ಚಾರ್ಲ್ಸ್‌ ಬ್ಯಾಬೇಜ್ ಜನ್ಮದಿನದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನಾಚರಣೆ

Charles Babbage Birthday Celebration Computer Operator Day

ಚಾರ್ಲ್ಸ್‌ ಬ್ಯಾಬೇಜ್ ಜನ್ಮದಿನದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನಾಚರಣೆ  

ಮುಂಡರಗಿ27 : ಚಾರ್ಲ್ಸ್‌ ಬ್ಯಾಬೇಜ್ ಅವರು ಕಂಡುಹಿಡಿದ ಗಣಕಯಂತ್ರವು ದೊಡ್ಡ ಆವಿಷ್ಕಾರ. ಅಂತಹವರ ಜನ್ಮದಿನದ ಪ್ರಯುಕ್ತ ಗಣಕಯಂತ್ರ ನಿರ್ವಾಹಕರ ದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದು ತಾಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು. 

ಪಟ್ಟಣದ ತಾಪಂ ಸಭಾಂಗಣದಲ್ಲಿ ಚಾರ್ಲ್ಸ್‌ ಬ್ಯಾಬೇಜ್ ಜನ್ಮದಿನದ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತರಾಜ್ ವ್ಯವಸ್ಥೆಯಲ್ಲಿ ಗಣಕಯಂತ್ರ ನಿರ್ವಾಹಕರ ಕೊಡುಗೆ ಅಪಾರ. ಆಯಾ ಗ್ರಾಮ ಪಂಚಾಯತಿಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ಗಣಕಯಂತ್ರ ನಿರ್ವಾಹಕರ ಕೆಲಸದಿಂದ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು. 

ಈ ವೇಳೆ ಪಂಚಾಯತರಾಜ್ ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ, ತಾಪಂ ಸಿಬ್ಬಂದಿ, ಸಹಾಯಕ ಲೆಕ್ಕಾಧಿಕಾರಿ ಎ.ಜಗದೀಶ್, ಪಿಡಿಓ ಫಕ್ರುದ್ದೀನ ನದಾಫ್, ವಿಷಯ ನಿರ್ವಾಹಕ ಹುಸೇನಪೀರ ಕಾತರಕಿ, ಶಾಬುದ್ದೀನ್ ನದಾಫ, ಗ್ರಾಮ ಪಂಚಾಯತ ನೌಕರರ ಸಂಘದ ತಾಲೂಕು ಘಟಕದ ಮುಖಂಡ ಬಸವರಾಜ ಮೇವುಂಡಿ ಹಾಗೂ ಗಣಕಯಂತ್ರ ನಿರ್ವಾಹಕರು ಪಾಲ್ಗೊಂಡಿದ್ದರು.