ಲೋಕದರ್ಶನ ವರದಿ
ಶಿರಹಟ್ಟಿ 06: ರೈತರ ಶ್ರೇಯೋಭಿವೃದ್ಧಿಗಾಗಿ, ಅವರ ಆಥರ್ಿಕ ಜೀವನ ಸುಧಾರಣೆಗಾಗಿ ಮಳೆಯ ನೀರನ್ನೇ ಅವಲಂಬಿಸದೇ ಅಂತರ್ಜಲ ಮೂಲಕ ನೀರಾವರಿ ಮಾಡಿಕೊಂಡು ಜೀವನೋಪಾಯ ಮಾಡಬಹುದಾಗಿದೆ. ಅದಕ್ಕೆ ಚೆಕ್ ಡ್ಯಾಂ ನಿಮರ್ಾಣ ಮಾಡಿದರೆ ಅಂತರ್ಜಲ ಹೆಚ್ಚಾಗಲು ಸಾಧ್ಯವಾಗುತ್ತದೆ ಅದಕ್ಕಾಗಿ ಅಂತರ್ಜಲದ ಬಲವರ್ದನೆಗಾಗಿ ಚಕ್ ಡ್ಯಾಂ ಜೀವನಾಡಿಯಾಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ತಾಲೂಕಿನ ಹೆಬ್ಬಾಳ ಗ್ರಾಮದ ಹತ್ತಿರದ ಹಳ್ಳದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ 40 ಲಕ್ಷ ಮೊತ್ತದ ಚಕ್ ಡ್ಯಾಂ ನಿಮರ್ಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ತಾಲೂಕನಲ್ಲಿ ನೀರಾವರಿ ಕ್ಷೇತ್ರವನ್ನಾಗಿಸುವುದಕ್ಕಾಗಿ ಚಕ್ ಡ್ಯಾಂ ನಿಮರ್ಾಣ, ತುಂಗಭದ್ರಾ ನದಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದುಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಮುಂದಿನ ದಿನಮಾನದಲ್ಲಿ ರೈತರ ಹಿತ ಕಾಯುವುದಕ್ಕಾಗಿ ಸರ್ವ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವನಗೌಡ ಕಂಠಿಗೌಡ್ರ, ಶರಣಪ್ಪ ಬಾರಕೇರ, ಪ್ರಕಾಶಗೌಡ ತೆಗ್ಗಿನಮನಿ, ಮಹೇಶಗೌಡ ತೆಗ್ಗಿನಮನಿ, ಚನ್ನವೀರಪ್ಪ ತೆಗ್ಗಿನಮನಿ, ಎಫ್.ಎಸ್.ಕಾಶೀಮಠ. ವೀರಣ್ಣ ಹಳ್ಳದ ಮಂತಾದವರು ಉಪಸ್ಥಿತರಿದ್ದರು.