ಧಾರವಾಡ 04: ಇಲ್ಲಿನ ಉಚ್ಛ ನ್ಯಾಯಾಲಯ ಪೀಠ, ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಉಚ್ಛ ನ್ಯಾಯಾಲಯ ವಕೀಲರ ಸಂಘ, ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜೂನ್ 4 ರಂದು ಸಂಜೆ 5:15 ಘಂಟೆಗೆ, ಧಾರವಾಡ ಉಚ್ಛ ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಮುಖಾಂತರ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನ್ಯಾಯಮೂತರ್ಿಗಳಾದ ಬಿ.ಎ.ಪಾಟೀಲ ಅವರು ಸಸಿ ನೆಡುವುದರ ಮುಖಾಂತರ ಪರಿಸರ ದಿನಾಚರಣೆಗೆ ಚಾಲನೆ ಕೊಟ್ಟರು.
ನ್ಯಾಯಮೂತರ್ಿಗಳಾದ ಎಸ್.ಜಿ.ಪಂಡಿತ್, ಪಿ.ಜಿ.ಎಮ್.ಪಾಟೀಲ ಹಾಗೂ ಎ.ಎಸ್.ಬೆಳ್ಳುಂಕೆ ಹೈಕೋರ್ಟ ವಕೀಲರ ಸಂಘದ ಅಧ್ಯಕ್ಷರಾದ ಸಿ.ಎಸ್.ಪಾಟೀಲ ಮತ್ತು ಪದಾಧಿಕಾರಿಗಳು ಸಹ ಸಸಿಗಳನ್ನು ನೆಟ್ಟರು.
ಧಾರವಾಡ ಕನರ್ಾಟಕ ಉಚ್ಛ ನ್ಯಾಯಾಲಯ ಪೀಠದ ಪ್ರಭಾರ ಅಧಿಕ ಮಹಾವಿಲೇಖನಾಧಿಕಾರಿಗಳಾದ ಎಸ್.ಎಮ್.ಜಾಲವಾದಿ ಹಾಗೂ ಅಡಳಿತ ಅಧಿಕ ಮಹಾವಿಲೇಖನಾಧಿಕಾರಿಗಳಾದ ಎಸ್.ಎನ್.ಕಿಣಿ ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಪ್ರಭಾರ ಸದಸ್ಯ ಕಾರ್ಯದಶರ್ಿಗಳಾದ ಚಿನ್ನಣ್ಣವರ ಆರ್.ಎಸ್, ಹೈಕೋರ್ಟ ವಕೀಲರುಗಳು, ಸಕರ್ಾರಿ ವಕೀಲರುಗಳು ಹಾಗೂ ಉಚ್ಛ ನ್ಯಾಯಾಲಯ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯ ಸಿಬ್ಬಂದಿ, ತೋಟಗಾರಿಕಾ ಇಲಾಖೆ ಸಿಬ್ಬಂದಿ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹಾಗೂ ಇತರರು ಸಸಿಗಳನ್ನು ನೆಡುವುದರ ಮುಖಾಂತರ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಾವು, ನೇರಳೆ, ಹಲಸು, ಸಿಭೆ, ಸಂಪಿಗೆ, ಅತ್ತಿ ಮತ್ತಿತರ ನಾನಾ ಬಗೆಯ ಸಸಿಗಳನ್ನು ನೆಡಲಾಯಿತು.