ಛತ್ರಪತಿ ಶಿವಾಜಿ ಮಹಾರಾಜರ ಸ್ಥೈರ್ಯ,ಧೈರ್ಯ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು

Chhatrapati Shivaji Maharaj's bravery and courage should be adopted in us

ಛತ್ರಪತಿ ಶಿವಾಜಿ ಮಹಾರಾಜರ ಸ್ಥೈರ್ಯ,ಧೈರ್ಯ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು  

ಸವಣೂರ 19: ಛತ್ರಪತಿ ಶಿವಾಜಿ ಮಹಾರಾಜರ ಸ್ಥೈರ್ಯ,ಧೈರ್ಯ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಬದುಕನ್ನು ಮುನ್ನಡಿಸುವಂತಾಲಿ ಎಂದು ಮರಾಠ ಸಮಾಜದ ಮುಖಂಡರಾದ ಶಂಭಣ್ಣ ಆರೇರ ಹೇಳಿದರು. 

        ತಾಲ್ಲೂಕಿನ ಹಿರೇಮುಗದೂರ ಗ್ರಾಮದ   ವೀರಭದ್ರೇಶ್ವರ ದೇವಸ್ಥಾನದಲ್ಲಿ  ಮರಾಠ ಸಮಾಜ ಹಾಗೂ ಊರಿನವರ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿವಾಜಿ ಮಹಾರಾಜರು ಹಿಂದೂ ಧರ್ಮದ ಸಾಮ್ರಾಟರಾಗಿ ಎಲ್ಲರ ಹೃದಯ ಗೆದ್ದವರು.ಅವರ ಸಾಹಸ ಪ್ರವೃತ್ತಿ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದರು. 

        ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಸಾಹಸವನ್ನು ಇತಿಹಾಸದ ಪುಟಗಳಲ್ಲಿ ನಾವೆಲ್ಲರೂ ಓದಿದ್ದೇವೆ. ಅವರ ಸೇವೆ ಸದಾ ಸ್ಮರಣೀಯವಾಗಿದೆ.ಅವರ ಬದುಕು ನಮಗೆ ಪ್ರೇರಣೆಯಾಗಲಿ ಎಂದು ಅವರ ಜೀವನ ಚರಿತ್ರೆ ಬಗ್ಗೆ ತಿಳಿಸಿದರು.ನಂತರ ಗ್ರಾಮ ಪಂಚಾಯತಿಯಲ್ಲಿ   ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಣೆ ಮಾಡಲಾಯಿತು. 

          ಈ ಸಂದರ್ಭಗಳಲ್ಲಿ ಸಮಾಜದ ಮುಖಂಡರಾದ ಪರಶುರಾಮ ಆರೇರ,ಗುಡ್ಡಪ್ಪ ಆರೇರ, ರವಿ ಮರಾಠಿ,ಗ್ರಾಪಂ ಕಾರ್ಯದರ್ಶಿ ಹನಮಂತಪ್ಪ ಸಂಗೂರ,ಪುಷ್ಪಾ ಅಜಗಣ್ಣನವರ,ಕವಿತಾ ಸೋಮಸಾಗರ, ಮಲೋಜಿ ಆರೇರ,ಕವಿತಾ ಮರಾಠಿ,ರಾಜು,ನಾಗರಾಜ,ಭವಾನಿ,ರಮೇಶ, ಗೌರೀಶ.ಮಲ್ಲೇಶ,ಪುಟ್ಟು ಸೇರಿದಂತೆ ಮರಾಠ ಸಮಾಜದವರು,ಮಕ್ಕಳು ಹಾಗೂ ಇತರರು ಪಾಲ್ಗೊಂಡಿದ್ದರು.