ಸಿರಿಧಾನ್ಯಗಳು ನಮ್ಮ ಜೀವ ರಕ್ಷಕ: ಶ್ರೀ ವೆಂಕಟೇಶ್ ಬಡಿಗೇರ್
Cereals are our lifesaver: Shri Venkatesh Badiger
ಹೊಸಪೇಟೆ 28: ಸಿರಿಧಾನ್ಯಗಳು ಬಂಗಾರಕ್ಕಿಂತಲೂ ಹೇಳಬಾರದು ಮೌಲ್ಯಯುತವಾದುದು. ಅದಕ್ಕಾಗಿ ನಮ್ಮಲ್ಲಿ ಏನೇ ಸಂಪತ್ತಿದ್ದರು ಆರೋಗ್ಯ ಸಂಪತ್ತು ಇಲ್ಲದಿದ್ದರೆ ಎಲ್ಲವೂ ಶೂನ್ಯ ಆವರಿಸುತ್ತದೆ. ರಾಗಿ ಜೋಳ ಸಜ್ಜೆ ಸಾಮೆ. ಕೊರಲು. ಊದಲು. ನವಣೆ. ಇನ್ನು ಮುಂತಾದ ಸಿರಿಧಾನ್ಯಗಳು ನಮ್ಮ ಬದುಕನ್ನು ಮುನ್ನಡೆಸುವ ಆರೋಗ್ಯ ದಲ್ಲಿ ಅದ್ಭುತ ಪರಿಣಾಮ ಉಂಟು ಮಾಡುವ ದಿವ್ಯ ಓಷಧ ಇದಾಗಿದೆ ಇದರಲ್ಲಿ ಕ್ಯಾನ್ಸರ್ ಕಾಯಿಲೆ ಹಾಗೂ ಬೊಜ್ಜು ಸಕ್ಕರೆ ಕಾಯಿಲೆ ನರಗಳ ದೌರ್ಬಲ್ಯ ದೇಹದ ಕಾಂತಿ ಅಪೌಷ್ಟಿಕತೆಯನ್ನು ಹೊಡೆದೋಡಿಸುವ ದೃಢತೆ ಹಾಗೂ ಸರ್ವಾಂಗಿಣ ಆರೋಗ್ಯಕ್ಕೆ ಅದ್ಭುತವಾದ ಬಾಣವಾಗಿದೆ. ಇಂತಹ ಧಾನ್ಯಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ದೀರ್ಘಾಯುಷ್ಯ ಪಡೆಯಬಹುದು ಎಂದು ವೆಂಕಟೇಶ ಬಡಿಗೇರ್ ಹೇಳಿದರು.
ಅವರು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಘ ವತಿಯಿಂದ ಹೊಸಪೇಟೆಯ ಶಂಕರ ಮಠದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ಕುರಿತು ಸುದೀರ್ಘವಾದ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳು ಹಾಗೂ ಕೃಷಿ ಯೋಜನಾ ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 