ಯುವ ಸಮೂಹದಿಂದ ಬದಲಾವಣೆ ಸಾಧ್ಯ - ಸಿದ್ಧರಾಮಪ್ಪ ಭಟ್ಟರ್

ಯುವ ಸಮೂಹದಿಂದ ಬದಲಾವಣೆ ಸಾಧ್ಯ - ಸಿದ್ಧರಾಮಪ್ಪ ಭಟ್ಟರ್  Change is possible through the youth group - Siddaramappa Bhattar

ಕೊಪ್ಪಳ 22:  ಯುವ ಜನರಿಗೆ ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ನೀಡಿ ಪ್ರೋತ್ಸಾಹಿಸಿದಲ್ಲಿ ಕೇವಲ ಕುಟುಂಬ ಮಾತ್ರವಲ್ಲ, ಸಮಾಜದಲ್ಲಿಯೂ ನೀರೀಕ್ಷಿತ ಪ್ರಮಾಣದ ಬದಲಾವಣೆ ಸಾಧ್ಯವೆಂದು ಕೆರೆಹಳ್ಳಿ ಗ್ರಾಮದ ಹಿರಿಯ ಧುರೀಣರಾದ ಸಿದ್ದರಾಮಪ್ಪ ಭಟ್ಟರ್ ಅಭಿಪ್ರಾಯ ಪಟ್ಟರು.ಜಿಲ್ಲೆಯ ಕೆರೆಹಳ್ಳಿ ಗ್ರಾಮದೇವತೆ ಶ್ರೀ ಲಕ್ಕಮ್ಮ ದೇವಿಯ 9 ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಹಿರಿಯರಾದವರು ಯುವಜನತೆಗೆ ಜವಾಬ್ದಾರಿಗಳನ್ನು ನೀಡಬೇಕು. ಸೂಕ್ತ ಮಾರ್ಗದರ್ಶನದ ಜೊತೆಗೆ ಬೆಂಬಲವಾಗಿ ನಿಲ್ಲಬೇಕು. ಕೆರೆಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.

ಗ್ರಾಮದಲ್ಲಿ ಪೂರ್ವಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದ ಹಬ್ಬ, ಹರಿದಿನ, ಆಚರಣೆಗಳನ್ನು ಯುವಕರು ಸಮರ​‍್ಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಐತಿಹಾಸಿಕ ಲಕ್ಕಮ್ಮ ದೇವಿ ಜಾತ್ರೆಯ ಯಶಸ್ಸಿನಲ್ಲಿ ಯುವಕರ ಪಾತ್ರ ಬಹಳಷ್ಟು ಇದೆ. ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ನಮ್ಮ ಯುವಕರು ಮೈಗೂಡಿಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ ಎಂದರು.ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ​‍್ಪಟಟಿತ್ತು. ಪ್ರಾತಃಕಾಲದಿಂದಲೇ ಶ್ರೀ ಲಕ್ಕಮ್ಮದೇವಿಗೆ ಅಭಿಷೇಕ, ವಸ್ತೊ ಧಾರಣ, ಅಲಂಕಾರ, ದೀಪ, ಧೂಪಗಳನ್ನು ಬೆಳಗಿ ಅರ್ಚಿಸಲಾಯಿತು. ಕೆರೆಹಳ್ಳಿ ಗ್ರಾಮದ ಹಿರಿಯರ ನೇತೃತ್ವದಲ್ಲಿ ಸುಹಾಸಿನಿಯರಿಂದ ಕುಂಭ ಕಳಸ, ವಾದ್ಯ ಮೇಳಗಳೊಡನೆ ಗಂಗೆ ಗೆ ತೆರಳಿ, ಗ್ರಾಮದ ತುಂಬೆಲ್ಲ ಭವ್ಯ ಮೆರವಣಿಗೆ ನಡೆಸಲಾಯಿತು.  

ಲಕ್ಕಮ್ಮದೇವಿಯ ಭಾವಚಿತ್ರದ ಮೆರವಣಿಗೆಯುದ್ದಕ್ಕೂ ಭಕ್ತಿ ಇಮ್ಮಡಿಗೊಂಡು, ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು. ಮಹಾಮಂಗಳಾರತಿ ಬಳಿಕ ಸಾಮೂಹಿಕ ಭೋಜನ ವ್ಯವಸ್ಥೆ ಅಖಂಡವಾಗಿ ಜರುಗಿತು.ಸಂಜೆಯ ಹೊತ್ತು ದನಕನದೊಡ್ಡಿಯ ಗಾನಕೋಲಿಗೆ ಮೆಲೋಡಿಸ್ ಆರ್ಕೆಸಾೊ ಸೇರಿದಂತೆ ಹಲವು ಸಂಗೀತಗಾರರಿಂದ ಹಾಡು, ಮನರಂಜನೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಜನಪದ ವೈಭವ ವೀಕ್ಷಿಸಲು ಕೆರೆಹಳ್ಳಿ ಗ್ರಾಮದ ನೆರೆಹೊರೆಯ ಹತ್ತಾರು ಗ್ರಾಮಗಳ ಭಕ್ತರು, ಬೆಂಗಳೂರು ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಭಕ್ತರೂ ಈ ಜಾತ್ರೆಗೆ ಸಾಕ್ಷಿಯಾದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಡೀ ಗ್ರಾಮಸ್ಥರು ರಾತ್ರಿಯಿಡೀ ನೆರೆದಿದ್ದರು.

ಪ್ರತಿವರ್ಷ ಈ ರೀತಿಯ ಜಾತ್ರೆ ಆಚರಿಸುವ ಮೂಲಕ ಗ್ರಾಮದಲ್ಲಿ ಸೌಹಾರ್ದತೆ ವೃದ್ಧಿಗೊಳಿಸಲು ಪ್ರಜ್ಞಾವಂತರು ಶ್ರಮಿಸುತ್ತಿದ್ದಾರೆಂದು ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಗ್ರಾಮದ ಮುಖಂಡರಾದ ಲಕ್ಕಪ್ಪ ಶಿಳ್ಳೆಕ್ಯಾತರ್, ಮಲ್ಲಯ್ಯ ಉಡುಮಕಲ್, ಸುರೇಶ್ ಗಗ್ಗರಿ, ರಮೇಶ್ ಸಿಂದೋಗಿ, ಪರಸಪ್ಪ ಶಿಳ್ಳೆಕ್ಯಾತರ್, ಗುರುರಾಜ   ಕೆರಿ, ಬಸವರಾಜ ಆರೇರ, ಬಸವರಾಜ ಹೂಗಾರ, ಬೂದಗುಂಪಾ ಗ್ರಾಮದ ತಾ.ಪಂ.ಮಾಜಿ ಸದಸ್ಯರಾದ ಬಸವರಾಜ ಪೆದ್ಲರ್, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರುಗಳು, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು,   ಲಕ್ಕಮ್ಮ ದೇವಿ ದಾಸೋಹ ಸೇವಾ ಟ್ರಸ್ಟ್‌ ನ ಪದಾಧಿಕಾರಿಗಳು ಮತ್ತು ಯುವ ಧುರೀಣರಾದ ಶಿವಕುಮಾರ ದನದರ ಇನ್ನಿತರರು ಇದ್ದರು.