ಜುಗೂಳ ಗ್ರಾಮದಲ್ಲಿ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ; ಗ್ರಾಮದ ವಿವಿಧೆಡೆ ಶಿವಾಜಿ ಮಹಾರಾಜರ ಭಾವಚಿತ್ರದ ಪೂಜೆ
ಕಾಗವಾಡ 19 : ತಾಲೂಕಿನ ಜುಗೂಳ ಗ್ರಾಮದಲ್ಲಿ ಬುಧವಾರ ದಿ. 19 ರಂದು ಶ್ರೀರಾಮ ಸೇನೆಯ ಕಾರ್ಯಕರ್ತರು, ಮರಾಠಾ ಸಮಾಜದವರು ಮತ್ತು ಜುಗೂಳ ಗ್ರಾಮಸ್ಥರಿದಿಂದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವಿಠ್ಠಲ ಮಂದಿರದಲ್ಲಿ ಮತ್ತು ಗಾಂಧಿ ಚೌಕ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ಆನಂದ ಖೋತ, ಮುಖಂಡರಾದ ಅಣ್ಣಾಸಾಬ ಪಾಟೀಲ, ಅರುಣ ಗಣೇಶವಾಡಿ ಅನೀಲ ಕಡೋಲೆ ಉಮೇಶ ಪಾಟೀಲ ತಾತ್ಯಾಸಾಬ ಪಾಟೀಲ ಸಿದಗೌಡಾ ಪಾಟೀಲ ಮನೋಹರ ಗಾಯಕವಾಡ ಶ್ರೀರಾಮ ಸೇನೆಯ ತಾಲೂಕಾ ಉಪಾಧ್ಯಕ್ಷ ರೋಹಿತ ಮೋಳೆ ಅಖಾಡ ಪ್ರಮುಖ ಅಕ್ಷಯ ಸುತಾರ ತಾಲೂಕಾ ಉಪ ಕಾರ್ಯದರ್ಶಿ ಅಕ್ಷಯ ಘುನಕೆ ಕಾರ್ಯರ್ತರಾದ ಅಭಿಷೇಕ ಹರೋಲಗೆ ಪ್ರವೀಣ ಘಟಗೆ ಪ್ರವೀಣ ಭಿರಡಿ ಮಹಾದೇವ ಪೂಜಾರಿ ಚೇತನ ಟಾಕವಡೆ ಪ್ರಥಮೇಶ ಚೌಗುಲೆ ಸಂತೋಶ ಅಂಬಿ ರಾಹುಲ ಗುರಗೋಳೆ ಉತ್ತಮ ಘುನಕೆ ಓಂಕಾರ ಬೆಳ್ಳಂಕಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.