ತಾಲೂಕಾಡಳಿತದಿಂದ ಸಂತ ಸೇವಾಲಾಲರ ಜಯಂತಿ ಆಚರಣೆ
ತಾಳಿಕೋಟಿ 15: ತಾಲೂಕ ಆಡಳಿತದ ವತಿಯಿಂದ ಲಂಬಾಣಿ ಸಮಾಜದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲರ 285ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಸೇವಾಲಾಲರ ಈ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಇವರು ಸೇವಾಲಾಲ್ ಸಮಾಜದವರ ಜೊತೆಗೂಡಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ದೇಸು ಪೂಜಾರಿ ಮಾತನಾಡಿ ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರುವಾಸಿಯಾದ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ತಟ್ಟಿದರು. ಜನದಂಬೆಯ ಆರಾಧಕರಾಗಿ ಇಡೀ ಜೀವನ ದುದ್ದಕ್ಕೂ ಬ್ರಹ್ಮಚರ್ಯವನ್ನು ಪಾಲನೆ ಮಾಡಿ ಎಲ್ಲರ ಮನದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. ಸೇವಾಲಾಲರು ಸತ್ಯ, ಅಂಹಿಸೆ ಮತ್ತು ತ್ಯಾಗ ಮನೋಭಾವದ ಮೌಲ್ಯಗಳನ್ನು ತಿಳಿಸಿಕೊಟ್ಟರು. ಅವರ ಆದರ್ಶ ಬದುಕನ್ನು ನಾವೆಲ್ಲರೂ ಅನುಸರಿಸುವ ಅಗತ್ಯವಿದೆ. ಸೇವಾಲಾಲ್ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು ವಿದ್ಯಾವಂತರನ್ನಾಗಿ ಮಾಡಬೇಕು. ಶಿಕ್ಷಣದಿಂದಲೇ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು. ಸಿ.ಆರಿ್ಸ. ಎಸ್.ಎಂ.ಪಾಲ್ಕಿ ಸಂತ ಸೇವಾಲಾಲ್ ಅವರ ಜೀವನ ಸಂದೇಶ ಕುರಿತು ಮಾತನಾಡಿದರು. ಸೇವಾಲಾಲ್ ಸಮಾಜದ ಅಧ್ಯಕ್ಷ ಶಂಕರ ಚೌವಾಣ, ಸಿರಸ್ತೆದಾರ ಜೆ.ಆರ್.ಜೈನಾಪೂರ, ಮುನ್ನಾ ಅತ್ತಾರ, ಸೇವಾಲಾಲ್ ಸಮಾಜದ ಗಣ್ಯರು ಹಿರಿಯರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.