ಏಪ್ರಿಲ್ 1 ರಿಂದ ಜನಗಣತಿ ; ಸ್ಪಷ್ಟ ಮತ್ತು ನಿರ್ದಿಷ್ಟ ಮಾಹಿತಿ ಒದಗಿಸಿ : ಜಿಲ್ಲಾಧಿಕಾರಿ ಬಾಲಕೃಷ್ಣ

ಏಪ್ರಿಲ್ 1 ರಿಂದ ಜನಗಣತಿ ; ಸ್ಪಷ್ಟ ಮತ್ತು ನಿರ್ದಿಷ್ಟ ಮಾಹಿತಿ ಒದಗಿಸಿ :  ಜಿಲ್ಲಾಧಿಕಾರಿ ಬಾಲಕೃಷ್ಣ  Census from April 1; Provide clear and specific information: Deputy Commissioner Balakrishna

ವಿಜಯನಗರ (ಹೊಸಪೇಟೆ), ಮಾ.9 : ದೇಶಾದ್ಯಂತ ಏಪ್ರಿಲ್ 1 ರಿಂದ ಮೇ.15ರವರೆಗೆ ಜನಗಣತಿ ಕಾರ್ಯ ನಡೆಯಲಿದ್ದು, ಅಧಿಕಾರಿಗಳು ನಿಖರ ಮತ್ತು ಸ್ಪಷ್ಟ ಮಾಹಿತಿಯನ್ನು ಸಂಗ್ರಹಿಸಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ 2027ರ ಭಾರತ ಜನಗಣತಿಯ ಅಂಗವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಚಾರ್ಚ್‌ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗೆ 3 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಗಣತಿ ಮೊದಲ ಬಾರಿ 1872ರಲ್ಲಿ ಆರಂಭಿಸಲಾಗಿದ್ದು, ಈ ವರೆಗೆ ಒಟ್ಟು 15 ಜನಗಣತಿಗಳಾಗಿವೆ. ಸ್ವತಂತ್ರ ನಂತರದಲ್ಲಿ 8 ಜನಗಣತಿ ನಡೆಸಲಾಗಿದೆ. ಈ ಹಿಂದೆ 2011ರಲ್ಲಿ ಜನಗಣತಿ ಕಾರ್ಯ ನಡೆಸಲಾಗಿದೆ. ಅದರಂತೆ 2021ರಲ್ಲಿ ಜನಗಣತಿ ಕಾರ್ಯ ವಿವಿಧ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಅದಕ್ಕೆ ಪೂರಕವಾಗಿ ಜಿಲ್ಲೆಯ ನಗರ, ತಾಲೂಕು, ಅದರಲ್ಲೀ ಗ್ರಾಮೀಣ ಪ್ರದೇಶಗಳಲ್ಲಿ ನಿಖರ ಮತ್ತು ಸ್ಪಷ್ಟವಾದ ದತ್ತಂಶದೊಂದಿಗೆ ಮಾಹಿತಿ ನೀಡಬೇಕು ಎಂದರು.  

ದೇಶವು ಭೌಗೋಳಿಕ, ಸಾಮಾಜಿಕ ಮತ್ತು ಪ್ರಾದೇಶಿಕವಾಗಿ ಭಿನ್ನವಾಗಿದೆ. ಜನಗಣತಿ ಕಾರ್ಯ ದೇಶದ ಪ್ರಗತಿಗೆ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಗಣತಿದಾರರು ಸೇರಿ ಸರಿಯಾದ ಮಾಹಿತಿಯನ್ನಾಧಾರಿತ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ. ದೇಶದಾದ್ಯಂತ ಇದೇ ​‍್ರ​‍್ರಥಮ ಬಾರಿಗೆ 2027ರ ಜನಗಣತಿಯು ಮೊಬೈಲ್ ಆಪ್ ಮೂಲಕ ಡಿಜಿಟಲ್ ಮೊಡ್ ನಲ್ಲಿ ನಡೆಯಲಿದೆ. ಆದ್ದರಿಂದ ಅಧಿಕಾರಿಗಳು ನಿಖರ ಮತ್ತು ಸ್ಪಷ್ಟವಾಗಿ ಪಾರದರ್ಶಕತೆ ದತ್ತಾಂಶ ಸಂಗ್ರಹಿಸಬೇಕು.

ಗಣತಿ ಕಾರ್ಯಕ್ಕೆ ಎಣಿಕೆದಾರರು, ಮೇಲ್ವಿಚಾರಕರನ್ನು ಗ್ರಾಮೀಣ ಭಾಗಕ್ಕೆ 6, ನಗರ ಭಾಗದಲ್ಲಿ 8 ಅಧಿಕಾರಿಗಳನ್ನು ನೇಮಿಸಲಾಗಿದೆ. ಗಣತಿ ಕಾರ್ಯದ ವೇಳೆ ಗೊಂದಲಗಳು ಉಂಟಾದಲ್ಲಿ ಮೇಲ್ವಿಚಾರನ್ನು ಅಥವಾ ಮೇಲಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಈ ವೇಳೆ ತಹಸೀಲ್ದಾರ್ ಶೃತಿ ಎಂ, ಸಿಪಿಒ ಅನ್ನದಾನಯ್ಯ, ನಗರಸಭೆ ಪೌರಾಯುಕ್ತ ಶಿವಕುಮಾರ್ ಎರಗುಡಿ ಹಾಗೂ ಕಾರ್ಯಗಾರ ನಿರೂಪಕರು ಮ್ಯಾಥ್ಯು ಹಾಗೂ ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.