಈ ವರ್ಷ ಮುಂಗಾರು, ಹಿಂಗಾರು ಮಳೆ ಇಲ್ಲದೆರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಿಂಗಾರು ಬೆಳೆಗೆ ಮಳೆಗಿಂತ ತೇವಾಂಶ ಮತ್ತು ಚಳಿ ಅಗತ್ಯ.ಈ ಬಾರಿಅದೂಕಡಿಮೆಯಾಗಿಕಡಲೆ ಬೆಳೆ ಇಳುವರಿ ಕುಸಿದಿದೆ. ಬಾಕ್ಸ್ ಸುದ್ದಿ ಹೋದ ವರ್ಷ ಒಳ್ಳೆ ಮಳೆಯಾಗಿತ್ತು ಚಲೋ ಬೆಳೆ ಬಂದಿತ್ತು ಈ ವರ್ಷನೂ ಮಳೆ ಸರಿಯಾಗಿ ಬೀಳಬಹುದೆಂಬ ಆಸೆಯಿಂದದುಬಾರಿ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತಿದ್ವೀ... ಆದ್ರೆ ಮಾರುದ್ದ ಬೆಳೆದು ನಿಂತಿದ್ದ ಬೆಳೆ ದಿನದಿಂದ ದಿನಕ್ಕೆ ಬಾಡಿ ಹೋಯ್ತಿರ್ರಿ ಮನಸ್ಸಿಗೆ ಬಾಳ ನೋವು ಆಗೈತ್ರಿ.ಸರ್ಕಾರಕೂಡಲೇ ನೆರವು ನೀಡಿದರೆಜೀವನಕ್ಕೆಒಂದುದಾರಿಆಕೈತ್ರಿ. ಽ ಸಂಗನಗೌಡ ಪಾಟೀಲ್‌ರೈತಚಿಕ್ಕೊಪ್ಪ
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 