ಗ್ರಾಮ ಪಂ ಸದಸ್ಯರಿಗೆ ಬಿಳ್ಕೊಡುವ ಸಮಾರಂಭ
Ceremony to give the village council members a white coat
ಯಮಕನಮರಡಿ, 31 : ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಸರಕಾರದ ಆದೇಶದ ಮೇರೆಗೆ ಸದಸ್ಯತ್ವ ಮುಕ್ತಾಯಗೊಂಡಿದ್ದು ಸದರಿಯವರನ್ನು ಗ್ರಾಮ ಪಂಚಾಯಿತಿ ಪರವಾಗಿ ದಿನಾಂಕ 31ರಂದು ಬಿಳ್ಕೊಡುವ ಸಮಾರಂಭವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜನ ನಿರ್ಮಲ ಯೋಜನೆಯ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸತೀಶ್ ಜಾರಕಿಹೊಳಿಯವರ ಆಪ್ತ ಸಹಾಯಕರು ಆದ ಕಿರಣ್ ಸಿಂಗ್ ರಜಪೂತ್ ಅವರು ಆಗಮಿಸಿ ಮಾತನಾಡುತ್ತಾ ಐದು ವರ್ಷದ ಅವಧಿಯಲ್ಲಿ ಎಲ್ಲಾ ಸದಸ್ಯರ ಬೆಂಬಲದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಅಲ್ಲದೆ ಶಾಲಾ ಕಟ್ಟಡಗಳು ಗ್ರಂಥಾಲಯ ಇತ್ಯಾದಿ ಗ್ರಾಮದ ಪ್ರಮುಖ ಗಲ್ಲಿಗಳಲ್ಲಿ ಕಾಮಗಾರಿ ಮಾಡಲಾಗಿದೆ ಉಳಿದ ಕಾಮಗಾರಿಗಳನ್ನು ಮಾಡುವ ಕೆಲಸ ಪ್ರಾರಂಭವಿದ್ದು ನಿಮ್ಮೆಲ್ಲರ ಬೆಂಬಲದಿಂದ ಕರ್ನಾಟಕ ಸರ್ಕಾರದಿಂದ ಗಾಂಧಿ ಪುರಸ್ಕಾರ ದೊರಕಿದ್ದು ತಮಗೂ ನಮಗೂ ಗ್ರಾಮದ ಮತದಾರರಿಗೂ ಹೆಮ್ಮೆಪಡುವ ಸಂಗತಿಯಾಗಿದೆ ಅಲ್ಲದೆ ಸತೀಶ್ ಜಾರಕಿಹೊಳಿ ಅವರ ಮಾರಕ ದರ್ಶನದಲ್ಲಿ ನಾವೆಲ್ಲರೂ ನಡೆದುಕೊಂಡು ಬಂದಿರುವುದೊಂದು ಹೆಮ್ಮೆಯ ಸಂಗತಿ ಆಗಿದೆ ಎಂದು ಹೇಳಿದರು.
ಗ್ರಾಮ ಪಂ ಅಭಿವೃದ್ಧಿ ಅಧಿಕಾರಿಗಳು ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ತಮ್ಮ ಸಹಕಾರ ನಮಗೆ ಕೆಲಸಗಳನ್ನು ಮಾಡಲು ಬಹಳಷ್ಟು ಅನುಕೂಲತೆ ದೊರೆತಂತಾಗಿದೆ ಗ್ರಾಮದಲ್ಲಿ ಸ್ವಚ್ಛತೆ ಕ್ರಮಗಳನ್ನು ಕೈಕೊಳ್ಳಲಾಗಿದೆ ಇನ್ನು ಕೆಲವರು ಶೌಚಾಲಯಗಳನ್ನು ನಿರ್ಮಿಸಿ ಸಂಪೂರ್ಣ ಸ್ವಚ್ಛ ಗ್ರಾಮ ವನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಜೊತೆಗೆ ಗ್ರಾಮದ ಜನರಲ್ಲಿ ಕುಡಿಯುವ ನೀರನ್ನು ಸಮರ್ಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲ ಸದಸ್ಯರಿಗೆ ಪದಾಧಿಕಾರಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು ಪ್ರಾರಂಭದಲ್ಲಿ ಶಾಂತಕುಮಾರ್ ಮೊಲಾಜಿ ಸಂತೋಷ್ ರಾವಳ ಅವರು ಸದಸ್ಯ ರನ್ನು ಸ್ವಾಗತಿಸಿದರು ಅದರಂತೆ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 