ಚಿಕ್ಕೋಡಿ 09: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಶ್ವಮಾನ್ಯರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಮೆಚ್ಚಿ ಚಿಕ್ಕೋಡಿ ಕ್ಷೇತ್ರವನ್ನು ಬಿಜೆಪಿಗೆ ತಂದುಕೊಡುವ ಸಂಕಲ್ಪ ಮಾಡಬೇಕೆಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಬಸವಜ್ಯೋತಿ ಯುಥ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮತ್ತೊಮ್ಮೆ ಮೋದಿ-2019ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಹಾವಾಡಿಗರ ದೇಶ, ಕೊಳಗೇರಿ ದೇಶ, ಬಡವರ ದೇಶವೆಂತಲೇ ಪಟ್ಟಕಟ್ಟಿಕೊಂಡಿದ್ದ ಭಾರತದ ಕಳಂಕ ಕಳಚುವ ಕಾರ್ಯ ಪ್ರಧಾನಿ ನರೇಂದ್ರ ಮೋದಿಯಿಂದಾಗಿದೆ ಎಂದರು.
ಕೆಲ ಕೀಚಕರ ಕೈಯಲ್ಲಿ ಸಿಕ್ಕು ಭಾರತ ನಲುಗುತ್ತಲಿದೆ. ವಿಶ್ವ ಮೆಚ್ಚುವ ಸಂವಿಧಾನ ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರರು ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಆತ್ಮ ಗೌರವ ನಾಲ್ಕು ಕಂಬಗಳ ಮೇಲೆ ಈ ಸಂವಿಧಾನ ನಿಂತಿದ್ದು, ಆ ಸಂವಿಧಾನ ಇನ್ನು ಜಾರಿಯಾಗದೇ ಜನಸಾಮಾನ್ಯರು ದಬ್ಬಾಳಿಕೆಯಲ್ಲಿಯೇ ಬದುಕುತ್ತಿದ್ದಾರೆ. ದೇಶದ ಸುಭದ್ರತೆ, ದೇಶದ ಪ್ರಗತಿ ಅಭಿವೃದ್ಧಿಪರ ಚಿಂತನೆಗಳತ್ತ ಭಾರತವನ್ನು ಕೊಂಡೊಯ್ಯುವ ಬಿಜೆಪಿ ಪಕ್ಷಕ್ಕೆ ನಿಮ್ಮ ಮತ ನೀಡಿ ಮತ್ತೇ ಭಾರತವನ್ನು ವಿಶ್ವಗುರುವನ್ನಾಗಿಸಲು ಸಹಕರಿಸಬೇಕು ಎಂದರು.
ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬುದು ಕೇವಲ ದೇಶದ ಜನರ ಬಯಕೆಯಲ್ಲ. ವಿದೇಶದಲ್ಲಿಯೂ ಸಹ ಮೋದಿ ಅಲೆ ಪ್ರಾರಂಭವಾಗಿದೆ. ಪ್ರಧಾನಿಯಾಗುವ ಮುನ್ನ ಮೋದಿಯವರಿಗೆ ಅಮೇರಿಕ ದೇಶ ವೀಸಾ ಕೊಟ್ಟಿರಲಿಲ್ಲ. ಆದರೆ ಪ್ರಸ್ತುತ ಅದೇ ಅಮೇರಿಕ ಈಗ ರೆಡ್ ಕಾಪರ್ೆಟ್ ಹಾಕಿ ಸ್ವಾಗತ ನೀಡುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ನರೇಂದ್ರ ಮೋದಿ ದೇಶದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದಾರೆ ಎಂದರು.
ಬಸವಜ್ಯೋತಿ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಲಶುಗರ ನಿದರ್ೆಶಕ ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ, ಕಲ್ಲಪ್ಪಾ ಜಾಧವ, ಯುವ ಮೋಚರ್ಾ ಅದ್ಯಕ್ಷ ಚೇತನ ಪಾಟೀಲ, ಸಂಜಯ ಕವಟಗಿಮಠ, ಮಹೇಶ ನೂಲಿ, ಶಿವರಾಜ ಜೊಲ್ಲೆ, ಲಕ್ಷ್ಮಣ ಕಬಾಡೆ, ರಾಜು ಗುಂಡಕಲ್ಲೆ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಮೇಶ ಪಾಟೀಲ ನಿರೂಪಿಸಿ ವಂದಿಸಿದರು.