ವಿಮಾನ ನಿಲ್ದಾಣಗಳಿಗೆ ಚನ್ನಮ್ಮ, ರಾಯಣ್ಣ ನಾಮಕರಣಕ್ಕೆ ಒತ್ತಾಯ

ಹುಬ್ಬಳ್ಳಿ-ಧಾರವಾಡ 29: ಗಂಡು ಮೆಟ್ಟಿದ ನಾಡಿನ, ಸ್ವಾತಂತ್ರ್ಯ ಹೋರಾಟಗಾರರು, ಅಪ್ಪಟ ದೇಶಪ್ರೇಮಿಗಳು, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕನ್ನಡದ ಕಣ್ಮಣಿಗಳಾದ ವೀರರಾಣಿ ಕಿತ್ತೂರಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾರತದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಇವರೀರ್ವರ ಹೆಸರುಗಳನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಲು ಈಗಾಗಲೇ ಅನೇಕ ಬಾರಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಈ ದಿಶೆಯಲ್ಲಿ ಬೆಳಗಾವಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮರ ಹೆಸರು, ಹಾಗೂ ಹುಬ್ಬಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ,

ಕರ್ನಾ ಟಕ ಕುರುಬ ನೌಕರರ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ನಿಂಗಪ್ಪ ಸವಣೂರ ಇವರ ನೇತ್ರತ್ವದಲ್ಲಿ, ದಿ. 28ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಶಿಫಾರಸ್ಸು ಮಾಡಲಾಗುವುದೆಂದು ಭರವಸೆಯಿತ್ತರು. ಸಂಘದ ಸಂಘಟನಾ ಕಾರ್ಯದಶರ್ಿ ಕುಮಾರ ಪಡೆಪ್ಪನವರ, ಸದಸ್ಯರಾದ ಬಸವರಾಜ ಪಾಟೀಲ, ಕೆ.ಎಫ್.ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.