ಚಂದ್ರಶೇಖರ್ ತಾಳ್ಯ ಅವರಿಗೆ ಡಾ.ಪಂಡಿತಾರಾಧ್ಯ ಶ್ರೀಗಳ ಅಭಿನಂದನೆ
ಲೋಕದರ್ಶನ ವರದಿ
ಸಾಣೇಹಳ್ಳಿ29: ನಿನ್ನೆ ಸರಕಾರ ಬಿಡುಗಡೆಗೊಳಿಸಿದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿದೆವು. ಅವರಲ್ಲಿ ಅನೇಕರು ಪ್ರಚಾರ ಬಯಸದೆ ಎಲೆಮರೆಯ ಕಾಯಂತೆ ಕೆಲಸ ನಿರ್ವಹಿಸುತ್ತಿರುವವರು. ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವ ಸರಕಾರದ ನಡೆ ಅಭಿನಂದನೀಯ. ಅವರಲ್ಲಿ ಚಂದ್ರಶೇಖರ್ ತಾಳ್ಯ ಅವರು ಸಿರಿಗೆರೆಯಲ್ಲಿ ಪದವಿ ಮತ್ತು ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಓದುವಾಗ ನಮ್ಮ ಸಹಪಾಠಿಗಳಾಗಿದ್ದರು. ವಿದ್ಯಾಥರ್ಿ ದೆಸೆಯಿಂದಲೇ ಪ್ರತಿಭಾವಂತರೆಂದು ಗುರುತಿಸಿಕೊಂಡಿದ್ದರು. ಮುಂದೆ ಅವರು ನಮ್ಮ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ತರ್ಕಶಾಸ್ತ್ರದ ಉಪನ್ಯಾಸಕರಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ತಾಳ್ಯ ಅವರು ಉತ್ತಮ ವಾಗ್ಮಿಗಳಾಗಿರುವಂತೆ ಲೇಖಕರು, ವಿಮರ್ಶಕರು, ನಾಟಕಕಾರರು ಮತ್ತು ಕವಿಗಳೂ ಹೌದು. ಅವರಿಗೆ ಬಹಳ ಹಿಂದೆಯೇ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕಿತ್ತು. ಅದು ಈಗಲಾದರೂ ಸಂದಿರುವುದು ನಮಗೆ ಸಂತೋಷ ತಂದಿದೆ. ತಾಳ್ಯ ಅವರಿಗೆ ಅಭಿನಂದನೆಗಳು ಎಂದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 