ಚಿಕನ್ ಬಿರಿಯಾನಿ: ಭೋಜನ ಸವಿಯಲು ಮುಗಿಬಿದ್ದ ಸಾರ್ವಜನಿಕರು ರಾಜಕೀಯ ಧ್ರುವತಾರೆ ಮುಖ್ಯಮಂತ್ರಿಗಳು: ಪ್ರಕಾಶ್ ಕೋಳಿವಾಡ
Chicken Biryani: The public who are fed up with eating it, the Chief Minister is the political pole
ರಾಣೆಬೆನ್ನೂರು : 6 ಈ ನಾಡು ಕಂಡ ಪ್ರಭುದ್ಧ ರಾಜಕಾರಣಿ, ನಮ್ಮೆಲ್ಲರ ಹೆಮ್ಮೆಯ ನಾಯಕ ಎಸ್ ಸಿದ್ದರಾಮಯ್ಯನವರು. ಅವರ ದೂರದೃಷ್ಟಿ ನಮಗೆಲ್ಲರಿಗೂ ಮಾರ್ಗದರ್ಶನ. ಬಡವರ, ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ, ಜನಪರ ಸೇವಕ ನಮ್ಮ ನಾಯಕರು. ಪಂಚ ಗ್ಯಾರಂಟಿಗಳ ಮೂಲಕ, ಈ ನಾಡಿನ ಆರ್ಥಿಕ ಸಬಲತೆಗೆ ಕಾರಣರಾದ ಮಹಾನ್ ನಾಯಕ ಅವರಾಗಿದ್ದಾರೆ ಎಂದರು.
ದೇವರಾಜ ಅರಸು ನಂತರ ಅತಿ ಹೆಚ್ಚು ಕಾಲ ರಾಜಕೀಯ ರಂಗದಲ್ಲಿದ್ದು ಆಡಳಿತ ನಡೆಸಿದ ಅವರ ಮುತ್ಸದ್ದಿತನ ನಮ್ಮೆಲ್ಲರಿಗೂ ತುಂಬಾ ಸಂತೋಷ ನೀಡಿದೆ ಎಂದು ಕೋಳಿವಾಡ ರು ತಮ್ಮ ಹರ್ಷ ವ್ಯಕ್ತಪಡಿಸಿದರು.ರಾಜ್ಯದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು, ತಮ್ಮ ರಾಜಕೀಯ ಜೀವನ ಆಡಳಿತದಲ್ಲಿ,ಅಂದಿನ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು, ಅವರ ಸಮಾನತೆಯ ರೂಪದಲ್ಲಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ಮತ್ತು ಅಹಿಂದ್ ಮುಖಂಡರು, ಭಾರಿ ಭೋಜನ ಸಂತೋಷಕೂಟವನ್ನು ಏರಿ್ಡಸಿ, ಚಿಕನ್ ಬಿರಿಯಾನಿ, ವಿತರಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಕಳೆದ ಮೂರು ದಿವಸಗಳಿಂದ ಅಹಿಂದ್ ವತಿಯಿಂದ ಚಿಕನ್ ಬಿರಿಯಾನಿ ವಿತರಿಸುವ ಕುರಿತು ಸುದ್ದಿ ತಿಳಿದು ಭಾರಿ ಕುತೂಹಲ ಕೆರಳಿಸಿದ್ದ ಚಿಕನ್ ಖಾದ್ಯ ಪ್ರಿಯರಿಗೆ ಇಂದು ಮಂಗಳವಾರ ಅತೀ ಸಂತೋಷದ ದಿನವಾಗಿ ಮಾರ್ಪಟಟಿತ್ತು. ಮಂಗಳವಾರ 1 ಗಂಟೆಯಿಂದ ಆರಂಭವಾದ ಚಿಕನ್ ಬಿರಿಯಾನಿ ವಿತರಣಾ ಕಾರ್ಯವು, ಭಾರಿ ಜನ ಸಮುದಾಯ ನೆರೆದು, ನಾ ಮುಂದೆ, ತಾ ಮುಂದೆ ಎನ್ನುವಂತೆ ಟ್ರ್ಯಕ್ಟರ್ ಮುಂಭಾಗ ಮುಗಿಬಿದ್ದಿದ್ದರು. ಬಿಸಿ,ಬಿಸಿ ಚಿಕ್ಕನ್ ಬಿರಿಯಾನಿ ಸೇವಿಸಿದ ಅಭಿಮಾನಿಗಳು, ಸಾರ್ವಜನಿಕರು ಸಿದ್ದರಾಮಯ್ಯನವರ(7 ವರ್ಷ.239) ಆಡಳಿತಕ್ಕೆ, ಅವರ ಅಭಿಮಾನಿ ಬಳಗಕ್ಕೆ, ಆಯೋಜಿತ ಅಹಿಂದ ಸಮುದಾಯಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿ, ಸಿದ್ದರಾಮಯ್ಯನವರಿಗೆ ಜಯ ಘೋಷ ಮೊಳಗಿಸಿದರು.
ವಿತರಣಾ ಕಾರ್ಯದ ಮುಂಚೂಣಿಯಲ್ಲಿ ಅಹಿಂದ್ ಮುಖಂಡರಾದ, ರತ್ನಾಕರ ಕುಂದಾಪುರ, ಮೃತ್ಯುಂಜಯ ಗುದಗೇರ, ಷಣ್ಮುಖಪ್ಪ ಕಂಬಳಿ, ಏಕಾಂತ ಮುದಿಗೌಡರ, ದಿಳ್ಳೆಪ್ಪ ಕಟಗಿ, ಬಸವರಾಜ ಚಳಗೇರಿ, ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಬೇಡರ, ನಂದೀಶ್, ಕರಬಸಪ್ಪ ಕೂಲೇರ, ಸುರೇಶ್ ಜಾಡಮಾಲಿ, ಹನುಮಂತಪ್ಪ ಕಬ್ಬಾರ್, ಆನಂದ್ ಹುಲಬನ್ನಿ, ಬಸವರಾಜ ಬಿ.ಟಿ. ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 